ವಿಧಾನಸಭೆ: ತಪ್ಪಿತಸ್ಥ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಿ ಎಂದರೆ ಸಚಿವರು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅಡ್ಡಾಡಿಸುತ್ತಾರೆ. ಸರ್ಕಾರ ದಿಂದ ಉತ್ತರವೇ ಬರಲ್ಲ. ಮಂತ್ರಿಗಳು ಸದನದಲ್ಲಿ ಇಲ್ಲ ಅಂದರೆ ಎಲ್ಲಿ ಹೋಗುತ್ತಾರೆ? ಸರ್ಕಾರದ ಮಾತಿಗೂ ಕೃತಿಗೂ ಬಾಳ ವ್ಯತ್ಯಾಸಇದೆ...
ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಗುರುವಾರ ಹಲವು ಬಾರಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸಮುದಾಯ, ಆಹಾರ ಸಚಿವರ ಮೇಲಂತೂ ಅಕ್ಷರಶಃ ಹರಿಹಾಯ್ದರು. ಒಂದು ಹಂತದಲ್ಲಿ ಮುಖ್ಯಮಂತ್ರಿಯವರ ಮೇಲೂ ಅವರ ಉಪಸ್ಥಿತಿಯಲ್ಲೇ ಅಸಮಾಧಾನ ವ್ಯಕ್ತಪಡಿಸಿದರು.`ನೋಡಿ, ಜಯಚಂದ್ರ, ನಿಮ್ಮ ಮಾತಿಗೂ ಕೃತಿಗೂ ಸಾಕಷ್ಟು ವ್ಯತ್ಯಾಸ ಇದೆ. ಆಡಳಿತಕ್ಕೆ ಸಾಕಷ್ಟು ಚುರುಕು ನೀಡಬೇಕಾದ ಅಗತ್ಯ ಇದೆ. ಆದರೆ ಆಗುತ್ತಿಲ್ಲ. ನಿಮಗೆ ಒಂದು ಹೇಳಲಾ? ಹೊಸಕೋಟೆ ಬಳಿ ಒಂದು ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ.ಇದು ಸಾಬೀತಾಗಿದ್ದು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು . ನಾನು ಕಂದಾಯ ಇಲಾಖೆಗೆ ಹಾಗೂ ಸಚಿವರಿಗೆ ಸೂಚಿಸಿದೆ. ಆದರೆ ಸಚಿವರು ಕಡತವನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಅದ್ದಾಡಿಸು ಹೆಂಗಪ್ಪಾ?' ಎಂದು ಪ್ರಶ್ನಿಸಿದರು.
`ನೋಡಿ, ಅವರೆಲ್ಲಿ ಹೋದರು ದಿನೇಶ್ ಗುಂಡೂರಾವ್? ಕಾರ್ಡ್ ಕೊಡೋಕೆ ಒಂದು ಸಮೀಕ್ಷೆ ಮಾ ಡಿ ಎಂದು ಹೇಳಿದ್ದೆ. ಆದರೆ ಈವರೆಗೆ ಅದನ್ನು ಮಾಡಿಲ್ಲ. ಕೇಳಿದರೆ ಮೊಬೈಲ್, ಎಪಿಕ್ ಎಂದೆಲ್ಲ ಹೇಳುತ್ತಾರೆ. ಚುರುಕು ಇಲ್ಲದೆ ಹೋದರೆ ಹೇಗೆ?' ಎಂದು ಪ್ರಶ್ನಿಸಿದರು. ಇದಕ್ಕೆ ಸಚಿವ ಟಿ.ಬಿ. ಜಯಚಂದ್ರ ನಿರುತ್ತರರಾದರು.
ಉತ್ತರವೇ ಕೊಡಲ್ಲ: ವಿಧಾನಸಭೆಯಲ್ಲಿ ಕೇಳಲಾಗುವಪ್ರಶ್ನೆಗಳಿಗೆ ಸರ್ಕಾರದಿಂದ ಉತ್ತರವೇ ಬರುತ್ತಿಲ್ಲ. ನಾನು ಸಾಕಷ್ಟು ಗಮನಿಸಿದ್ದೇನೆ. ಬಹಳಷ್ಟು ಉತ್ತರಗಳನ್ನೇ ನೀಡುತ್ತಿಲ್ಲ. ಹೀಗಾದರೆ ಹೇಗೆ? ತುಂಬಾ ತೊಂದರೆ ಆಗುತ್ತದೆ ನೋಡಿ. ಉತ್ತರ ಕೊಡೋಕೂ ನಿಮಗೆ ಆಗಲ್ಲವೇ ಎಂದು ಆಹಾರ ಸಚಿವ ದಿನೇಶ್ ಗುಂಡೂರಾವ್‍ಗೆ ಸ್ಪೀಕರ್ ಪ್ರಶ್ನಿಸಿದರು. ಎಲ್ಲ ಸಚಿವರೂ ಹೀಗೇ ಮಾಡಿದರೆ ಹೇಗೆ ಎಂದು ಜಯಚಂದ್ರರಿಗೂ ಪ್ರಶ್ನೆ ಹಾಕಿದರು.
ಎಲ್ಲಿ ಹೋಗುತ್ತಾರೆ?: ವಿಧಾನಸಭೆಯಲ್ಲಿ ಮಂತ್ರಿಗಳು ಇರುವುದೇ ಇಲ್ಲ. ಸದನದಲ್ಲಿ ಇಲ್ಲ ಅಂದ ಮೇಲೆ ಎಲ್ಲಿ ಹೋಗುತ್ತಾರೆ? ಇಲ್ಲೂ ಇಲ್ಲ, ಪರಿಷತ್ತಲ್ಲೂ ಇಲ್ಲ. ಎಷ್ಟು ಬಾರಿ ಹೇಳಿದ್ದೇನೆ. ಆದರೂ ಯಾರೂ ಕೇಳುತ್ತಿಲ್ಲ. ಇನ್ನೇಗೆ ಹೇಳೋದು? ನೋಡ್ರಿ, ಸರಿಯಾಗಿ ಹೇಳ್ರಿ ಎಂದು ಮುಖ್ಯ ಸಚೇತಕ ಅಶೋಕ ಪಟ್ಟಣ ಅವರಿಗೆ ತಾಕೀತು ಮಾಡಿದರು. ಹಣ ಕೊಟ್ಟರೆ ಸರ್ಕಾರ ಅನ್ನಿಸಿಕೊಳ್ಳಲ್ಲ! ವಿದ್ಯಾರ್ಥಿಗಳಿಗೆ ಆಯಾ ವರ್ಷದ ಹಣವನ್ನು ಆಯಾ ವರ್ಷವೇ ನೀಡಿದರೆ ಅದು ಸರ್ಕಾರ ಆಗಿ ಉಳಿಯುವುದಿಲ್ಲ. ಹಣವನ್ನು ಉಳಿಸಿಕೊಂಡರೇ ಸರ್ಕಾರ. ಅದೇ ವ್ಯವಸ್ಥೆ! (ಇಲ್ಲದಿದ್ದರೆ ಯಾರೂ ಸರ್ಕಾರವನ್ನು ನೆನಪಿಸಿಕೊಳ್ಳುವುದಿಲ್ಲ ಎಂಬ ಅರ್ಥದಲ್ಲಿ) ಹೀಗೆಂದು ವ್ಯಂಗ್ಯದ ಧಾಟಿಯಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಜೆಡಿಎಸ್‍ನ ಮಧು ಬಂಗಾರಪ್ಪ ಅವರಿಗೆ `ಬುದ್ಧಿ'ಮಾತು ಹೇಳಿದರು.
ಸಂದರ್ಭ: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಬೇಕು ಎಂದು ಮಧು ಬಂಗಾರಪ್ಪ ಆಗ್ರಹಿಸಿದಾಗ. ಸೊರಬ ತಾಲೂಕಿನಲ್ಲಿ ಅ„ಕಾರಿಗಳು ಹಾಗೂ ಬ್ಯಾಂಕ್ ನಡುವಿನ ಸಂಪರ್ಕ ಕೊರತೆಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಲಭ್ಯವಾಗಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಯಾರೂ ಸರಿಯಾಗಿ ಉತ್ತರಿಸುತ್ತಿಲ್ಲ. ಸಾಕಷ್ಟು ಲೋಪ ಎಸಗಲಾಗಿದೆ ಎಂದು ಮಧು ಬಂಗಾರಪ್ಪ ಪ್ರಶ್ನೋತ್ತರ ವೇಳೆಯಲ್ಲಿ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಖಾತೆ ಸಚಿವ ಆಂಜನೇಯ, ಇನ್ನೆರಡು ಮೂರು ದಿನಗಳಲ್ಲಿ ಹಣ ಬಿಡುಗಡೆ ಮಾಡಿಸುತ್ತೇನೆ. ಬೇಜಾವಾಬ್ದಾರಿಯಿಂದ ವರ್ತಿಸಿದ ಅಧಿಕಾರಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಹಿರಿಯ ಅಧಿ ಕಾರಿಗಳಿಂದ ತನಿಖೆ ನಡೆಸಿ ಶಿಕ್ಷೆಯನ್ನೂ ಕೊಡುತ್ತೇವೆ ಎಂದು ಭರವಸೆನೀಡಿದರು.
ನೀವು ಅಷ್ಟೊಂದು ದುರ್ಬಲರಾ?
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಹೀಗೆ ಮಾಡುತ್ತಿದ್ದೇವೆ ಎಂದು ರಕ್ಷಣೆ ಪಡೆಯು ವುದು ಸರ್ಕಾರದ ಅಸಾಮರ್ಥ್ಯವನ್ನು ತೋರುವುದಿಲ್ಲವೇ? ಒಂದು ದಿಟ್ಟ ನಿಲುವು ತೆಗೆದುಕೊಂಡು ಈ ಸದನದ ಮೂಲಕ ಬಾಲಸುಬ್ರಹ್ಮಣ್ಯಂ ವರದಿ ಜಾರಿಗೊಳಿಸಿ.
ಕಾಗೋಡು ತಿಮ್ಮಪ್ಪ, ಸ್ಪೀಕರ್