ಚ್.ಡಿ. ಕುಮಾರ ಸ್ವಾಮಿ 
ರಾಜಕೀಯ

ಬಿಕ್ಕಟ್ಟು ಸೃಷ್ಟಿಸಲು ಹೋಗಿ ಇಕ್ಕಟ್ಟಿಗೆ ಸಿಕ್ಕ ಕುಮಾರಸ್ವಾಮಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಬೇಕೆಂದು ಮುಂದಾಗಿರುವ ಜೆಡಿಎಸ್ ನಾಯಕ...

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಬೇಕೆಂದು ಮುಂದಾಗಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರ ಸ್ವಾಮಿ ಇರುಸುಮುರುಸು ಎದುರಿಸಬೇಕಾಯಿತು. ಎಚ್‍ಡಿಕೆಯ ಒಂದು ಕಾಲದ ಪರಮಾಪ್ತರಾಗಿದ್ದ ಜಮೀರ್ ಖಾನ್, ಚಲುವರಾಯ ಸ್ವಾಮಿಅವರು ರಾಜ್ಯಪಾಲರ ಭಾಷಣದವೇಳೆ ದೂರವೇ ಉಳಿದಿದ್ದರು. ಜತೆಗೆ ಅದೇ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಒಂದಷ್ಟು `ಹರ್ಷದ ಮಾತುಕತೆ' ನಡೆಸಿ ಕುಮಾರಸ್ವಾಮಿ ಕಣ್ಣುಕೆಂಪಗಾಗುವಂತೆ ಮಾಡಿದರು. ಇಷ್ಟಕ್ಕೇ ಎಲ್ಲವೂ ಮುಗಿಯಲಿಲ್ಲ. ರಾಜ್ಯಪಾಲ ಭಾಷಣದ ನಂತರ ಆಯೋಜಿಸಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗೂ ಇವರು ಗೈರಾಗಿದ್ದರು. ಸೋಮವಾರ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ನಿಯಮಾವಳಿಗಳೇನೂ ಮೊದಲೇ ನಿಗದಿಯಾಗಿರಲಿಲ್ಲ. ಭಾಷಣದ ನಂತರ ನಡೆಸಿದರಾಯಿತು ಎಂದೇ ಭಾವಿಸಲಾಗಿತ್ತು. ಆದರೆ, ರಾಜ್ಯಪಾಲರ ಭಾಷಣದ ನಂತರ ಸದನ ಮುಂದೂಡಿದ ನಂತರ ಜಮೀರ್‍ಖಾನ್, ಚಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿಅವರು ಅಲ್ಲಿಂದ ಜಾಗ ಖಾಲಿ ಮಾಡಿದರು. ಕುಮಾರ ಸ್ವಾಮಿಯೊಂದಿಗೆ ಉಳಿದ ಬೆರಳೆಣಿಕೆಯಷ್ಟು ಶಾಸಕರಷ್ಟೇ ಶಾಸಕರು ಭೇಟಿಗೆ ಹೋದರು.

ಪಕ್ಷದ ವಿಪ್ ಮಧು ಬಂಗಾರಪ್ಪ ಕರೆ ಮಾಡಿ ಕರೆದರೂ `ನಾನು ಬಂದುಬಿಟ್ಟೆ ಬ್ರದರ್, ಎಲ್ಲೋ ಹೊರಟೆ. ಇನ್ನೊಂದು ಬಾರಿ ಸಭೆ ಇದ್ದಾಗ ತಿಳಿಸು, ಬರುತ್ತೇನೆ. ಸಭೆಗೆ ಮುನ್ನ ಫೋನ್  ಮಾಡು ' ಎಂದು ಜಮೀರ್ ಹಾಗೂ ಚಲುವರಾಯಸ್ವಾಮಿ ಉತ್ತರ ನೀಡಿದ್ದಾರೆ. ಅಂದರೆ, ಸಭೆ ಇರುವ ಬಗ್ಗೆ ಅಧಿಕೃತ ಸೂಚನೆ ಇಲ್ಲದಿದ್ದರೂ,ಮಾಹಿತಿಯಂತೂ ಅವರಲ್ಲಿ ಇದ್ದೇ ಇತ್ತು. ಆದರೂ, ಸಭೆಗೆ ಭಾಗವಹಿಸಲಿಲ್ಲ. ಇದು ಕುಮಾರಸ್ವಾಮಿ ಅವರೊಂದಿಗಿನ ವಿರಸ ಇನ್ನೂ ಮುಂದುವರಿದಿದೆ ಎಂಬುದರಸೂಚಕವಾಗಿತ್ತು. ಇದರ ಮಧ್ಯೆ, ಸಚಿವ ಡಿ.ಕೆ. ಶಿವಕುಮಾರ್ ಅವರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜಮೀರ್‍ಖಾನ್, ಚಲುವರಾಯಸ್ವಾಮಿ, ಮಾಗಡಿಯಬಾಲಕೃಷ್ಣ ಅವರು ಹೋಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿವೆ. ಈ ಸಂದರ್ಭದಲ್ಲಿ ಹಲವು ರೀತಿಯ ಮಾತುಕತೆಗಳೂ ನಡೆದಿವೆ ಎಂಬಬಗ್ಗೆಯೂ ಗುಮಾನಿ ಇದೆ. `ನಮ್ಮಲ್ಲಿ ಸಣ್ಣಪುಟ್ಟ ವಿರಸ, ಅಸಮಾಧಾನಗಳಿವೆ. ಅವುಗಳನ್ನು ಇಷ್ಟರಲ್ಲಿಯೇ ಸರಿಪಡಿಸಿಕೊಳ್ಳುತ್ತೇವೆ' ಎಂದುಕುಮಾರಸ್ವಾಮಿ ಹಲವು ತಿಂಗಳಿಂದ ಹೇಳುತ್ತಿದ್ದಾರೆ. ಆದರೆ ಆ `ಇಷ್ಟರಲ್ಲೇ' ಎಂಬುದಕ್ಕಿನ್ನೂ ಮಹೂರ್ತ ಕೂಡಿ ಬಂದಿಲ್ಲ. ಸದ್ಯಕ್ಕೆ ಬರುವ ಲಕ್ಷಣಗಳೂ ಕಾಣುತ್ತಿಲ್ಲ. ಜೆಡಿಎಸ್ ಒಡಕು ಮುಂದುವರಿದಿದೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ

ನೇಪಾಳ ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋದವು ಒಂಬತ್ತು ಜಲವಿದ್ಯುತ್ ಕೇಂದ್ರಗಳು!