ರಾಜಕೀಯ

ತಕ್ಷಣ ರೈತ ಸಾಲ ಮನ್ನಾ ಮಾಡಿ: ದೇವೇಗೌಡ

ಬೆಂಗಳೂರು: ನೀರು ಬಾರದ ಬೋರ್‍ವೆಲ್‍ಗಳು ಹಾಗೂ ಬೆಳೆಗೆ ಸಾಲ ಮಾಡಿ ನಷ್ಟ ಹೊಂದಿರುವ ರೈತರ ಸಾಲ ಮನ್ನಾ ಮಾಡಬೇಕು. ಅಲ್ಲದೆ, ಕೂಡಲೇ ಶೂನ್ಯ ಬಡ್ಡಿಗೆ ಸಾಲ ನೀಡಬೇಕು. ಈ ಕಾರ್ಯ ಸಮರೋಪಾದಿಯಲ್ಲಿ ಸಾಗಲಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆಗ್ರಹಿಸಿದ್ದಾರೆ.

ರೈತರು ಆತ್ಮಹತ್ಯೆ ಮeಡಿಕೊಳ್ಳಲು ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚಿ ವರದಿ ಸಲ್ಲಿಸಲು ಮ್ಯಾಜಿಸ್ಟ್ರೇಟ್ ಸಮಿತಿ ರಚನೆ ಮಾಡಿ, ಆ ಸಮತಿ ವರದಿ ಕೊಟ್ಟ ನಂತರ ಪರಿಹಾರ ನೀಡುವ ಕ್ರಮ ಸರಿಯಲ್ಲ. ಕಾರಣಗಳೇನೇ ಇರಲಿ ಸಾವು ಸಾವೇ, ಆದ್ದರಿಂದ ಸರ್ಕಾರ ಕೂಡಲೇ ಈ ತುರ್ತು ಕ್ರಮ ಕೈಗೊಳ್ಳಬೇಕು. ಇದು ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ನಿಜವಾಗಿ ಹೇಳುವ ಸಾಂತ್ವನ ಎಂದು ಭಾನುವಾರ ಸುದ್ದಿಗೊಷ್ಠಿಯಲ್ಲಿ ಅವರು ತಿಳಿಸಿದರು.

ಬ್ಯಾಂಕ್‍ಗಳೇ ಕಾರಣ: ಲೀಡ್ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಇರುವ ಸಹಕಾರಿ ಬ್ಯಾಂಕ್‍ಗಳು ಅಗತ್ಯದಷ್ಟು ರೈತರಿಗೆ ಸಾಲ ನೀಡಿದೇ ಇರುವುದೇ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. ಇದರಿಂದ ರೈತರು ಖಾಸಗಿ ಸಾಲಕ್ಕೆ ಮುಂದಾಗುತ್ತಾರೆ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ಮತ್ತು ಸಹಕಾರಿ ಬ್ಯಾಂಕ್ ಗಳಲ್ಲಿ ಸುಲಭವಾಗಿ ರೈತರಿಗೆ ಸಾಲ ನೀಡುವ ವ್ಯವಸ್ಥೆ ಮಾಡಬೇಕು. ಕಬ್ಬು ಬೆಳೆಗಾರರಿಗೆ ಕೊಡಬೇಕಾದ ಹಣ ವನ್ನು ತ್ವರಿತವಾಗಿ ಕೊಡಿಸಬೇಕೆಂದು ಒತ್ತಾಯಿಸಿದರು.

ರಾಷ್ಟ್ರೀಕೃತ ಬ್ಯಾಂಕ್‍ಗಳು ಅನ್ನದಾತರನ್ನು ಅಸ್ಪೃಶ್ಯರಂತೆ ಕಾಣುತ್ತಿವೆ. ಇಂತಹ ನೀಚ ಮನೋಭಾವ ತೊಲಗದ ಹೊರತು ದೇಶ ಉದಾಟಛಿರ ಆಗುವುದಿಲ್ಲ. ನಾನು ಸಿಎಂ ಆಗಿದ್ದಾಗ ರೈತರ ರು.950 ಕೋಟಿ ಸಾಲ ಮನ್ನಾ ಮಾಡಿದ್ದೆ ಎಂದು ಗೌಡರು ಹೇಳಿದರು.

ಪಲಾಯನವಾದ ಬೇಡ: ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ರೈತರ ಸಮಸ್ಯೆ ಬಗ್ಗೆ ಚರ್ಚಿಸಲು ಕೇಂದ್ರಕ್ಕೆ ನಿಯೋಗ ಹೋಗಬೇಕೆಂದು ಹೇಳುತ್ತಾರೆ. ಹಿಂದೆ ಕಾವೇರಿ, ಕೃಷ್ಣ ವಿವಾದ ಸೇರಿದಂತೆ ಹಲವು ಬಾರಿ ಕೇಂದ್ರಕ್ಕೆ ನಿಯೋಗ ಕರೆದೊಯ್ಯಲಾಗಿದೆ. ಸಾಧನೆ ಏನೂ ಆಗಿಲ್ಲ. ಆದ್ದರಿಂದ ರಾಜ್ಯ ಸರ್ಕಾರವೇ ಸಾಧ್ಯವಾದಷ್ಟು ಮಟ್ಟಿಗೆ ರೈತರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಪ್ರಾಮಾಣಿಕ ಯತ್ನ ಮಾಡಬೇಕು. ನಿಯೋಗ ಎಂಬುದು ಸಮಸ್ಯೆಯ ಪಲಾಯನ ವಾದವಾಗುತ್ತದೆ ಎಂದು ಗೌಡರು ಹೇಳಿದರು.

SCROLL FOR NEXT