ನವದೆಹಲಿ: ಕರ್ನಾಟಕದಲ್ಲಿ ಎದ್ದಿರುವ ದಲಿತ ಮುಖ್ಯಮಂತ್ರಿ ವಿವಾದಕ್ಕೂ, ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಯಾರು ದಲಿತ ಮುಖ್ಯಮಂತ್ರಿಗಾಗಿ ಒತ್ತಾಯಿಸುತ್ತಿದ್ದಾರೊ, ಯಾರು ಅದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೋಅವರನ್ನೇ ಕೇಳಬೇಕು ಎಂದು ಖರ್ಗೆ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ರಾಜಕೀಯ ವಿಚಾರದಲ್ಲಿ ನಾನು ಏನನ್ನೂಮಾತನಾಡುವುದಿಲ್ಲ ಎಂದರು. ದಲಿತ ಮುಖ್ಯಮಂತ್ರಿ ವಿಚಾರ ಕುರಿತಂತೆ ಕಾಂಗ್ರೆಸ್ ಹೈಕಮಾಂ ಡ್ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಈ ಬಗ್ಗೆ ಹೆಚ್ಚಿಗೆ ಯಾರು ಹೇಳುವುದೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.