ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಗುರುವಾರ ಒಟ್ಟು 131 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿವೆ. ಬೆಂಗಳೂರು ಕೇಂದ್ರ ವಲಯದಿಂದ 37, ಉತ್ತರ 33, ದಕ್ಷಿಣ 50 ಹಾಗೂ ನಗರ ಲಯದಿಂದ 38 ನಾಮಪತ್ರ ಸಲ್ಲಿಕೆಯಾಗಿವೆ. ಕಾಂಗ್ರೆಸ್‍ನಿಂದ 53, ಬಿಜೆಪಿ 52, ಜೆಡಿಎಸ್‍ನಿಂದ 17 ಹಾಗೂ 31 ಸ್ವತಂತ್ರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ಭಾರತೀಯ ಅಂಬೇಡ್ಕರ್ ಜನತಾ ಪಕ್ಷದಿಂದ 1, ಸೋಷಿಯಲ್ ಡೆಮಾಕ್ರಟಿಕ್ ಪಕ್ಷದಿಂದ 2 ಹಾಗೂ ಲೋಕಸತ್ತಾ ಪಕ್ಷದಿಂದ ನಾಮಪತ್ರ ಸಲ್ಲಿಕೆಯಾಗಿವೆ.
ಒಟ್ಟು 131 ಅಭ್ಯರ್ಥಿಗಳು 158 ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ: ಶಶಿರೇಖಾ ಜಯರಾಂ-ಕೋಣನಕುಂಟೆ, ಪೂರ್ಣಿಮಾ ರಮೇಶ್- ಯಡಿಯೂರು ವಾರ್ಡ್, ಎಸ್.ಲೀಲಾ ಶಿವಕುಮಾರ್ - ಚಿಕ್ಕಪೇಟೆ ವಾರ್ಡ್, ಮಂಜುನಾಥರಾಜು - ಕಾಡುಮಲ್ಲೇಶ್ವರ ವಾರ್ಡ್, ಪೂರ್ಣಿಮಾ ಶ್ರೀನಿವಾಸ್- ಕೆಆರ್‍ಪುರ ವಾರ್ಡ್, ಕೆ.ಸೋಮಶೇಖರ್- ಅಂಜನಾಪುರ, ಲಲಿತಾ ಟಿ.ನಾಯಕ್- ಗೊಟ್ಟಿಗೆರೆ, ಶ್ರೀಧರ್‍ರೆಡ್ಡಿ -ಹಗದೂರು ವಾರ್ಡ್. ಕಾಂಗ್ರೆಸ್: ಜಯಪ್ರಕಾಶ್-ಬಸವನಪುರ ವಾರ್ಡ್, ಶಾಂತಾ ಕೃಷ್ಣಮೂರ್ತಿ- ಕಲ್ಕೆರೆ ವಾರ್ಡ್, ಎಸ್.ಜಿ.ನಾಗರಾಜ್- ವಿಜ್ಞಾನ ನಗರ ವಾರ್ಡ್, ಸುರೇಶ್- ಎ.ನಾರಾಯಣಪುರ ವಾರ್ಡ್, ಶ್ರೀಕಾಂತ್- ದೇವಸಂದ್ರ ವಾರ್ಡ್, ಮಸ್ತಾನ್- ವಿಜಿನಾಪುರ ವಾರ್ಡ್, ರಾಧಾ ವೆಂಕಟೇಶ್-ಹೊರಮಾವು ವಾರ್ಡ್.
ವೀಕ್ಷಕರ ನೇಮಕ
ಐಎಎಸ್ ಅಧಿಕಾರಿ ಸುಬೋಧ್ ಯಾದವ್ ಅವರನ್ನು ಚುನಾವಣಾ ವಿಶೇಷ ವೀಕ್ಷಕರಾಗಿ ನೇಮಿಸಲಾಗಿದೆ. ಕೆ.ಆರ್.ಪುರ, ಸಿವಿ ರಾಮನ್‍ನಗರ, ಮಹದೇವಪುರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಆನೇಕಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇವರು ಕಾರ್ಯನಿರ್ವಹಿಸಲಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ 080-22114233, 9449650000 ಸಂಪರ್ಕಿಸಿ ದೂರು ನೀಡಬಹುದು