ರಾಜಕೀಯ

ಎನ್ ಡಿ ಎ ಗೆ ಸಂಚಾಲಕರನ್ನು ನೇಮಿಸಿ: ಮೋದಿಗೆ ಮಿತ್ರಪಕ್ಷಗಳ ಒತ್ತಾಯ

Srinivas Rao BV

ನವದೆಹಲಿ: ಮುಂಗಾರು ಅಧಿವೇಶನದಲ್ಲಿ ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯುತ್ತಿದ್ದರೆ, ಇತ್ತ ಪ್ರಧಾನಿಗೆ ಬೆಂಬಲ ನೀಡಿರುವ ಎನ್.ಡಿ.ಎ ಮಿತ್ರಪಕ್ಷಗಳು ಹೊಸ ಬೇಡಿಕೆಯನ್ನು ಮುಂದಿಟ್ಟಿವೆ. ಪ್ರಧಾನಿ ಮೋದಿ ಅವರನ್ನು  ಭೇಟಿ ಮಾಡಿರುವ ಎನ್.ಡಿ.ಎ ಮಿತ್ರಪಕ್ಷಗಳ ನಾಯಕರು ಮೈತ್ರಿಕೂಟಕ್ಕೆ ಸಂಚಾಲಕರನ್ನು ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಎನ್.ಡಿ.ಎ ಮೈತ್ರಿಕೂಟದ ಮೊದಲ ಅಧಿಕೃತ ಸಭೆ ಇದಾಗಿದ್ದು, ಪ್ರಥಮ ಸಭೆಯಲ್ಲೇ ಎನ್.ಡಿ.ಎ ಸಂಚಾಲಕರನ್ನು ನೇಮಿಸಬೇಕೆಂಬ ಒತ್ತಾಯ ಹೇರಲಾಗಿದೆ. ಭೂಸ್ವಾಧೀನ ಮಸುದೆಯಂತೆಹ ಮಹತ್ವದ ವಿಷಯಗಳಿಗೆ ಉತ್ತಮ ಸಮನ್ವಯ ಅಗತ್ಯತೆಯನ್ನು ಮೈತ್ರಿಕೂಟದ ಸದಸ್ಯರು ಬಿಜೆಪಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಕಗ್ಗಂಟಾಗಿಯೇ ಉಳಿದಿರುವ ಭೂಸ್ವಾಧೀನ ಮಸೂದೆಗೆ ಎನ್.ಡಿ.ಎ ಮಿತ್ರ ಪಕ್ಷಗಳ ಬೆಂಬಲ ಅಗತ್ಯವಾಗಿದೆ. ಶಿವಸೇನೆ ಮೋದಿ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದು ಯಾವುದೇ ವಿಷಯದಲ್ಲೂ ಮೋದಿ ಸರ್ಕಾರ ಹಿಂದೆ ಸರಿಯುವ ಅಗತ್ಯವಿಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.

ವಾಜಪೇಯಿ ಅಧಿಕಾರಾವಧಿಯಲ್ಲಿ ಜಾರ್ಜ್ ಫರ್ನಾಂಡಿಸ್ ಎನ್.ಡಿ.ಎ ಮೈತ್ರಿಕೂಟದ ನಾಯಕರಾಗಿದ್ದರಿಂದ ಮಿತ್ರಪಕ್ಷಗಳ ನಡುವೆ ಉತ್ತಮ ಸಮನ್ವಯತೆ ಇತ್ತು, ಅದೇ ಮಾದರಿಯಲ್ಲಿ ಈಗಲೂ ಉತ್ತಮ ಸಮನ್ವಯತೆ ಕಾಯ್ದುಕೊಳ್ಳಲು ಎನ್.ಡಿ.ಎಗೆ ಸಂಚಾಲಕರನ್ನು ನೇಮಿಸುವ ಅಗತ್ಯವಿದೆ ಎಂದು ಎನ್.ಡಿ.ಎ ಮಿತ್ರಪಕ್ಷಗಳ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT