ಗೆಲುವಿನ ಸಂಭ್ರಮದಲ್ಲಿರುವ ಬಿಜೆಪಿ ಕಾರ್ಯಕರ್ತರು 
ರಾಜಕೀಯ

ಪಾಲಿಕೆಗೆ ನಾರಿಯರು ನೂರು

ದೇಶಾದ್ಯಂತ ಮಹಿಳಾ ಪ್ರಾತಿನಿಧ್ಯ ಕುರಿತು ಚರ್ಚೆಗೆ ಈ ಬಾರಿ ಬಿಬಿಎಂಪಿ ಚುನಾವಣಾ ಫಲಿತಾಂಶ ಹೊಸ ದಿಕ್ಕು ನೀಡಿದೆ. ಈ ಬಾರಿ...

ಬೆಂಗಳೂರು: ದೇಶಾದ್ಯಂತ ಮಹಿಳಾ ಪ್ರಾತಿನಿಧ್ಯ ಕುರಿತು ಚರ್ಚೆಗೆ ಈ ಬಾರಿ ಬಿಬಿಎಂಪಿ ಚುನಾವಣಾ ಫಲಿತಾಂಶ ಹೊಸ ದಿಕ್ಕು ನೀಡಿದೆ. ಈ ಬಾರಿ ಬಿಬಿಎಂಪಿಯಲ್ಲಿ ಪ್ರಮೀಳಾ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ಕರ್ನಾಟಕ ರಾಜಕಾರಣದಲ್ಲಿ ಇದು ಹೊಸ ಹೆಜ್ಜೆ.

ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣ ಸಾಧಿತವಾಗಿದೆ ಎಂಬುದಕ್ಕೆ ಈ ಸಲದ ಬಿಬಿಎಂಪಿಯೇ ಸಾಕ್ಷಿ. ಪ್ರತಿ ಚುನಾವಣೆಯಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಕಲ್ಪಿಸಲಾಗುತ್ತಿತ್ತು. ಆದರೆ, ಈ ಬಾರಿ ಶೇ.50ರಷ್ಟು ಮಹಿಳಾ ಮೀಸಲಾತಿ ಕಲ್ಪಿಸಿಲ್ಲಧವಾದರೂ, ಬಿಬಿಎಂಪಿಯ ಅರ್ಧದಷ್ಟು ಸದಸ್ಯರಾಗಿ ಮಹಿಳೆಯರೇ ಆಯ್ಕೆಯಾಗಿದ್ದಾರೆ.

ವಿವಿಧ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಈ ಬಾರಿ ಒಟ್ಟು 100 ಮಹಿಳೆಯರು ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ವಿಶೇಷ ಎಂದರೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಪೊಲೀಸ್ ಪೇದೆ ಆಗಿ, ಕರ್ತವ್ಯಕ್ಕೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸವಿತಾ ಶ್ರೀನಗರದಿಂದ ಜಯಭೇರಿ ಭಾರಿಸಿದ್ದಾರೆ.

ಪುರುಷ ಅಭ್ಯರ್ಥಿಗಳ ವಿರುದ್ಧ ಮಾಜಿ ಮೇಯರ್ ಶಾಂತಕುಮಾರಿ ಸಹಮತ್ತೆ ಗೆಲುವು ಸಾಧಿಸಿದ್ದಾರೆ.  ಇಬ್ಬರು ಪಕ್ಷೇತರರು, ಉಳಿದಂತೆ ಬಹುತೇಕ ಮಾಜಿ ಪಾಲಿಕೆ ಸದಸ್ಯರ ಪತ್ನಿಯರು ವಿಜಯ ಸಾಧಿಸಿದ್ದು, ಇವರ ಜತೆಗೆ ಸಾಕಷ್ಟು ಮಂದಿ ಹೊಸ ಮುಖಗಳಿವೆ.

ಚುನಾವಣಾ ಫಲಿತಾಂಶದ ಬಗ್ಗೆ ರಾಜಕೀಯ ನೆಲೆಯಲ್ಲಿ ಸಾಕಷ್ಟು ವಿಶ್ಲೇಷಣೆಗಳು ನಡೆಯುತ್ತಿದ್ದರೂ ಅಸಲಿಗೆ ಬೆಂಗಳೂರು ಮಹಾನಗರ ಹೊಸ ಭರವಸೆಯನ್ನು ಈ ನಿಟ್ಟಿನಲ್ಲಿ ಇಟ್ಟುಕೊಂಡಿದೆ. ಬಿಬಿಎಂಪಿಯಲ್ಲಿ ಪ್ರಮೀಳಾ ಸಾಮ್ರಾಜ್ಯವೇ ಇರುವುದರಿಂದ ವಿವಿಧ ಸಮಸ್ಯೆಗಳ ಬಗ್ಗೆ ವಿಭಿನ್ನ ಚರ್ಚೆ, ಪರಿಹಾರದ ಹೊಸ ಹೆಜ್ಜೆಗಳು ಗೋಚರವಾಗುವ ಲಕ್ಷಣಗಳು ಕಾಣುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ; ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

Karnataka CM News LIVE Updates | ಸಿದ್ದರಾಮಯ್ಯ ರಾಜೀನಾಮೆ; ಸಿಎಲ್‌ಪಿ ಸಭೆ ಶನಿವಾರ; ಅಂದೇ ನೂತನ ಸಿಎಂ ಪ್ರಮಾಣ ವಚನ ಸಾಧ್ಯತೆ!

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

ನಿಮ್ಮ ಪ್ರೀತಿಗೆ ಧನ್ಯವಾದ: ರಾಜೀನಾಮೆ ನೀಡಿದ ಬಳಿಕ ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಭಾವುಕ ಪೋಸ್ಟ್!

ಬಕ್ರೀದ್: ಗೋವಿಗೆ ‘ರಾಷ್ಟ್ರೀಯ ಪ್ರಾಣಿ’ ಸ್ಥಾನಮಾನ ನೀಡಿ: ಈದ್ ಆಚರಣೆ ಸಂದರ್ಭದಲ್ಲೇ ಮುಸ್ಲಿಂ ಸಂಘಟನೆಗಳ ಆಗ್ರಹ

SCROLL FOR NEXT