ಬೆಂಗಳೂರು: ಬಿಬಿಸಿಯ `ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರದ ಉದ್ದೇಶದ ಬಗ್ಗೆ ಅನುಮಾನ ಇದೆ ಎಂದು ಅತ್ಯಾಚಾರ ತಡೆಗೆ ನಿಯಮ ರೂಪಿಸಲು ಸರ್ಕಾರ ರಚಿಸಿರುವ
ಅಧ್ಯಯನ ಸಮಿತಿ ಅಧ್ಯಕ್ಷ ಎಂ.ಸಿ.ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು, ಈ ಹಿಂದೆ ಬಿಬಿಸಿಯ ಮುಖ್ಯಸ್ಥ ರಾಗಿದ್ದವರೊಬ್ಬರು
ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದರು. ಅವರ ವಿರುದ್ಧ 18ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದವು. ಆದರೆ ಆಗ ಬಿಬಿಸಿ ಮೌ ನವಾಗಿತ್ತು. ಆದರೆ ಈಗ ನಿರ್ಭಯಾ
ಪ್ರಕರಣದಲ್ಲಿ ಅದರ ವರ್ತನೆ ಅನುಮಾನಾಸ್ಪ ದವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಕೆಡಿಸಲು ಈ ಪ್ರಯತ್ನ ನಡೆಸಿರಬಹುದೆಂಬ ಶಂಕೆ ಮೂಡುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ತೆಗೆದುಕೊಂಡ ನಿರ್ಧಾರಕ್ಕೆ ನನ್ನ ಬೆಂಬಲವಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿ ಹಿಡಿಯುವುದುರಾಜ್ಯಾಂಗದ ಕರ್ತವ್ಯ. ಆದರೆ ಇದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಾರ್ವಜನಿಕ ನೆಮ್ಮದಿ, ನೀತಿಗೆ ಧಕ್ಕೆಯಾಗಬಾರದು.
ಈ ಹಿನ್ನೆಲೆಯಲ್ಲಿ ಸಾಕ್ಷ್ಯಚಿತ್ರ ನಿಷೇಧಕ್ಕೆ ಅರ್ಹ ಎಂದು ಹೇಳಿದರು. ಬಿಬಿಸಿ ಇಂಗ್ಲೆಂಡ್ನಳ ಸರ್ಕಾರಿ ಸ್ವಾಮ್ಯದ ಸಂಸ್ಥೆ. ಆದರೆ ಅಲ್ಲಿ ನಡೆಯುವ ಅತ್ಯಾಚಾರ
ಪ್ರಮಾಣಕ್ಕೆ ಹೋಲಿಸಿದರೆ ನಮ್ಮ ದೇಶದ್ದು ಏನೇನೂ ಅಲ್ಲ. ಅತ್ಯಾಚಾರ ಎಸಗಿದ ವ್ಯಕ್ತಿ, ಆತನ ಪರ ವಕೀಲರು ನೀಡಿದ ಹೇಳಿಕೆಯನ್ನುಗಮನಿಸಿದರೆ ಸಂದರ್ಶನಕ್ಕೆ ಅಗತ್ಯವಾದ ಪ್ರಶ್ನಾವಳಿಗಳನ್ನು ಮೊದಲೇ ತಯಾರಿಸಿ ಉತ್ತರ ಪಡೆಯಲಾಗಿದೆ ಎಂಬ ಅನುಮಾನ ಮೂಡುತ್ತದೆ ಎಂದರು.
ಮೂರು ತಿಂಗಳಲ್ಲಿ ವರದಿ: ನಮ್ಮ ಸಮಿತಿ ಚೆನ್ನಾಗಿ ಕೆಲಸ ಮಾಡುತ್ತಿದೆ. ಎರಡು ಉಪಸಮಿತಿ ರಚಿಸಲಾಗಿದ್ದು, ಎಲ್ಲ ಜಿಲ್ಲೆಗೆ ಭೇಟಿ ನೀಡುತ್ತಿದ್ದೇವೆ. ಸಾರ್ವಜನಿಕರ ಸ್ಪಂದನೆ ಚೆನ್ನಾಗಿದೆ. ಪೋಲೀಸ್ ಠಾಣೆಯಲ್ಲಿ ಕೆಳ ಹಂತದ ಅಧಿಕಾರಿಗಳು ದೂರು ನೀಡಲು ಬಂದವರಿಗೆ ತೊಂದರೆ ಮಾಡುತ್ತಿರುವ ಬಗ್ಗೆ ಹಲವರು ದೂರು ನೀಡಿದ್ದಾರೆ. ಇಂಥ ಪ್ರಕರಣಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇನ್ನು ಮೂರು ತಿಂಗಳೊಳಗಾಗಿ ಸಮಿತಿ ವರದಿ ನೀಡುತ್ತದೆ ಎಂದರು.