ಮಲ್ಲಿಕಾರ್ಜುನ ಖರ್ಗೆ 
ರಾಜಕೀಯ

ವಾಪಸ್ ಬರಬೇಕೆ? ಪಟ್ಟಿ ಕೊಡಿ

ನಾನು ರಾಜ್ಯ ರಾಜಕಾರಣಕ್ಕೆ ವಾಪಸ್ ಬರಬೇಕೆನ್ನುವವರ ಪಟ್ಟಿ ಮಾಡಿ ತಂದು ಕೊಡಿ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ...

ಬೆಂಗಳೂರು: ನಾನು ರಾಜ್ಯ ರಾಜಕಾರಣಕ್ಕೆ ವಾಪಸ್ ಬರಬೇಕೆನ್ನುವವರ ಪಟ್ಟಿ ಮಾಡಿ ತಂದು ಕೊಡಿ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಬೆಂಬಲಿಗರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ 74ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಷಯ ತಿಳಿಸಿದ್ದಾರೆ. ನೀವು ರಾಜ್ಯ ರಾಜಕಾರಣಕ್ಕೆ ಮರಳಿ ಬರಬೇಕೆಂಬ ಬಗ್ಗೆ ಹಲವರು ಬೇಡಿಕೆ ಸಲ್ಲಿಸಿದ್ದಾರೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಆ ರೀತಿ ಅಭಿಪ್ರಾಯ ವ್ಯಕ್ತಪಡಿಸುವವರ ಲಿಸ್ಟ್ ಮಾಡಿ ತಂದು ಕೊಡಿ. ನೋಡಿ ಹೇಳುತ್ತೇನೆ ಎಂದರು.

ಖರ್ಗೆ ಅವರ ಈ ಮಾತು ರಾಜಕೀಯ ವಲಯದಲ್ಲಿ ಸೂಕ್ಷ್ಮ ಸಂಚಲನ ಮೂಡಿಸಿದ್ದು, ಈ ಹೇಳಿಕೆಗೆ ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನ ಆರಂಭವಾಗುತ್ತಿದೆ. ವಿಧಾನಸಭೆಯ ಆಡಳಿತ  ಪಕ್ಷದ ಮೊಗಸಾಲೆಯಲ್ಲೂ ಈ ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದು, ಯಾವ ಅರ್ಥದಲ್ಲಿ ಈ ಮಾತು ಹೇಳಿರಬಹುದೆಂಬ ಬಗ್ಗೆ ತಮ್ಮದೇ ಆದ  ರೀತಿಯಲ್ಲಿ ಶಾಸಕರ ವಿವರಣೆ ಪ್ರಾರಂಭವಾಗಿದೆ.

ಮೋದಿ ಬ್ರ್ಯಾಂಡ್ ಮ್ಯಾಗಿ ಥರ: ಇದೇ ¸ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನೀತಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಈ ಒಂದು ವರ್ಷದ ಅವಧಿಯಲ್ಲಿ ಅವರು ಬರಿ ಮಾತನಾಡಿದ್ದಾರೆ. ಹೇಳುವುದೇ ಜಾಸ್ತಿ ವಿನಃ ಏನನ್ನೂ ಮಾಡಿಲ್ಲ. ಬ್ರ್ಯಾಂಡ್ ಸೇಲ್ ಮಾಡಿ ಮತ ತೆಗೆದುಕೊಂಡಿದ್ದಾರೆ. ಆದರೆ, ಕ್ವಾಲಿಟಿ ಇಲ್ಲದೇ ಹೋದರೆ ಬ್ರ್ಯಾಂಡ್ ಮ್ಯಾಗಿ  ಥರ ಆಗುತ್ತದೆ ಎಂದರು.  

ಅವರು ನೀಡಿದ ಚುನಾವಣಾ ಆಶ್ವಾಸನೆ ಪೈಕಿ ಎಷ್ಟು ಅನುಷ್ಠಾನ ಮಾಡಿದ್ದಾರೆ? ಈ ಒಂದು ವರ್ಷದಲ್ಲಿ ಯಾವ ಭರವಸೆಯೂ ಈಡೇರಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳನ್ನೇ ಹೊಸ ಹೆಸರಿನಲ್ಲಿ ಜಾರಿ ಮಾಡುತ್ತಿದ್ದಾರೆ. ಸ್ವಚ್ಛ ಭಾರತ, ಜಿಎಸ್‍ಟಿ ಬಿಲ್ ಸೇರಿದಂತೆ ಇದಕ್ಕೆ ಹಲವು ಉದಾಹರಣೆ ನೀಡಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ಮೇಲೆ ಕೆಳಗೆ ಏರಿಳಿಯಲೇಬೇಕು ಎಂದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವಾರು ಶಾಸಕರು, ಖರ್ಗೆ ಅವರನ್ನು ಭೇಟಿಯಾಗಿ ಜನ್ಮದಿನದ ಶುಭ ಕೋರಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!