ಎಚ್.ಡಿ ಕುಮಾರಸ್ವಾಮಿ ಮತ್ತು ಎಚ್.ಡಿ ದೇವೇಗೌಡ 
ರಾಜಕೀಯ

ಜೆಡಿಎಸ್ 120 ಹೆಸರು ಪ್ರಕಟ

ಬಿಬಿಎಂಪಿ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿಯನ್ನು ಜೆಡಿಎಸ್ ಬಿಡುಗಡೆ ಮಾಡಿದೆ. 198 ವಾರ್ಡ್ ಗಳ ಪೈಕಿ 120 ವಾರ್ಡ್‍ಗಳಿಗೆ ....

ಬೆಂಗಳೂರು:  ಬಿಬಿಎಂಪಿ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿಯನ್ನು ಜೆಡಿಎಸ್ ಬಿಡುಗಡೆ ಮಾಡಿದೆ. 198 ವಾರ್ಡ್ ಗಳ ಪೈಕಿ 120 ವಾರ್ಡ್‍ಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ. ಬಿಬಿಎಂಪಿಯಲ್ಲಿ ಜೆಡಿಎಸ್ ನಾಯಕರಾಗಿದ್ದ ಆರ್.ಪ್ರಕಾಶ್ ಅವರು ಮಹಿಳಾ ಮೀಸಲು ಕಾರಣದಿಂದ ತಮ್ಮ ಹಳೆಯ ಕಾವೇರಿಪುರ ವಾರ್ಡ್ ಬಿಟ್ಟು ಮೂಡಲಪಾಳ್ಯದಿಂದ ಸ್ಪರ್ಧಿಸಲು ಟಿಕೆಟ್ ಪಡೆದಿದ್ದಾರೆ.

ಚೊಕ್ಕಸಂದ್ರ ವಾರ್ಡ್‍ನಿಂದ ಮಾಜಿ ಸದಸ್ಯ ಮುನಿಸ್ವಾಮಿ ಅವರ ಪತ್ನಿ ಲಕ್ಷಮ್ಮ, ಮುನೇಶ್ವರನಗರದಿಂದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಪತ್ನಿ ಶೈಲಜಾ, ಶ್ರೀನಗರದಿಂದ ಮಾಜಿ ಸದಸ್ಯ ತಿಮ್ಮೇಗೌಡ ಅವರ ಪತ್ನಿ ನಾಗರತ್ನ ಟಿಕೆಟ್ ಪಡೆದಿದ್ದಾರೆ.

ವಾರ್ಡ್ ಹಾಗೂ ಅಭ್ಯರ್ಥಿಗಳ ವಿವರ:
ಹೊರಮಾವು-ಜಯಪ್ರಿಯ, ವಿಜಿನಾಪುರ-ಅಬ್ದುಲ್ ಸಲಾಂ, ದೇವಸಂದ್ರ-ಡಾ.ರಾಘವೇಂದ್ರ ಗೌಡ, ಎ.ನಾರಾಯಣಪುರ-ಲಕ್ಷಿ ್ಮ ಮೂರ್ತಿ, ವಿಜ್ಞಾನ ನಗರ- ವಿನೋದ್ ಕುಮಾರ್, ಜಕ್ಕೂರು-ಈರಪ್ಪ, ಕೊಡಿಗೇಹಳ್ಳಿ- ಎನ್.ಚಂದನ್‍ಗೌಡ, ವಿದ್ಯಾರಣ್ಯಪುರ-ಅಂಬಿಕಾ ಕೆ. ಮಣಿ, ದೊಡ್ಡಬೊಮ್ಮಸಂದ್ರ-ಸುಮಾ ನಾಗೇಶ್, ಕುವೆಂಪುನಗರ- ಎಂ.ನಾಗರಾಜ್, ದೊಡ್ಡಬಿದರಕಲ್ಲು- ಆರ್.ಗೋಪಾಲ್, ಹೆರೋಹಳ್ಳಿ- ಶ್ರೀಕಾಂತ್, ಜಾಲಹಳ್ಳಿ-ಎನ್.ಮಹೇಶ್, ಯಶವಂತಪುರ-ಜಯಕುಮಾರ್, ಎಚ್‍ಎಂಟಿ-ಎಂ.ವೀಣಾ,ಲಗ್ಗೆರೆ-ಮಂಜುಳಾ ನಾರಾಯಣಸ್ವಾಮಿ, ಕೊಟ್ಟಿಗೆಪಾಳ್ಯ-ವಿ.ಪ್ರಕಾಶ್, ಜ್ಞಾನಭಾರತಿ -ಶೀಲಾ ನಾಯಕ್, ಶೆಟ್ಟಿಹಳ್ಳಿ-ಎ.ಪ್ರಕಾಶ್, ಮಲ್ಲಸಂದ್ರ- ದೊರೆರಾಜು,ಬಾಗಲಗುಂಟೆ-ರಂಗನಾಥ್, ದಾಸರಹಳ್ಳಿ-ದೇವಿಕಾ ಸೌಂದರ್ಯ, ಚೊಕ್ಕಸಂದ್ರ- ಲಕ್ಷಮ್ಮ ಮುನಿಸ್ವಾಮಿ, ಪೀಣ್ಯ ಕೈಗಾರಿಕಾ ಪ್ರದೇಶ-ಲತಾ ರಮೇಶ್,ಹೆಗ್ಗನಹಳ್ಳಿ-ವರಲಕ್ಷ್ಮಿ ಗೋವಿಂದೇಗೌಡ. ಮಾರಪ್ಪನಪಾಳ್ಯ-ಮಹದೇವ್, ನಾಗಪುರ- ಭದ್ರೇಗೌಡ,ಮಹಾಲಕ್ಷ್ಮಿಪುರ-ಆರ್.ನಾರಾ ಯಣ, ಶಂಕರಮಠ-- ಪುಟ್ಟಸ್ವಾಮಿ, ವೃಷಭಾವತಿ ನಗರ- ಎಸ್.ಪಿ.ಹೇಮಲತ, ಮತ್ತಿಕೆರೆ-ಎಂ.ವಿ.ನಾಗರಾಜ್, ಸುಬ್ರಹ್ಮಣ್ಯನಗರ-- ನಾಗರಾಜು, ಗಾಯತ್ರಿನಗರ--ಮಂಜುಳಾ ಓಂ ಪ್ರಕಾಶ್, ರಾಧಾ-ಕೃಷ್ಣ ಟೆಂಪಲ್--ಆನಂದ್, ಹೆಬ್ಬಾಳ-ರುದ್ರಪ್ಪ, ವಿ.ನಾಗೇನಹಳ್ಳಿ-ಎನ್.ರಾಜಶೇಖರ್, ಜಯಚಾಮರಾಜೇಂದ್ರನಗರ-ಸಲೀಂ ಪಾಷ, ಕುಶಾಲ್‍ನಗರ-ಉಮ್ಮೆ ಸಲ್ಮಾ, ಕಾವಲ್ ಭೈರಸಂದ್ರ-ನೇತ್ರಾ ನಾರಾಯಣ್, ಡಿ. ಜೆ.ಹಳ್ಳಿ-ಸೈಯದ್ ಉಸ್ಮಾನ್, ಮುನೇಶ್ವರನಗರ-ಕ್ರಿಯ ಶೈಲಜಾ, ಸಗಾಯಪುರ- ಮಾರಿಮುತ್ತು, ಎಸ್.ಕೆ. ಗಾರ್ಡನ್- ಮಹೇಶ್ ಕುಮಾರ್, ಎಚ್‍ಬಿಆರ್ ಲೇಔಟ್-ಶ್ರೀನಿವಾಸ್, ಬಾಣಸವಾಡಿ-ತಾಯಣ್ಣರೆಡ್ಡಿ, ಕಾಚರಕನಹಳ್ಳಿ--ಡಾ.ತಿಮ್ಮ ಲಿಂಗರಾಜಪುರ-ಡಾ. ರೂತ್ ಮಣಿ, ಮಾರುತಿಸೇವಾನಗರ-ವಾಣಿ ಅಶ್ವಥ್ ,ಸರ್ವಜ್ಞ ನಗರ-ಭಾರತಿ, ಜೀವನ್‍ಭೀಮಾನಗರ-ಆಯೀಷಾ, ಕೊನೇನಅಗ್ರಹಾರ- ಮಹೇಶ್, ರಾಮಸ್ವಾಮಿ ಪಾಳ್ಯ-ಸಿ.ಶಮೀನಾ, ಜಯಮಹಲ್-ಕಲೀಂ ಪಾಷ, ಭಾರತಿನಗರ- ಸೈಯದ್ ಮುಜೈದ್, ಜೋಗುಪಾಳ್ಯ- ರುಬೆನ್ ಮೋಸಸ್, ದೊಮ್ಮಲೂರು-ಟಿ.ಕೃಷ್ಣಮೂರ್ತಿ, ಅಗರ-ಕೋಮಲ ಅಂಥೋನಿ, ನೀಲಸಂದ್ರ-ಎಂ.ಎಸ್ .ನಂದಕುಮಾರ್,ಶಾಂತಿನಗರ-ವಲ್ಲಿ ಸುಬ್ರಹ್ಮಣ್ಯ, ದತ್ತಾತ್ರೇಯ ಟೆಂಪಲ್- ಷಣ್ಮುಗಂ, ಗಾಂಧಿನಗರ- ರವಿಕುಮಾರ್, ಸುಭಾಷ್ ನಗರ-ಶ್ರೀನಿವಾಸಲು, ಓಕಳಿಪುರ--ಗಜೇಂದ್ರ, ಕಾಟನ್‍ಪೇಟೆ-ಶಿವಪ್ಪ, ರಾಜಾಜಿನಗರ--ಬೈಯಣ್ಣ, ಬಸವೇಶ್ವರ- ಕವಿತಾ, ಶಿವಾಜಿನಗರ-ಆಶಾದೇವಿ, ಕಾವೇರಿಪುರ-ರಮೀಳಾ ಉಮಾಶಂಕರ್, ಗೋವಿಂದರಾಜನಗರ-ಶ್ರೀನಿವಾಸ ಕಡೇಮನೆ, ಮಾರೇನಹಳ್ಳಿ-ಉಮಾದೇವಿ ರಾಮಚಂದ್ರ, ಮೂಡಲಪಾಳ್ಯ-ಆರ್.ಪ್ರಕಾಶ್, ನಾಗರಬಾವಿ-ಎನ್ .ಭಾಗ್ಯಮ್ಮ, ನಾಯಂಡಹಳ್ಳಿ -ಉಮಾದೇವಿ. ವಿಜಯನಗರ- ಭಾಗ್ಯಮ್ಮ ನಾಗರಾಜ್, ಹೊಸಹಳ್ಳಿ- ಎಸ್.ಲಲಿತಾ ಲೋಕೇಶ್, ಹಂಪಿನಗರ-ಕೆ.ಬಿ.ಶ್ರೀನಿವಾಸ್, ಬಾಪೂಜಿನಗರ-ಆರಿಫ್ ಪಾಷ, ಗಾಳಿ ಆಂಜನೇಯ ಟೆಂಪಲ್-ವಿ.ಉಮಾವತಿ ಚಂದ್ರಪ್ಪ, ದೀಪಾಂಜಲಿನಗರ-ಅಶ್ವಿನಿ ಜಯರಾಂ, ಪಾದರಾಯನಪುರ-ಇಮ್ರಾನ್ ಪಾಷ.ಜೆ.ಜೆ.ನಗರ-ಬೀಬಿ ಜಾನ್, ರಾಯಪುರ-ಜಿ.ಎಸ್.ಧನಲಕ್ಷ್ಮಿ,ಛಲವಾದಿಪಾಳ್ಯ-ನೂರಿ ಖಾನಂ, ಕೆಆರ್ ಮಾರ್ಕೆಟ್-ನಾಜಿಮಾ ಖಾನಂ, ಆಜಾದ್ ನಗರ-ಮುಶ್ತರ್ಲ್ ಬೇಗಂ, ಸುಂಕೇನಹಳ್ಳಿ-ಚನ್ನೇಗೌಡ, ವಿಶ್ವೇಶ್ವರಪುರ-ಲತಾ ಸುಕುಮಾರ್, ಸಿದ್ದಾಪುರ-ಸರ್ದಾರ್ ಪಾಷ, ಜಯನಗರ-ಸಬೀನಾ ತಾಜ್, ಹನುಮಂತನಗರ-ಪ್ರಸಾದ್, ಶ್ರೀನಗರ-ನಾಗರತ್ನ ತಿಮ್ಮೇಗೌಡ, ಹೊಸ ಕೆರೆಹಳ್ಳಿ-ಎಸ್.ಚೈತ್ರ, ಗಣೇಶ ಮಂದಿರ-ನಾಗರತ್ನ, ಪದ್ಮನಾಭನಗರ-ವಿ.ಬಿ.ತ್ರಿವೇಣಿ, ಆಡುಗೋಡಿ-ಪಾರ್ವತಮ್ಮ. ಕೋರಮಂಗಲ-ಕಾವೇರಿಗೌಡ, ಸುದ್ದುಗುಂಟೆಪಾಳ್ಯ--
ಎಚ್.ಇ.ಕೃಷ್ಣಪ್ಪ, ಮಡಿವಾಳ-ಅಶ್ರಫ್ ಅಹ್ಮದ್, ಜಕ್ಕಸಂದ್ರ-ಯಲ್ಲಮ್ಮ, ಬಿಟಿಎಂ ಲೇಔಟ್-ಕೆ.ದೇವದಾಸ್, ಪಟ್ಟಾಭಿರಾಮನಗರ- ಸಂಪಂಗಿ ಕೆ.ಎಂ.ಶಾಂತ, ಜಯನಗರ ಪೂರ್ವ- ಶಕೀಬ್ ಉಲ್ಲ ಖಾನ್, ಗುರಪ್ಪನಪಾಳ್ಯ-ಜಮೀರ್ ಪಾಷ, ಸಾರಕ್ಕಿ-ಪವಿತ್ರ ದೇವರಾಜೇಗೌಡ, ಶಾಕಾಂಬರಿನಗರ-ಸವಿತಾ ರಾಜಶಂಕರ್. ಹೂಡಿ- ಎಂ.ವೆಂಕಟೇಶ್, ಗರುಡಾಚಾರ್‍ಪಾಳ್ಯ- ಗಂಗಾಧರ, ಕಾಡುಗೋಡಿ-ಎಂ.ಸುರೇಶ್, ಹಗದೂರು-ಟಿ.ಎನ್.ಅಶ್ವತ್ಥಯ್ಯ, ಮಾರತ್‍ಹಳ್ಳಿ-ಶ್ರೀನಿವಾಸಗೌಡ, ವರ್ತೂರು-ಚಾಮುಂಡೇಶ್ವರಿ ಯಲ್ಲಪ್ಪ, ಬೆಳ್ಳಂದೂರು-ನೀಲಮ್ಮ ಪ್ರಕಾಶ್, ಜರಗನಹಳ್ಳಿ-ಸುಶೀಲಮ್ಮ, ಬಿಳೇಕಹಳ್ಳಿ--ಜೈಕುಮಾರ್, ಅರಕೆರೆ-ಕಾತ್ಯಾಯಿನಿ, ಉತ್ತರಹಳ್ಳಿ- ಆರ್.ಡಿ.ಉಷಾರಾಣಿ, ಯಲಚೇನಹಳ್ಳಿ-ಜುಲ್ಫಿಕರ್ ಅಹ್ಮದ್ ಖಾನ್, ಗೊಟ್ಟಿಗೆರೆ- ಪಾರ್ವತಮ್ಮ, ಅಂಜನಾಪುರ-ಮಹ್ಮದ್ ಜಬೀಉಲ್ಲಾ, ವಸಂತಪುರ-ಲಕ್ಷ್ಮಿ ಅಣ್ಣೇಗೌಡ.

ಮಾಜಿ ಆಪ್‍ಗೆ ಜೆಡಿಎಸ್ ಗಾಳ?
ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಆಪ್ ಪಕ್ಷ ಸ್ಪರ್ಧೆಗೆ ಇಳಿಯದ ಕಾರಣ ಆ ಪಕ್ಷಕ್ಕೆ ಜೆಡಿಎಸ್ ಗಾಳ ಹಾಕಲು ಶುರು ಮಾಡಿದೆ. ಇದಕ್ಕೆ ಪೂರಕ ಬೆಳವಣಿಗೆ ಎಂದರೆ ಗುರುವಾರ ನಗರದಲ್ಲಿ ಜೆಡಿಎಸ್ ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆಪ್ ಪಕ್ಷದ ಬಗ್ಗೆ ಪ್ರಸ್ತಾಪ ಮಾಡಿದರು. ಬಿಬಿಎಂಪಿಯಲ್ಲಿ ಬಿಜೆಪಿ ನಡೆಸಿದ ಆಡಳಿತ ಅವಧಿಯಲ್ಲಿ ಸಾಕಷ್ಟು ಅಕ್ರಮಗಳು ಮತ್ತು ಕಸ, ರಸ್ತೆ ಸೇರಿದಂತೆ ಅನೇಕ ಯೋಜನೆಗಳಲ್ಲಿ ಅಕ್ರಮವಾಗಿದೆ. ಹಣ ಲೂಟಿಯಾಗಿದೆ. ಭ್ರಷ್ಟಾಚಾರ ನಡೆದಿದೆ. ಎರಡು ವರ್ಷಗಳಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಕೂಡ ಅಕ್ರಮಗಳನ್ನು ನಡೆಸುತ್ತಾ ಬಂದಿದೆ. ಇದೆಲ್ಲವನ್ನು ಆಪ್ ಪಕ್ಷದವರು ಹೊರ ಎಳೆಯುತ್ತಿದ್ದಾರೆ. ಈ ಹೋರಾಟವನ್ನು ಆಪ್ ಪಕ್ಷ ಮುಂದುವರಿಸಬೇಕು. ಅವರು ಹೇಗಿದ್ದರೂ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಆದ್ದರಿಂದ ಆ ಪಕ್ಷದವರು ನಮ್ಮ ಹೋರಾಟದಲ್ಲಿ ಕೈಜೋಡಿಸಬೇಕು ಎಂದು ಬಹಿರಂಗ ಆಹ್ವಾನ ನೀಡಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ