ಸುವರ್ಣ ವಿಧಾನಸೌಧ: ರಸ್ತೆ ನಿರ್ಮಾಣ ವಿಚಾರದಲ್ಲಿ ಸರ್ಕಾರ ಇಚ್ಛಾಶಕ್ತಿ ಪ್ರದರ್ಶನ ಮಾಡದೇ ಇರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖ್ಯ ಸಚೇತಕ ಸುನೀಲ್ ಕುಮಾರ್ ಲೋಕೋಪಯೋಗಿ ಸಚಿವ ಡಾ. ಎಚ್.ಎಸ್. ಮಹಾದೇವಪ್ಪ ಅವರ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ. ಲೋಕೋಪಯೋಗಿ ಇಲಾಖೆ ಬೇಡಿಕೆ ಚರ್ಚೆಗೆ ಚಾಲನೆ ನೀಡಿ ಮಾತನಾಡುವಂತೆ ಪಕ್ಷ ನೀಡಿದ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಅವರು, ರಸ್ತೆ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬವನ್ನು ದಾಖಲೆ ಸಹಿತ ಅನಾವರಣಗೊಳಿಸಿದರು. ಮಂಗ ಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಒಂದೂ ಕಾಲು ಕಿ.ಮೀ. ರಸ್ತೆ ಕಾಮಗಾರಿಗೆ 2013ರಲ್ಲೇ ಸಕರಾರ ಅನುಮತಿ ನೀಡಿದೆ. ಆದರೆ 2 ವರ್ಷ ಕಳೆದರೂ ನಿರ್ಮಾಣವಾಗಿಲ್ಲ. ಇದರಿಂದ ಸರ್ಕಾರ ಎಷ್ಟು ವೇಗವಾಗಿ ಕೆಲಸ ಮಾಡುತ್ತಿದೆ ಎಂಬುದು ತಿಳಿಯುತ್ತದೆ. ಜಿಲ್ಲಾ ಮುಖ್ಯರಸ್ತೆಗಳು ರಾಜ್ಯದಲ್ಲಿ 49,928 ಕಿಮೀನಷ್ಟಿದೆ. ಆದರೆ ಇದನ್ನುನಿರ್ವಹಣೆ ಮಾಡುವುದಕ್ಕೆ ಸರ್ಕಾರ ಕೇವಲ ರು.249 ಕೋಟಿ ಮಾತ್ರ ನೀಡಿದೆ. ಈ ಹಣದಲ್ಲಿ ಡಾಂಬರ್ ಹಾಕುವುದಕ್ಕೆ ಸಾಧ್ಯವಿಲ್ಲ. ಸಗಣಿ ಹಾಕಿ ಸಾರಿಸಿ ರಂಗೋಲಿ ಮಾತ್ರ ಹಾಕಬಹುದು ಎಂದರು.