ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಯಲ್ಲಿ 100 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಬಿಬಿಎಂಪಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ರಾಜ್ಯ ನಾಯಕರನ್ನು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶ್ಲಾಘಿಸಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾ ಅವರು ರಾಜ್ಯ ನಾಯಕರನ್ನು ಅಭಿನಂದಿಸಿದರು. ಬಿಬಿಎಂಪಿ ಚುನಾವಣೆಲ್ಲಿ ಪಕ್ಷ 100 ಸ್ಥಾನಗಳು ಗೆದ್ದಿರುವುದು ಸಂತಸ ವಿಷಯ. ಇದಕ್ಕಾಗಿ ದುಡಿದ ರಾಜ್ಯ ನಾಯಕರು ಹಾಗೂ ಕಾರ್ಯಕರ್ತರನ್ನು ಅಮಿತ್ ಶಾ ಅಭಿನಂದಿಸಿದ್ದಾರೆ.
ಅಭಿವೃದ್ಧಿ ಮಂತ್ರ ಪಠಿಸುತ್ತಿರುವ ಬಿಜೆಪಿಗೆ ಬೆಂಗಳೂರಿನ ಜನತೆ ಮತ್ತೆ ಅಧಿಕಾರ ನೀಡಿ ಹಾರೈಸಿದ್ದಾರೆ. ಹೀಗಾಗಿ ಅಖಂಡ ಬೆಂಗಳೂರು ಅಭಿವೃದ್ಧಿಯೇ ಬಿಜೆಪಿ ಸಂಕಲ್ಪಈ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಬೇಕು ಎಂದರು.
ಇದೇ ವೇಳೆ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದ ಅಮಿತ್ ಶಾ ಅವರು, ಕಾನೂನು ತಿದ್ದುಪಡಿಯಿಂದ ಜನರ ವಿಶ್ವಾಸ ಗಳಿಸಲು ಸಾಧ್ಯವಾಗಲ್ಲ. ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಸಂಬಂಧ ವ್ಯಂಗವಾಡಿದ ಅವರು, ಈ ತೀರ್ಪಿನಿಂದಾದರೂ ರಾಜ್ಯ ಸರ್ಕಾರ ಬುದ್ಧಿ ಕಲಿಯಲಿ. ಈಗಲಾದರೂ ಸರ್ಕಾರ ಅಭಿವೃದ್ಧಿ ಕಡೆ ಗಮನ ಅರಿಸಲಿ ಎಂದರು.
ವಿಮಾನ ನಿಲ್ದಾಣದ ವಿಐಪಿ ಲಾಂಜ್ ನಲ್ಲಿ 20 ನಿಮಿಷಗಳ ಕಾಲ ರಾಜ್ಯ ನಾಯಕರಾದ ಕೇಂದ್ರ ಸಚಿವ ಅನಂತ್ ಕುಮಾರ್, ಡಿವಿ ಸದಾನಂದಗೌಡ, ಪ್ರಹ್ಲಾದ್ ಜೋಷಿ, ಆರ್. ಅಶೋಕ್ ಸೇರಿದಂತೆ ಸಮಾಲೋಚನೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics