ವಿಧಾನಸಭೆ: ತಮಿಳುನಾಡಿನಲ್ಲಿ ಅಮ್ಮ ಸಿಮೆಂಟ್ ಜಾರಿಯಲ್ಲಿ ಇದ್ದಂತೆ ಕರ್ನಾಟಕದಲ್ಲಿ 'ಅಯ್ಯ ಸಿಮೆಂಟ್' ಜಾರಿಗೆ ತನ್ನಿ ಎಂದು ಬಿಜೆಪಿ ನಾಯಕ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ಸಿಮೆಂಟ್ ಬೆಲೆ ಇಳಿಕೆ ಮಾಡಿ ಎಂಬ ಪ್ರಶ್ನೆಗೆ ಸಚಿವ ಡಿ.ಕೆ ಶಿವಕುಮಾರ್ ಅವರು ಈ ಮಾತನ್ನು ಕೇಂದ್ರಕ್ಕೆ ಹೇಳಿ ಎಂದು ಬಿಜೆಪಿ ನಾಯಕರಿಗೆ ಸೂಚಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಸಿ.ಟಿ ರವಿ ಅವರು ಕರ್ನಾಟಕದಲ್ಲಿ 'ಅಯ್ಯ ಸಿಮೆಂಟ್' ಜಾರಿಗೆ ತನ್ನಿ ಎಂದಿದ್ದಾರೆ.
ಸಿಮೆಂಟ್ ಚೀಲದ ಮೇಲೆ ಸಿದ್ದರಾಮಯ್ಯ ಫೋಟೋ ಹಾಕಿಸಿ, 100 ರು. ದರದಲ್ಲಿ ಸಿಮೆಂಟ್ನ್ನು ಮಾರಾಟ ಮಾಡಿ ಎಂದು ಅವರು ಹೇಳಿದ್ದಾರೆ.