ವಿಧಾನ ಪರಿಷತ್: ಬಿಬಿಎಂಪಿ ವಿಭಜನೆಯ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ ಸಂಬಂಧ ಗುರುವಾರ ಮೇಲ್ಮನೆಯಲ್ಲಿ ದಿನವಿಡೀ ನಡೆದ ಸುದೀರ್ಘ ಚರ್ಚೆ ಯಾವುದೇ ಫಲ ಕಾಣಲಿಲ್ಲ. ಪರಿಷತ್ತಿನಲ್ಲಿ ಸದನ ಆರಂಭವಾಗುವ ಮುನ್ನವೇ ಪ್ರತಿಪಕ್ಷಗಳು ಸಭಾಪತಿ ಡಿ. ಎಚ್.ಶಂಕರಮೂರ್ತಿ ಅವರ ಮುಂದೆ ಪರಿಶೀಲನಾ ಸಮಿತಿಗಾಗಿ ವಿನಂತಿ ಮಂಡಿಸಿದವು. ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹಾಗೂ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಸಭಾಪತಿಯನ್ನುಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ವಿಧಾನಪರಿಷತ್ತಿನ ಕಾರ್ಯ ವಿಧಾನ ಮತ್ತು ನಡವಳಿಕೆಯ ನಿಯಮ 116ರ ಅನ್ವಯ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕವನ್ನು ಸದನದ ಪರಿಶೀಲನಾ ಸಮಿತಿಗೆ ಒಪ್ಪಿಸುತ್ತೇವೆ. ಇದಕ್ಕೆ ಅವಕಾಶ ನೀಡಬೇಕೆಂದು ಕೋರಲಾಯಿತು. ಇದನ್ನು ಸ್ವೀಕರಿಸಿದ ಸಭಾಪತಿ, ಸದನದಲ್ಲಿ ವಿಧೇಯಕದ ಮೇಲೆ ಚರ್ಚೆಯಬಳಿಕ ಪರಿಶೀಲಿಸುವ ಭರವಸೆ ನೀಡಿದರು ಈ ಮಾಹಿತಿ ತಿಳಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದ ನಿಯೋಗ ಸಭಾಪತಿಯವರನ್ನು ಭೇಟಿ ಮಾಡಿ ಆಕ್ಷೇಪ ವ್ಯಕ್ತಪಡಿಸಿತು. `ಸದನದ ಪರಿಶೀಲನಾ
ಸಮಿತಿ ರಚನೆ ವಿಚಾರ ವಿಧಾನಮಂಡಲ ಇತಿಹಾಸದಲ್ಲೇ ಹೊಸದು. ಇದಕ್ಕೆ ಅವಕಾಶ ನೀಡಿದರೆ, ರಾಜ್ಯ ವಿಧಾನಮಂಡಲಇತಿಹಾಸದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ
ಹಾಡಿದಂತಾಗುತ್ತದೆ. ಆದ್ದರಿಂದ ಇದಕ್ಕೆ ಅವಕಾಶ ನೀಡಬಾರದು' ಎಂದು ಸಿಎಂ ಮನವಿ ಮಾಡಿದರು.
ಫಲ ನೀಡದ ಸಭೆ: ಆನಂತರ ಸಭಾಪತಿ ಶಂಕರಮೂರ್ತಿ ತಮ್ಮ ಕೊಠಡಿಯಲ್ಲೇ ಮುಖ್ಯಮಂತ್ರಿ ನೇತೃತ್ವದ ನಿಯೋಗ ಮತ್ತು ಪ್ರತಿಪಕ್ಷ ನಾಯಕರ ಸಭೆ ನಡೆಸಿ
ದರು. ಸುಮಾರು ಒಂದು ತಾಸು ಚರ್ಚೆ ನಡೆಯಿತು. ಆಗಲೂ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಈಶ್ವರಪ್ಪ ಮತ್ತು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ
ಅವರನ್ನು ಪರಿಶೀಲನಾ ಸಮಿತಿ ಪ್ರಸ್ತಾಪ ಮಾಡದಂತೆ ಕೋರಿದರು. ಆದರೆ ಇದನ್ನು ಪ್ರತಿಪಕ್ಷ ನಾಯಕರಿಬ್ಬರೂ ಸಾರಾಸಗಟಾಗಿ ತಳ್ಳಿ ಹಾಕಿದರು. ಪ್ರತಿಪಕ್ಷ ನಾಯಕ ಈಶ್ವರಪ್ಪ, ಪರಿಶೀಲನಾ ಸಮಿತಿಗೆ ಕೇಳಿದ್ದೇವೆ.
ಅದರಂತೆ ಚರ್ಚೆ ನಡೆದು ಸಮಿತಿ ರಚನೆಯಾಗಲಿ. ಆನಂತರ ವಿಭಜನೆ ಬೇಕೇ, ಬೇಡವೇ ಎಂಬುದನ್ನು ನಿರ್ಧರಿಸೋಣಎಂದರು. ಅದೇ ರೀತಿ ಹೊರಟ್ಟಿ, `ಪರಿ ಶೀಲನಾ ಸಮಿತಿ ಬೇಕೆನ್ನುವುದು ನನ್ನೊಬ್ಬನ ನಿರ್ಧಾರವಲ್ಲ. ಇದು ಪಕ್ಷದ ನಿರ್ಧಾರ.ಆದ್ದರಿಂದ ಈ ವಿಚಾರದಲ್ಲಿ ನಾವು ಹಿಂದೆಸರಿಯುವುದಿಲ್ಲ ಎಂದರು. ಕೊನೆಗೆ ಸಿದ್ದರಾಮಯ್ಯ, ಪರಿಶೀಲನಾ ಸಮಿತಿಗೆನಿಮಯಗಳಲ್ಲಿ ಅವಕಾಶ ಇಲ್ಲ ಎಂದುವಾದಿಸುತ್ತಾ, ಸದನಕ್ಕೆ ಬಂದು ಕುಳಿತರು.
ಶಾಸಕರ ಕೌತುಕ
ಸದನ ಆರಂಭವಾಗುತ್ತಿದ್ದಂತೆ ಸದನ ಎಲ್ಲ ಸದಸ್ಯರಿಂದ ಕಿಕ್ಕಿರಿದಿತ್ತು. ಅಲ್ಲದೆ,ಅಧಿಕಾರಿಗಳು ಮತ್ತು ಮಾಧ್ಯಮಗಳ ಗ್ಯಾಲರಿಯೂ ತುಂಬಿ ತುಳುಕಿತ್ತು. ಅಷ್ಟೇ ಏಕೆ?
ವಿಧೇಯಕ ಏನಾಗುತ್ತದೆ ಎಂದು ತಿಳಿಯಲು ವಿಧಾನಸಭೆಯಿಂದ ಅನೇಕ ಶಾಸಕರೂ ಪರಿಷತ್ತಿನ ಮೊಗಸಾಲೆಯಲ್ಲಿ ಕಾತರದಿಂದ ಕಾಯುತ್ತಿದ್ದರು. ಏಕೆಂದರೆ, ಪರಿಷತ್ತಿನಲ್ಲಿ
ಚರ್ಚೆಸಿ ವಿಧಾನಸಭೆಗೆ ಕಳುಹಿಸಬೇಕಿದ್ದರಿಂದ ವಿಧಾನಸಭೆಯಲ್ಲಿಯೂ ವಿಧೇಯಕದ ಬಗ್ಗೆ ತೀವ್ರ ಕುತೂಹಲ. ಹೀಗಾಗಿ ವಿಧಾನಸಭಾ ಸದಸ್ಯರು ಅಲ್ಲಿನ ಕಲಾಪಗಳನ್ನೂ
ಬಿಟ್ಟು ಪರಿಷತ್ ಮೊಗಸಾಲೆಯಲ್ಲಿ ಅಡ್ಡಾಡಿದರು. ಅದರಲ್ಲೂ ಬೆಂಗಳೂರು ಶಾಸಕರಾದ ವಿಜಯಕುಮಾರ್, ಮುನಿರಾಜು ಸೇರಿದಂತೆ ಅನೇಕ ಶಾಸಕರು ಪರಿಷತ್‍ನಲ್ಲಿ
ವಿಧೇಯಕ ಏನಾಗುತ್ತದೆ ಎಂದು ನಿರೀಕ್ಷಿಸುತ್ತಾ ಕುಳಿತಿದ್ದರು. ಆದರೆ, ಸದನ ಆರಂಭವಾಗಿ ಸಭಾಪತಿ ಅವರು, ವಿಧೇಯಕದ ಮೇಲಿನ ಚರ್ಚೆಗೆ ಅವಕಾಶ ನೀಡಿದ್ದರಿಂದ ವಿಧೇಯಕ ದಿನವಿಡೀ ಚರ್ಚೆಯಲ್ಲೇ ನಿರತವಾಯಿತು. ಅಂತಿಮವಾಗಿ ಸಭಾಪತಿ ಶಂಕರಮೂರ್ತಿ ಕಲಾಪನ್ನು ಸೋಮವಾರಕ್ಕೆ ಮುಂದೂಡಿದ್ದರಿಂದ ವಿಧೇಯಕ ಪ್ರತಿಪಕ್ಷಗಳ ಪರಿಶೀಲನಾ ಸಮಿತಿ ಆಸ್ತ್ರಉದೊಂದಿಗೆ ಆತಂಕಕ್ಕೆ ಸಿಲುಕಿತು.