ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿ, ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಒಬ್ಬ ಕ್ರಿಮಿನಲ್ ಆಗಿದ್ದು, ಆತನ ಬಗ್ಗೆ ಸದನದಲ್ಲಿ ಚರ್ಚೆ ಮಾಡುವುದು ಬೇಡ ಎಂದು ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವರು ಹೇಳಿದ್ದಾರೆ.
ಇಂದು ವಿಧಾನಸಭೆಯಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣದ ಚರ್ಚೆಯ ವೇಳೆ ಮಾತನಾಡಿದ ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ಅವರು, ಅಶ್ವಿನ್ ರಾವ್ ಒಬ್ಬ ಕ್ರಿಮಿನಲ್. ಹೀಗಾಗಿ ಆತನ ಬಗ್ಗೆ ಸದನದಲ್ಲಿ ಚರ್ಚಿಸುವುದು ಬೇಡ ಎಂದರು.
ಒಂದು ವೇಳೆ ಅಶ್ವಿನ್ ರಾವ್ ಬಗ್ಗೆ ಚರ್ಚಿಸುವುದಾದರೆ, ಭೂಗತ ಪಾತಕಿ ಚಾಲ್ಸ್ ಶೋಭರಾಜ್ ಬಗ್ಗೆಯೂ ಚರ್ಚಿಸಬಹುದು. ಆದರೆ ಬೇಡ ಎಂದರು.