ಬೆಂಗಳೂರು: ನಾನು ಹೆದರುವುದು ಎರಡು ಸಂಗತಿಗಳಿಗೆ ಮಾತ್ರ. ಒಂದು ನನ್ನ ಪತ್ನಿ, ಇನ್ನೊಂದು ಮಾಧ್ಯಮಕ್ಕೆ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೇಳಿಕೊಂಡರು. ಮಾಧ್ಯಮ ಒಂದು ರೀತಿ ಟೆಲಿಸ್ಕೋಪ್, ಮೈಕ್ರೋಸ್ಕೋಪ್, ಎಕ್ಸರೇ ರೀತಿ. ನಾವೆಷ್ಟೇ ದೂರದಲ್ಲಿದ್ದ ರೂ, ಸಮೀಪದಲ್ಲಿದ್ದರೂ ಹುಡುಕಿ ಸುದ್ದಿ ಮಾಡುತ್ತವೆ ಎಂದು ವಿಶ್ಲೇಷಿಸಿದರು.
ಸಿಎಂ ಸಿದ್ದರಾಮಯ್ಯಗೆ ಫೋನ್ ಅಲರ್ಜಿ
ನಾನು ಸ್ಮಾರ್ಟ್ ಫೋನ್ ಇಟ್ಟುಕೊಂಡಿಲ್ಲ. ನನಗೆ ಫೋನ್ ಅಂದ್ರೇನೆ ಇರಿಟೇಷನ್. ಸೋಷಿಯಲ್ ಮೀಡಿಯಾಗೆ ಸಂಬಂಧಿಸಿದ ನನ್ನೆಲ್ಲಾ ಕೆಲಸಗಳನ್ನು ನನ್ನ ಸಿಬ್ಬಂದಿಯವರಿಗೆ ವಹಿಸಿಬಿಟ್ಟಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು.