ಬೆಂಗಳೂರು: ರಾಜ್ಯದಲ್ಲಿ ಖಾತೆ ಬದಲಾವಣೆ ಬೇಡಿಕೆಗಳು ಕೇಳಿ ಬರುತ್ತಿರುವ ಬೆನ್ನಲ್ಲೇ, ಸಚಿವರ ಕಾರ್ಯ-ಸಾಧನೆ ಬಗ್ಗೆ ಮೌಲ್ಯಮಾಪನದ ಅಸ್ತ್ರ ಪ್ರಯೋಗಿಸಲು ಕಾಂಗ್ರೆಸ್ ಹೈಕಮಾಂಡ್ `ಅಧಿಕೃತ'ವಾಗಿ ಮುಂದಾಗಿದೆ. ಆದರೆ, ಇದು ಏಪ್ರಿಲ್‍ನಲ್ಲಷ್ಟೇ ಆರಂಭವಾಗಲಿದೆ. ಹೀಗಾಗಿ, ಸಚಿವ ಸಂಪುಟ ಪುನಾರಚನೆ ಇನ್ನೂ ತಡ ವಾಗಲಿದೆ. ಸಮನ್ವಯ ಸಭೆಗಾಗಿ ಮೂರು ದಿನಗಳಿಂದ ರಾಜ್ಯದಲ್ಲಿಯೇ ವಾಸ್ತವ್ಯ ಹೂಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಸಚಿವರ ಮೌಲ್ಯಮಾಪನ ನಡೆಸು ವುದಾಗಿ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತಾಡಿ, ಏ.1ರಿಂದ ರಾಜ್ಯದಲ್ಲಿ ಜನಸಂಪರ್ಕ ಸಭೆ ನಡೆಲಾಗುವುದೆಂದರು.