ಕರ್ನಾಟಕ ರಾಜ್ಯ ವಕೀಲ ಪರಿಷತ್ ಉಗ್ರಪ್ಪ 
ರಾಜಕೀಯ

ಉಗ್ರಪ್ಪಗೆ ಶೋಕಾಸ್ ನೋಟಿಸ್ ಸಂಭವ

ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಅವರು ವೃತ್ತಿ ದುರ್ನಡತೆ ಎಸಗಿದ್ದಾರೆಂದು ಆರೋಪಿಸಿ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಕೀಲ ಪರಿಷತ್ ಉಗ್ರಪ್ಪ ಅವರಿಗೆ ಶೋಕಾಸ್ ನೋಟಿಸ್ ನೀಡುವುದಾಗಿ ತಿಳಿಸಿದೆ...

ಬೆಂಗಳೂರು:  ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಅವರು ವೃತ್ತಿ ದುರ್ನಡತೆ ಎಸಗಿದ್ದಾರೆಂದು ಆರೋಪಿಸಿ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಕೀಲ ಪರಿಷತ್ ಉಗ್ರಪ್ಪ ಅವರಿಗೆ ಶೋಕಾಸ್ ನೋಟಿಸ್ ನೀಡುವುದಾಗಿ ತಿಳಿಸಿದೆ.

ಮಾಜಿ ಪ್ರಧಾನಿ ದೇವೇಗೌಡ ಮತ್ತು ಅವರ ಕುಟುಂಬದ ವಿರುದ್ಧ ವಿ.ಎಸ್. ಉಗ್ರಪ್ಪ ಮಾಡಿರುವ ಆರೋಪ ಖಂಡಿಸಿ ಬೆಂಗಳೂರು ಜೆಡಿಎಸ್ ಕಾನೂನು ಘಟಕ ಉಗ್ರಪ್ಪ ವಿರುದ್ಧ ವೃತ್ತಿ ದುರ್ನಡತೆ ಎಸಗಿದ್ದಾರೆಂದು ಜೂ.5ರಂದು ರಾಜ್ಯ ವಕೀಲ ಪರಿಷತ್‍ನಲ್ಲಿ ದೂರು ದಾಖಲಿಸಿತ್ತು. ವಿವರಣೆ ನೀಡುವಂತೆ ಕರ್ನಾಟಕ ರಾಜ್ಯ ವಕೀಲ ಪರಿಷತ್ ಉಗ್ರಪ್ಪ ಅವರಿಗೆ ಗುರುವಾರ ಶೋಕಾಸ್ ನೋಟಿಸ್ ಜಾರಿ ಮಾಡುವುದಾಗಿ ವಕೀಲ ಪರಿಷತ್‍ನ ಅಧ್ಯಕ್ಷ ಪಿ.ಪಿ. ಹೆಗ್ಡೆ ತಿಳಿಸಿದ್ದಾರೆ.

`ಗೌಡರ ಕುಟುಂಬದ ಆಸ್ತಿ ಈ ಮೊದಲು ಎಷ್ಟಿತ್ತು ಎನ್ನುವುದು ನನಗೆ ತಿಳಿದಿದೆ. ನಾನು ಅವರ ವಕೀಲನಾಗಿ ಚುನಾವಣೆ ಸಂದರ್ಭದಲ್ಲಿ ಪ್ರಮಾಣಪತ್ರ ಸಿದ್ಧಪಡಿಸುತ್ತಿದ್ದೆ. ಹೀಗಾಗಿ ಇದ್ದಕ್ಕಿದ್ದಂತೆ ಆಗಾಧ ಪ್ರಮಾಣದ ಆಸ್ತಿ ಎಲ್ಲಿಂದ ಬಂತು ಎನ್ನುವುದನ್ನು ತಿಳಿಸಲಿ' ಎಂದು ಉಗ್ರಪ್ಪ ಆರೋಪ ಹೊರಿಸಿದ್ದಾರೆಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಈ ಹೇಳಿಕೆಯಿಂದ ಅವರು ದೇವೇಗೌಡರ ಕಕ್ಷಿದಾರರಾಗಿದ್ದಾರೆಂದು ತಿಳಿದುಬರುತ್ತದೆ. ವೃತ್ತಿಯಲ್ಲಿ ವಕೀಲರಾಗಿರುವ ಇವರು ಈ ರೀತಿ ಹೇಳಿಕೆ ನೀಡುವ ಮೂಲಕ ಭಾರತೀಯ ಸಾಕ್ಷಿ ಕಾಯ್ದೆ 1872 ಸೆಕ್ಷನ್ 126ರ ಉಲ್ಲಂಘನೆ ಆಗಿದ್ದು, ವೃತ್ತಿಯಲ್ಲಿ ದುರ್ನಡತೆ ಎಸಗಿದ್ದಾರೆ. ಅದರ ಪ್ರಕಾರ, ಕಕ್ಷಿದಾರರು ನೀಡುವ ಮಾಹಿತಿಯನ್ನು ಬಹಿರಂಗಪಡಿಸಬಾರದು ಎಂದಿದೆ. ಆದರೆ, ಉಗ್ರಪ್ಪ ಅವರು ಮಾಹಿತಿ ಸೋರಿಕೆ ಮಾಡುವ ಮೂಲಕ ವೃತ್ತಿಗೆ ಅಪಮಾನ ಎಸಗಿದ್ದಾರೆ. ಆದ್ದರಿಂದ ಉಗ್ರಪ್ಪ ವಿರುದ್ಧ ವಕೀಲ ಕಾಯ್ದೆ 1951, ಸೆಕ್ಷನ್ 35ರ ಪ್ರಕಾರ ಕಾನೂನು ರೀತಿ ಶಿಸ್ತು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ವಿವರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಬಿಡದಿ ಟೌನ್‌ಶಿಪ್‌ ಯೋಜನೆ ಬಗ್ಗೆ BJP-JDS ಅಪಪ್ರಚಾರ, ರೈತರ ಭೂಮಿ ಬಲವಂತವಾಗಿ ಪಡೆಯಲ್ಲ: ಸಚಿವ ಯತೀಂದ್ರ

ಖಾತೆ ಹಂಚಿಕೆಗೂ ಮುನ್ನ ಸಚಿವ ನಾಗೇಂದ್ರಗೆ ಸಂಕಷ್ಟ! ವಿಶೇಷ ನ್ಯಾಯಾಲಯದ ಜಾಮೀನು ಷರತ್ತು ಉಲ್ಲಂಘಿಸಿದ ಆರೋಪ