ಬಿಬಿಎಂಪಿ 
ರಾಜಕೀಯ

58 ಅಧಿಕಾರಿಗಳಿಗೆ ವೇತನ ಕಡಿತ

ಬಿಬಿಎಂಪಿ ಕಚೇರಿಗೆ ತಡವಾಗಿ ಬರುವ ಹಾಗೂ ಸಕಾರಣ ನೀಡದೆ ಗೈರಾಗುವ ಅಧಿಕಾರಿಗಳಿಗೆ...

ಬೆಂಗಳೂರು: ಬಿಬಿಎಂಪಿ ಕಚೇರಿಗೆ ತಡವಾಗಿ ಬರುವ ಹಾಗೂ ಸಕಾರಣ ನೀಡದೆ ಗೈರಾಗುವ ಅಧಿಕಾರಿಗಳಿಗೆ ಆಡಳಿತಾಧಿಕಾರಿಗಳು ವೇತನ ಕಡಿತಗೊಳಿಸುವ ಪ್ರಯೋ ಗಕ್ಕೆ ಮುಂದಾಗಿದ್ದಾರೆ.ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಪರಿಶೀಲನೆ ನಡೆಸಿದ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್, ಗೈರಾದ 58 ಅಧಿ ಕಾರಿಗಳಿಗೆ ಅರ್ಧ ದಿನದ ವೇತನ ಕಡಿತಗೊಳಿಸಿದ್ದಾರೆ. ಆನೆಕ್ಸ್ ಕಟ್ಟಡದಲ್ಲಿ ನಾನಾ ಕಚೇರಿಗಳಿಗೆ ಬೆಳಗ್ಗೆ ಭೇಟಿ ನೀಡಿದ ಅವರು, ಯಾವ ಕಚೇರಿಗಳಲ್ಲೂ ಪೂರ್ಣವಾಗಿ ಅಧಿಕಾರಿಗಳು ಇಲ್ಲದಿರುವುದಕ್ಕೆ ಅಸಮಾಧಾನ ಹೊರಹಾಕಿದರು. ಹಾಜರಿ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡೇ ವಿವಿಧ ಇಲಾಖೆಗಳ ಕಚೇರಿಗಳಲ್ಲಿ ಪರಿಶೀಲಿಸಿದರು.ಕೆಲವು ಅಧಿಕಾರಿಗಳು ವಲಯಗಳಲ್ಲಿ ತಪಾಸಣೆಗೆ ಹೋಗಿದ್ದಾರೆ ಎಂದು ಕಿರಿಯ ಅಧಿಕಾರಿಗಳು ತಿಳಿಸಿದರು. ಆದರೆ ತಪಾಸಣೆಗ ಹೋಗಿದ್ದರೆ, ಸ್ಥಳ ಹಾಗೂ ಸಮಯದ ಬಗ್ಗೆ ಮಾ ಹಿತಿ ನೀಡಬೇಕು. ಯಾವುದೇ ಕಾರಣ ನೀಡದೆ ಕಚೇರಿಗೆ ಗೈರಾದರೆ `ರಜೆ' ಎಂದೇ ಪರಿ ಗಣಿಸಬೇಕಾಗುತ್ತದೆ ಎಂದು ಆಡಳಿತಾಧಿಕಾರಿ ಎಚ್ಚರಿಕೆ ನೀಡಿದರು.ಕೆಲವು ವಿಭಾಗಗಳಲ್ಲಿ 13-14 ಅಧಿಕಾರಿಗಳ ಬದಲು ಕೇವಲ ಒಬ್ಬರಿಂದ ಇಬ್ಬರು ಅಧಿಕಾರಿಗಳು ಕಂಡುಬಂದರು. ಇದರಿಂದ ಗರಂ ಆದ ವಿಜಯಭಾಸ್ಕರ್, ಹಿಂದೊಮ್ಮೆ ಹೀಗೆ ಕಾರಣ ನೀಡದೆ ಗೈರಾಗಿದ್ದಕ್ಕೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಮತ್ತೆ ಇದೇ ಘಟನೆ ಮರುಕಳಿಸುತ್ತಿದೆ. ಅಧಿಕಾರಿಗಳು ಎಲ್ಲಿಗೆ ಹೋಗುತ್ತಾರೆ ಎಂದು
ಕೇಂದ್ರ ಕಚೇರಿಗೆ ತಿಳಿಸಿಯೇ  ಹೋಗಬೇಕು. ಇದಕ್ಕಾಗಿ ಸುತ್ತೋಲೆ ಹೊರಡಿಸಿ ಎಚ್ಚರಿಸಲಾಗುವುದು ಎಂದು ತಿಳಿಸಿದರು.

ಷೋಕಾಸ್ ನೋಟಿಸ್: ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 58 ಅಧಿಕಾರಿಗಳು ಸೂಕ್ತ ಕಾರಣ ನೀಡದೆ ಗೈರಾಗಿದ್ದು, ಅರ್ಧ ದಿನದ ರಜೆ ಮಂಜೂರು ಮಾಡುವ ಮೂಲಕ ವೇತನ ಕಡಿತಗೊಳಿಸಲಾಗಿದೆ. ರಜೆ ಹಾಕುವಾಗ ಅಥವಾ ಕಾಮಗಾರಿ ಪರಿಶೀಲನೆಗೆ ಹೋಗುವಾಗ ತಿಳಿಸಿಯೇ  ಹೋಗಬೇಕು ಎಂಬ ಬಗ್ಗೆ ಅಧಿಕಾರಿಗಳಿಗೆ ಸರಿಯಾಗಿ ಸಂದೇಶ ತಲುಪಿಲ್ಲ. ಅಧಿಕಾರಿಗಳು ಕಚೇರಿಗೆ ಬರದೆ ತೋರುವ ಬೇಜವಾಬ್ದಾರಿಗೆ ಕಡಿವಾಣ ಬೀಳಲೇಬೇಕು. ಕಚೇರಿಗೆ ಬರದಿರುವ ಬಗ್ಗೆ ಸ್ಪಷ್ಟನೆ ಕೇಳಿ 58 ಅಧಿಕಾರಿಗಳಿಗೆ ಷೋಕಾಸ್ ನೋಟಿಸ್ ಜಾರಿ ಮಾಡಲಾಗುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!