ಬಿಬಿಎಂಪಿ (ಸಂಗ್ರಹ ಚಿತ್ರ) 
ರಾಜಕೀಯ

ಮೇಯರ್ ಚುನಾವಣೆಗೆ 260 ಸದಸ್ಯರಿಗೆ ಅರ್ಹತೆ

ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾದ ಅಂತಿಮ ಪಟ್ಟಿ ಪ್ರಕಟವಾಗಿದ್ದು, ಕಾಂಗ್ರೆಸ್‍ನ ಇಬ್ಬರು ಪಟ್ಟಿಯಿಂದ ಹೊರ ಬಿದ್ದಿದ್ದಾರೆ. ಹಾಗೆಯೇ ಒಬ್ಬ ಪಕ್ಷೇತರ ಸದಸ್ಯರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ...

ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾದ ಅಂತಿಮ ಪಟ್ಟಿ ಪ್ರಕಟವಾಗಿದ್ದು, ಕಾಂಗ್ರೆಸ್‍ನ ಇಬ್ಬರು ಪಟ್ಟಿಯಿಂದ ಹೊರ ಬಿದ್ದಿದ್ದಾರೆ. ಹಾಗೆಯೇ ಒಬ್ಬ ಪಕ್ಷೇತರ  ಸದಸ್ಯರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಬಿಬಿಎಂಪಿ ಆಯುಕ್ತರು ಸಿದ್ಧಪಡಿಸಿರುವ ಅಂತಿಮ ಪಟ್ಟಿಯಲ್ಲಿ ಎಲ್ಲಾ ಪಕ್ಷಗಳ ಪ್ರತಿನಿಧಿಗಳೂ ಸೇರಿ 260 ಮಂದಿ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.  ಅದರಲ್ಲಿ ಬಿಜೆಪಿ-126, ಕಾಂಗ್ರೆಸ್-100, ಜೆಡಿಎಸ್ -21 ಹಾಗೂ ಪಕ್ಷೇತರ 14 ಸದಸ್ಯರು ಮತ ಚಲಾಯಿಸಬಹುದು. ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಚುನಾಯಿತರಾಗಿರುವ ಪಾಲಿಕೆ  ಸದಸ್ಯರ ಜತೆಗೆ ನಗರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ವಿಧಾನ ಪರಿಷತ್ ಸದಸ್ಯರು, ಸಂಸದರೂ ಮತ ಚಲಾಯಿಸಬಹುದಾಗಿದೆ. ಆದರೆ, ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಲು  ಅರ್ಹರಾದವರ ಬಗ್ಗೆ ಪಕ್ಷಗಳಲ್ಲಿ ಗೊಂದಲ ಮೂಡಿತ್ತು.

ಈ ಬಗ್ಗೆ ಬಿಜೆಪಿ ಮುಖಂಡರು ಆಯುಕ್ತರಿಗೆ ದೂರನ್ನು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಆಯುಕ್ತರು ಅಂತಿಮ ಪಟ್ಟಿ ಸಿದ್ಧಪಡಿಸಿದ್ದು, ಅವರಲ್ಲಿ ಹಿಂದೆ ಮತದಾನ ಮಾಡಲು ಅರ್ಹರಾಗಿದ್ದ ಕಾಂಗ್ರೆಸ್‍ನ ವಿಧಾನಪರಿಷತ್ ಸದಸ್ಯರಾದ ದಯಾನಂದ ರೆಡ್ಡಿ ಮತ್ತು ನಜೀರ್ ಅಹಮ್ಮದ್ ಪಟ್ಟಿಯಿಂದ ಹೊರಗುಳಿದಿದ್ದಾರೆ.

ಕಾರಣ ಅವರು ಎರಡು ವರ್ಷಗಳ ಹಿಂದಷ್ಟೆ ತಮ್ಮ ವಿಳಾಸವನ್ನು ಬಿಬಿಎಂಪಿ ವ್ಯಾಪ್ತಿಯಿಂದ ಹೊರಗೆ ಬದಲಾಯಿಸಿದ್ದು. ಹೀಗಾಗಿ ಅವರ ಹೆಸರನ್ನು ಬಿಬಿಎಂಪಿ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದ್ದು, ಸಹಜವಾಗಿಯೇ ಮೇಯರ್ ಚುನಾವಣೆ ಮತದಾರರ ಪಟ್ಟಿಯಿಂದಲೂ ಕೈ ಬಿಡಲಾಗಿದೆ. ಹಾಗೆಯೇ ಹೊಸದಾಗಿ ವಿಧಾನ ಪರಿಷತ್‍ನ ಪಕ್ಷೇತರ ಸದಸ್ಯ ರಘು ಆಚಾರ್ ಸೇರಿಕೊಂಡಿದ್ದಾರೆ. ಇವರು ಚಿತ್ರದುರ್ಗ ವ್ಯಾಪ್ತಿ ಸದಸ್ಯರಾದರೂ ವಾಸವಿರುವುದು ಮತ್ತು ಮತದಾರರ ಪಟ್ಟಿಯಲ್ಲಿರುವುದು ಬೆಂಗಳೂರಿನಲ್ಲೇ. ಆದ್ದರಿಂದ ರಘು ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿದ್ದಾರೆ.

ಒಟ್ಟಾರೆ ಅರ್ಹ ಮತದಾರರು-260

  • ಬಿಜೆಪಿ ಬಲ 125
  • ಪಾಲಿಕೆ ಸದಸ್ಯರು 100
  • ಶಾಸಕರು 12
  • ವಿಪ ಸದಸ್ಯರು 9
  • ಲೋಕಸಭೆ 3
  • ರಾಜ್ಯಸಭೆ 1
  • ಜೆಡಿಎಸ್ 21
  • ಪಾಲಿಕೆ ಸದಸ್ಯರು 14
  • ಶಾಸಕರು 3
  • ವಿಪ ಸದಸ್ಯರು 3
  • ರಾಜ್ಯಸಭೆ 1
  • ಕಾಂಗ್ರೆಸ್ 100
  • ಪಾಲಿಕೆ ಸದಸ್ಯರು 76
  • ಶಾಸಕರು 13
  • ವಿಪ ಸದಸ್ಯರು 6
  • ಲೋಕಸಭೆ 2
  • ರಾಜ್ಯಸಭಾ 3
  • ಪಕ್ಷೇತರರು-14
  • ಪಾಲಿಕೆ ಸದಸ್ಯರು-8
  • ವಿಧಾನಪರಿಷತ್- 3 (ರಘು ಆಚಾರ್,
  • ಭೈರತಿ ಸುರೇಶ್, ಡಿ.ಯು.
  • ಮಲ್ಲಿಕಾರ್ಜುನ್)
  • ರಾಜ್ಯಸಭಾ-3 (ರಾಜೀವ್
  • ಚಂದ್ರಶೇಖರ್, ವಿಜಯï ಮಲ್ಯ
  • ಹಾಗೂ ಬಿ. ಜಯಶ್ರೀ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!