ಎಚ್.ಆಂಜನೇಯ 
ರಾಜಕೀಯ

ಉಪಜಾತಿ ಕಾಲಂ ವೇಸ್ಟ್!

`ಧರ್ಮ ಯಾವುದೆನ್ನುವಗೊಂದಲದಲ್ಲಿದ್ದೇನೆ. ಏನು ಬರೆಸಬೇಕು ಸ್ವಾಮಿ? ಮಾನವ ಧರ್ಮ ಎಂದು ಬರೆದುಬಿಡಿ. ನನ್ನದು ಮಾದಾರ ಜಾತಿ...

ಬೆಂಗಳೂರು: `ಧರ್ಮ ಯಾವುದೆನ್ನುವಗೊಂದಲದಲ್ಲಿದ್ದೇನೆ. ಏನು ಬರೆಸಬೇಕು ಸ್ವಾಮಿ? ಮಾನವ ಧರ್ಮ ಎಂದು ಬರೆದುಬಿಡಿ. ನನ್ನದು ಮಾದಾರ ಜಾತಿ. ಉಪಜಾತಿ ಎಂದು
ಬರೆಯಬೇಡಿ. ಯಾವುದೇ ಜಾತಿಗೂ ಉಪಜಾತಿ ಎನ್ನುವುದೇ ಇಲ್ಲ. ಸುಮ್ಮನೇ ಕಾಲಂ ವೇಸ್ಟ್.....'
ಹೀಗೆಂದು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಗಣತಿದಾರರಿಗೆ ತಮ್ಮ ಬಗ್ಗೆ ಮಾಹಿತಿ ನೀಡಿದ್ದು, ಸಮಾಜ ಕಲ್ಯಾಣ ಸಚಿವ   ಎಚ್.ಆಂಜನೇಯ.
ಬುಧವಾರ ಬೆಳಗ್ಗೆ ಬೆಂಗಳೂರಿನ ಜಯಮಹಲ್  ರಸ್ತೆಯಲ್ಲಿರುವ ಸಚಿವರ ಮನೆಗೆ ಗಣತಿದಾರರು ಭೇಟಿ ನೀಡಿದರು. ಸಮೀಕ್ಷೆ ನಡೆಸುವಾಗ ಅರ್ಜಿ  ರೂಪರೇಷೆ ತಯಾರಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಸಚಿವರೇ, ಉಪಜಾತಿ ಇಲ್ಲ ಎಂದು ಹೇಳಿ ಗಣತಿದಾರರನ್ನು ಗೊಂದಲಕ್ಕೀಡುಮಾಡಿದರು. ಧರ್ಮ ಯಾವುದು ಎಂದು ಕೇಳಿದಾಗ, `ಧರ್ಮ ಯಾವುದು ಎಂಬ ಗೊಂದಲದಲ್ಲಿದ್ದೇನೆ' ಎಂದರು. ನಂತರ ಪತ್ನಿಯ ಕಡೆಗೆ ತಿರುಗಿ `ಯಾವುದು ಹಿಂದೂ ಧರ್ಮನಾ'? ಎಂದು ಪ್ರಶ್ನಿಸಿದರು . ಸುತ್ತಲೂ ನೆರೆದಿದ್ದವರು ಹಿಂದೂ ಎಂದಾಗ , ಮಾನವ ಧರ್ಮ ಎಂದು ಬರಿ ಎಂದರು. ಗಣತಿದಾರರು ಏನು ಬರೆಯಬೇಕೆಂದು ತೋಚದೆ ಕುಳಿತಿದ್ದಾಗ, ಆಯ್ತು ಹೋಗಲಿ, ಹಿಂದೂ ಧರ್ಮ ಎಂದು ಬರಿಯಪ್ಪ ಎಂದು ಹೇಳಿ ನಕ್ಕು ಬಿಟ್ಟರು.
ಪಿ101 ಸಂಖ್ಯೆಯ ಅಡಿಯಲ್ಲಿ `ಮಾದಾರ ಜಾತಿ' ಎಂದು ನಮೂದಿಸಿದರು. ಉಪಜಾತಿ ಯಾವುದು ಎಂದು ಗಣತಿದಾರರು ಕೇಳಿದಾಗ,
`ಉಪಜಾತಿ ಎಂದು ಬರೆಯಬಾರದು. ಉಪಜಾತಿ ಎನ್ನುವುದೇ ಇಲ್ಲ, ಆ ಕಾಲಂ ಸುಮ್ಮನೆ ವೇಸ್ಟ್ ' ಎಂದು ಹೇಳಿ ಗಣತಿದಾರರನ್ನು ಮತ್ತೊಮ್ಮೆ ಗೊಂದಲಕ್ಕೊಳಗಾಗುವಂತೆ ಮಾಡಿದರು. ಪಿಯುಸಿ ಫೇ ಲ್ ಆಗಿದ್ದೇನೆ ಎಂದು ಬರೆಸಿದ ಸಚಿವ ಆಂಜನೇಯ, ತಮ್ಮ ಪತ್ನಿ ವಿಜಯಾ ಎಂ.ಎ., ಬಿಇಡಿ ಓದಿದ್ದಾರೆ, ಈಗ ಸಹಕಾರಿ ಬ್ಯಾಂಕ್‍ನಲ್ಲಿ ಸದಸ್ಯೆಯಾಗಿದ್ದಾರೆ. ಮಗಳು ಅರುಂಧತಿ, ಐಎಎಸ್ ಕೋಚಿಂಗ್ ಪಡೆಯುತ್ತಿದ್ದಾಳೆಂದು ಹಾಸ್ಯ ಮಾಡಿದರು. ಚಪ್ಪಲಿ ಹೊಲಿಯುವುದು ಕುಲ ಕಸುಬಾಗಿದ್ದು, ಈಗ ಕೃಷಿ ಮಾಡುತ್ತಿದ್ದೇನೆ. ರಾಜ್ಯ ಸರ್ಕಾರದಲ್ಲಿ ಸಚಿವನಾಗಿದ್ದೇನೆ. ಸ್ವಯಾರ್ಜಿತವಾಗಿ 12 ಎಕರೆ ಜಮೀನು ಹೊಂದಿದ್ದು, ಹಣ್ಣು, ರಾಗಿ, ಜೋಳ ಬೆಳೆಯಲಾಗುತ್ತಿದೆ. ಮನೆ ನಿರ್ಮಿಸಲು ಬ್ಯಾಂಕ್‍ನಿಂದ 50 ಲಕ್ಷ ಪಡೆದಿದ್ದೇನೆ ಹಾಗೂ ಮಹದೇವಪುರದ ಬಳಿ ಕೈಗಾರಿಕಾ ಶೆಡ್ ಹೊಂದಿದ್ದೇನೆ ಎಂದು  ಮಾಹಿತಿ ನೀಡಿದರು. 34 ನಿಮಿಷಗಳ ಕಾಲ ಮಾಹಿತಿ ನೀಡಿದ ನಂತರ ಮಾತನಾಡಿದ ಆಂಜನೇಯ, ಸಾರ್ವಜನಿಕರು ತಪ್ಪಾದ ಮಾಹಿತಿ ನೀಡಿದರೆ ಮುಂದಿನ ಪೀಳಿಗೆಗೆ ತೊಂದರೆ ಅನುಭವಿಸಬೇಕಾಗುತ್ತದೆ. ಕೆಲವು ಸಮೀಕ್ಷೆ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಎಲ್ಲರೂ ಸರಿಯಾದ ಮಾಹಿತಿ ನೀಡಿದರೆ ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ ಎಂದರು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

SCROLL FOR NEXT