ರಾಜಕೀಯ

ಕೆಂಪಣ್ಣ ಆಯೋಗಕ್ಕೆ ಕೊನೆಗೂ ಕಡತ ಸಲ್ಲಿಕೆ

Rashmi Kasaragodu

ಬೆಂಗಳೂರು: ಅರ್ಕಾವತಿ ಡಿನೋಟಿಫಿ ಕೇಷನ್ ಪ್ರಕರಣದ ತನಿಖೆಗೆ ನೇಮಿಸಲಾಗಿರುವ ನ್ಯಾ. ಕೆಂಪಣ್ಣ ಆಯೋಗಕ್ಕೆ ಕೊನೆಗೂ ರಾಜ್ಯ ಸರ್ಕಾರ ಕಡತವನ್ನು ಸಲ್ಲಿಸಿದೆ. ಆಯೋಗದ ಅವಧಿ ಮುಕ್ತಾಯ ಗೊಳ್ಳುತ್ತಾ ಬಂದಿದ್ದರೂ ಬಿಡಿಎ ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ ಯಾವುದೇ ಕಡತ ಸಲ್ಲಿಕೆಯಾಗಿರಲಿಲ್ಲ. ಹೀಗಾಗಿ ನೆಪ ಮಾತ್ರಕ್ಕೆ ತನಿಖೆ ನಡೆಸುವ ಪ್ರಯತ್ನ ನಡೆ ಯುತ್ತಿದೆ ಎಂಬ ಆರೋಪ ವ್ಯಕ್ತವಾಗಿತ್ತು. ಜತೆಗೆ ಅವಧಿ ವಿಸ್ತರಿಸುವಂತೆ ಆಯೋ ಗ ಪತ್ರ
ಬರೆದಿತ್ತು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ತಮ್ಮ ದೆಹಲಿ ಭೇಟಿ ಸಂದರ್ಭದಲ್ಲಿ ಮಾಧ್ಯಮದ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸೋಮವಾರ ಆಯೋಗಕ್ಕೆ ಕಡತ ಸಲ್ಲಿಕೆ ಮಾಡಲಾಗುವುದು ಎಂದು ಕಳೆದ ಶನಿವಾರ ಹೇಳಿಕೆ ನೀಡಿದ್ದರು. ಆದರೆ ಕಡತ ಬಿಡಿಎ ಕಚೇರಿಯಿಂದ ರವಾನೆಯಾಗಿರಲಿಲ್ಲ. ಆದರೆ ಗುರುವಾರ ಮಧ್ಯಾಹ್ನ 12 ಗಂಟೆಗೆ ಡಿವೈಎಸ್ಪಿ ಯೋಗಣ್ಣ ನೇತೃತ್ವದಲ್ಲಿ ಸುಮಾರು 23 ಟ್ರಂಕ್ಗಳಲ್ಲಿ 1.30 ಲಕ್ಷ ಕಡತಗಳನ್ನು ಬಿಗಿ ಭದ್ರತೆಯೊಂದಿಗೆ  ಆಯೋಗದ ಕಚೇರಿಗೆ ಕಳುಹಿಸಿಕೊಡಲಾಗಿದೆ. 2004ರಿಂದ 2014ರವರೆಗೆ ಅರ್ಕಾವತಿ ಬಡಾವಣೆ ಸಂಬಂಧ ನಡೆಸಿದ ನೋಟಿಫಿಕೇಷನ್, ಡಿನೋಟಿಫಿಕೇಷನ್ ಸೇರಿದಂತೆ ಹಲವು ಮಹತ್ವದ ಅಂಶಗಳು ಈ ಟ್ರಂಕ್ಗಳಲ್ಲಿ ಅಡಕವಾಗಿದೆ.

SCROLL FOR NEXT