ಜಗದೀಶ್ ಶೆಟ್ಟರ್‍ 
ರಾಜಕೀಯ

ಜಗದೀಶ್ ಶೆಟ್ಟರ್ ಪಿಎಗೆ ನೋಟಿಸ್ ಜಾರಿ

ಮೈಸೂರು ಪೇಪರ್ ಮಿಲ್ (ಎಂಸಿಎಂ) ಹೋರಾಟದ ಬಿಸಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್‍ಗೂ ತಟ್ಟಿದೆ. ಸಂಸ್ಥೆಯ ವಿರುದ್ಧ ಚಟುವಟಿಕೆ...

ಬೆಂಗಳೂರು: ಮೈಸೂರು ಪೇಪರ್ ಮಿಲ್  (ಎಂಸಿಎಂ) ಹೋರಾಟದ ಬಿಸಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್‍ಗೂ ತಟ್ಟಿದೆ. ಸಂಸ್ಥೆಯ ವಿರುದ್ಧ ಚಟುವಟಿಕೆ  ನಡೆಸಿರುವುದಕ್ಕಾಗಿ ಶೆಟ್ಟರ್ ಪಿಎ (ಆಪ್ತ ಕಾರ್ಯದರ್ಶಿ) ಜಗನ್ನಾಥ್ ಬಂಗೇರಗೆ ನೋಟೀಸ್ ಜಾರಿಗೊಳಿಸಲಾಗಿದೆ. ಬಂಗೇರ ಮೂಲತಃ ಮೈಸೂರು ಪೇಪರ್  ಮಿಲ್ ಸಂಸ್ಥೆಯ ಸಂಪರ್ಕಾಧಿಕಾರಿ. ಆದರೆ, ಅವರು ಕಳೆದ 10 ವರ್ಷಗಳಿಂದ ಎರವಲು  ಸೇವೆ ಮೇರೆಗೆ ಸರ್ಕಾರದ ಮಂತ್ರಿಗಳುಮತ್ತು ಪ್ರಮುಖ ರಾಜಕೀಯ ನಾಯಕರ ಆಪ್ತ ಕಾರ್ಯದರ್ಶಿಯಾಗಿದ್ದಾರೆ. ಅದೇ ರೀತಿ ಈಗ ಜಗದೀಶ್ ಶೆಟ್ಟರ್ ಪಿ.ಎ. ಆಗಿದ್ದು ಅವರ ಆಪ್ತ ಕಾರ್ಯಕ್ರಮಗಳನ್ನು ಮಾತ್ರ ನಿರ್ವಹಿಸಬೇಕು. ಆದರೆ ಬಂಗೇರ ಅವರು ಎಂಪಿಎಂ ಹೋರಾಟದಲ್ಲಿ ಭಾಗಿಯಾಗಿದ್ದರಲ್ಲದೆ, ಆಡಳಿತ ಸಂಸ್ಥೆ ವಿರುದ್ಧ ಹೇಳಿಕೆಯನ್ನೂ ನೀಡಿದ್ದಾರೆ. ಹಾಗೆಯೇ ಮುಷ್ಕರಕ್ಕೂ  ಬೆಂಬಲ ನೀಡಿದ್ದಾರೆ ಎಂದು ಆರೋಪಿಸಲಾಗಿ ದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹರ್ಷ ಗುಪ್ತ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ನೋಟೀಸ್ ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video