ಬಿಬಿಎಂಪಿ 
ರಾಜಕೀಯ

ಬಿಬಿಎಂಪಿ ಟಿಕೆಟ್: ಬಿಜೆಪಿ ಬೇಗುದಿ ದೆಹಲಿಯಲ್ಲಿ ಚರ್ಚೆ

ಬಿಬಿಎಂಪಿ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಉಂಟಾಗಿರುವ ಟಿಕೆಟ್ ಹಂಚಿಕೆ ಗೊಂದಲದ ಕುರಿತು ಬುಧವಾರ ದೆಹಲಿಯಲ್ಲಿ ...

ಬೆಂಗಳೂರು:  ಬಿಬಿಎಂಪಿ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಉಂಟಾಗಿರುವ ಟಿಕೆಟ್ ಹಂಚಿಕೆ ಗೊಂದಲದ ಕುರಿತು ಬುಧವಾರ ದೆಹಲಿಯಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಸುದೀರ್ಘ ಚರ್ಚೆ  ನಡೆಯಿತು.ಮಂಗಳವಾರ ಪಕ್ಷ 96 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತು. ಕಡಿಮೆ ಸಮಸ್ಯೆ ಇರುವ ಕ್ಷೇತ್ರಗಳಲ್ಲಿ ಮತ್ತು ಏಕೈಕ ಆಕಾಂಕ್ಷಿ ಇರುವ ಕ್ಷೇತ್ರಗಳ ಪಟ್ಟಿ ಇದಾಗಿದ್ದು, ಈ ಪಟ್ಟಿಯಲ್ಲೇ ಸಣ್ಣಪುಟ್ಟ ಗೊಂದಲ ಉಂಟಾಗಿತ್ತು. ಬೆಂಗಳೂರನ್ನು ಪ್ರತಿನಿಧಿಸುವ ಸಂಸದರು, ಅಭ್ಯರ್ಥಿಗಳನ್ನು ಆಯ್ಕೆ  ಮಾಡುವ ಸಂದರ್ಭದಲ್ಲಿ ತಮ್ಮನ್ನೂ ಪರಿಗಣಿಸಬೇಕೆಂದು ಹೇಳಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಲ್ಲದೇ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿಬೇರೆ ಶಾಸಕರು, ನಾಯಕರು ಮೂಗುತೂರಿಸುವುದನ್ನು ಸರ್ವಥಾ ಒಪ್ಪದ ಶಾಸಕರು ಸಾಕಷ್ಟು ಬಿಗಿ ನಿಲುವು ತೋರ್ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮುಂದಾಗಬಹುದಾದ ಬೆಳವಣಿಗೆಗಳ ಕುರಿತು ದೆಹಲಿಯಲ್ಲಿ ನಡೆದ ಕೋರ್‍ಕಮಿಟಿ ಸಭೆಯಲ್ಲಿ ಚರ್ಚೆ ನಡೆಯಿತೆಂದು ಮೂಲಗಳು ತಿಳಿಸಿವೆ.

ಈ ನಡುವೆ ಮಾಜಿ ಸಿಎಂ 18 ಕ್ಷೇತ್ರಗಳಲ್ಲಿ ತಾವು ಹೇಳಿದವರು ಅಭ್ಯರ್ಥಿಗಳಾಗಬೇಕೆಂದು ಕೋರಿಕೆ ಇಟ್ಟಿದ್ದು, ಬಿಬಿಎಂಪಿ ಚುನಾವಣಾ ಸಮಿತಿ ಅವರ ಆಯ್ಕೆಯನ್ನು ತಿರಸ್ಕರಿಸಿದ್ದು
ಸಾಕಷ್ಟು ಸಾಕಷ್ಟು ಸುದ್ದಿಯಾಗಿತ್ತು. ಈ ಬೆಳವಣಿಗೆಯಿಂದಾಗ ಬಹುದಾದ ಅಡ್ಡ  ಅಡ್ಡ ಪರಿಣಾಮಗಳ ಕುರಿತು ಪಕ್ಷ ಸಾಕಷ್ಟು ಚಿಂತನೆ ನಡೆಸಿತ್ತು. ಈ ಅಂಶ ಸಹಸಭೆಯಲ್ಲಿ ಪ್ರಸ್ತಾಪವಾಗಿದೆ.

ಆಕಾಂಕ್ಷಿಗಳ ಆಕ್ರೋಶ: ಬಿಬಿಎಂಪಿ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ ಬೀಗಿದ ಬಿಜೆಪಿ ಇದೀಗ ಆಕ್ರೋಶದ ಬೇಗುದಿ ಎದುರಿಸುವಂತಾಗಿದೆ. ಮಂಗಳವಾರ ರಾತ್ರಿ ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ 96 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬಿಜೆಪಿ ಅಂತಿಮಗೊಳಿಸಿತು. ಈ ಪೈಕಿ ಶೇ.25 ರಷ್ಟು ಟಿಕೆಟ್  ಹಂಚಿಕೆಯ ಬಗ್ಗೆ ಸಣ್ಣಪುಟ್ಟ ಗೊಂದಲಗಳಿವೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬುಧವಾರ ಬೆಳಗ್ಗೆಯೇ ಪಕ್ಷದ ಕಚೇರಿ ಮುಂಭಾಗ ಟಿಕೆಟ್ ಕೈತಪ್ಪಿದ ಅನೇಕ ಆಕಾಂಕ್ಷಿಗಳು ಜಮಾಯಿಸಿದ್ದರು, ಮುಖಂಡರ ಮನವೊಲಿಸಿ ಟಿಕೆಟ್ ಪಡೆಯುವ ಉತ್ಸಾಹದಿಂದಲೇ ಬಂದಿ ದ್ದರು. ಆದರೆ, ಪಕ್ಷ ಮಾವುದಕ್ಕೂ ಸೊಪ್ಪು ಹಾಕಲಿಲ್ಲ. ಹಂಪಿ ನಗರದ ಚಂದ್ರಶೇಖರಯ್ಯ ಅವರು ಒಂದಷ್ಟು ಆಕ್ರೋಶ ಹೊರ ಹಾಕಿದರೂ, ಕೆಲವೇ ಹೊತ್ತಿನಲ್ಲಿ ಮೌನಕ್ಕೆ ಶರಣಾಗಿ ಪಕ್ಷ ಹೇಳಿದಂತೆ ಎಂದು ಮಾತು ಬದಲಿಸಿದರು. ಇನ್ನು ಪುತಲೀಬಾಯಿ ಎಂಬವರು ತಮಗೆ ಅನ್ಯಾಯ ವಾಗಿದೆ ಎಂದು ಪೋಸ್ಟರ್ ಹಿಡಿದು ಬಿಜೆಪಿ ಕಚೇರಿ ಮುಂದೆ ಮಾಧ್ಯಮ ಗಳೆದುರು ಕಾಣಿಸಿಕೊಂಡರು. ಈವೇಳೆ ಬಿಜೆಪಿಮುಖಂಡರು, ನಿಮ್ಮದು ಯಾವ ಕ್ಷೇತ್ರ , ಯಾವ ಕೆಟಗರಿ ಇದೆ ಎಂದು  ಪ್ರಶ್ನಿಸುತ್ತಿದ್ದಂತೆ, ನನಗಲ್ಲ
ಬೇರೆಯವರಿಗೆ ಅನ್ಯಾಯವಾಗಿದೆ ಎಂದುಉತ್ತರ ಹೇಳಿ ಅಲ್ಲಿಂದ ಕಾಲ್ಕಿತ್ತರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!