ವಿಧಾನ ಪರಿಷತ್: ಮಂಡ್ಯ ಮೈ ಶುಗರ್ ಸಕ್ಕರೆ ಕಾರ್ಖಾನೆಯ ವಿಚಾರವಾಗಿ ಸಚಿವ ಮಹದೇವ ಪ್ರಸಾದ್ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ
ನಡೆಯಿತು. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಅಶ್ವತ್ಥನಾರಾಯಣ, ಮೈಶುಗರ್‍ನಲ್ಲಿ ನಡೆಯುತ್ತಿರುವ ಅವ್ಯವಹಾರ ಪ್ರಸ್ತಾಪಿಸಿದರಲ್ಲದೇ, ನಮ್ಮ ಸರ್ಕಾರವಿದ್ದಾಗಲೂ ಅಲ್ಲಿದ್ದ ಅಧಿಕಾರಿಗಳು ಲೂಟಿ ಮಾಡಿದ್ದರು. ಈಗಲೂ ಕೂಡ ಕಾರ್ಖಾನೆ ಆಧುನೀಕರಣದ ಹೆಸರಲ್ಲಿ ಹಣದ ಲೂಟಿ ನಡೆಯುತ್ತಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದರು.
ಅಷ್ಟೇ ಅಲ್ಲ, ನೀವು ಮುಖ್ಯಮಂತ್ರಿ ಹಿಂದೆ ಸುತ್ತಾಡುವುದನ್ನು ಕಡಿಮೆಮಾಡಿ, ಕಾರ್ಖಾನೆಗೆ ಭೇಟಿ ಕೊಟ್ಟು ಪರಿಸ್ಥಿತಿ ನೋಡಿ. ತಾಕತ್ತಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ
ಎಂದು ಸಚಿವರನ್ನು ಟೀಕಿಸಿದರು. ಇದರಿಂದ ಸಿಟ್ಟಾದ ಸಚಿವ ಮಹದೇವ ಪ್ರಸಾದ್, `ನನ್ನ ರಾಜಕೀಯ ಜೀವನದ ಬಗ್ಗೆ ಗೊತ್ತಿಲ್ಲದೇ ಏನೇನೋ ಲಘುವಾಗಿ ಮಾತನಾಡು ತ್ತಿದ್ದಾರೆ. ನಾನು ಮುಖ್ಯಮಂತ್ರಿ ಯವರ ಸಹಪಾಠಿಯಾಗಿ ಜೊತೆಗಿರುತ್ತೇನೆ. ನಾನು ಎಲ್ಲೆಲ್ಲಿಗೆ ಭೇಟಿಕೊಡು ತ್ತೇನೆಂದು ಅಶ್ವತ್ಥನಾರಾಯಣ ಅವರಿಗೆ ತಿಳಿಸಲು ಸಾಧ್ಯವೇ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಈ ವೇಳೆ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮತ್ತು ಬಸವರಾಜ ಹೊರಟ್ಟಿ ಸಹ ಅಶ್ವತ್ಥ ನಾರಾಯಣ ಅವರ ಬೆಂಬಲಕ್ಕೆ ನಿಂತು, ನಮ್ಮ ಸರ್ಕಾರದ ಅವ„ಯಲ್ಲೂ ಅಧಿಕಾರಿಗಳು ಲೂಟಿ ಮಾಡಿ ದ್ದಾರೆಂದು ಅಶ್ವತ್ಥನಾರಾಯಣ ಅವರೇ ಹೇಳುತ್ತಿರುವಾಗ ತನಿಖೆ ನಡೆಸಲು ನಿಮಗೇನು ಕಷ್ಟ' ಎಂದು ಮುಗಿಬಿದ್ದರು. ನಂತರ ಪ್ರತಿಕ್ರಿಯಿಸಿದ ಸಚಿವರು, ಅಲ್ಲಿ ಸಾಕಷ್ಟು ಅವ್ಯವಹಾರ ನಡೆದು ಹೋಗಿದೆ. ಈಗ ಪರಿಸ್ಥಿತಿ ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಅಲ್ಲಿನ ಬಾಯ್ಲರ್ 2 ಕೋಟಿ ಕೋಟಿ ಟನ್ ಕಬ್ಬು ಅರೆಯುವಷ್ಟು ಸೇವೆ ನೀಡಬೇಕಿತ್ತು. ಆದರೆ, ಅದು 7-8 ಲಕ್ಷ ಟನ್ ಕಬ್ಬು ಅರೆಯುವುದ ರೊಳಗೆ ಹಾಳಾಗಿದೆ. ಇದೀಗ ದುರಸ್ತಿಪಡಿಸುತ್ತಿದ್ದು ಸೆಪ್ಟೆಂಬರ್ ತಿಂಗಳ ಒಳಗೆ ಆ ಕಾರ್ಯ ಪೂರ್ಣಗೊಳಿಸಿ ಅಕ್ಟೋಬರ್ ನಿಂದ ಕಬ್ಬು ಅರೆಯುವ ಕಾರ್ಯ ಆರಂಭಿಸುವ ಪ್ರಯತ್ನ ನಡೆದಿದೆ. ಅಲ್ಲಿನ ನೌಕರರಲ್ಲಿ ಶಿಸ್ತು ತರುವ ಕೆಲಸ ನಡೆಯುತ್ತಿದೆ. ಲೋಪದೋಷ ಗಳನ್ನು ಸರಿಪಡಿಸಿ ಇಡೀ ವ್ಯವಸ್ಥೆಯನ್ನು ಸರಿದಾರಿಗೆ ತರುವ ಎಲ್ಲಾ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. ರಾಜ್ಯ ಸರ್ಕಾರ ಕಾರ್ಖಾನೆ ಪಡೆದುಕೊಂಡಿದ್ದ ಸಾಲ ಮರುಪಾವತಿಗಾಗಿ ಈವರೆಗೆ ರು. 102.09 ಕೋಟಿ ನೀಡಿದ್ದು, ಕೋ-ಜನರೇಷನ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ರು.5.64 ಕೋಟಿ ರೂಪಾಯಿ ಸಾಲ ಹಾಗೂ ರು.12.65 ಕೋಟಿ ಸಹಾಯಧನ ಪಡೆದು ಕೊಂಡಿದೆ. 2007ರಲ್ಲಿ ವಿದ್ಯುತ್ ಉತ್ಪಾದನಾ ಘಟಕವು ಪ್ರಾಯೋಗಿಕ ವಾಗಿ ಚಾಲನೆಗೊಂಡಿದ್ದು, ಬಳಿಕ ಸಾಕಷ್ಟು ಪ್ರಮಾಣದಲ್ಲಿ ಬಯೋ ಗ್ಯಾಸ್ ಉತ್ಪಾದನೆಯಾಗದ ಹಿನ್ನಲೆ ಯಲ್ಲಿ ವಿದ್ಯುತ್ ಉತ್ಪಾದನೆಯಾಗಿಲ್ಲ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ಕಬ್ಬು ಅರೆಯುವಿಕೆಯ ಹಂಗಾಮಿನಲ್ಲಿ ವಿದ್ಯುತ್ ಉತ್ಪಾನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.