ಬೆಂಗಳೂರು: ಮೌಢ್ಯ ವಿರೋಧಿ ಮತ್ತು ಅದ್ದೂರಿ ಮದುವೆ ನಿಯಂತ್ರಣ ಕಾಯ್ದೆ ವಿಚಾರ ಮತ್ತೆ ಸದ್ದು ಮಾಡಲಿದೆ. ಸರ್ಕಾರವೇನೋ ಇವನ್ನುಜಾರಿಗೆ ತರುವುದಿಲ್ಲ ಎಂದು ಭರವಸೆ ನೀಡಿದೆ. ಆದರೆ, ಕಾಯಿದೆ ಸ್ವರೂಪ ಹೇಗಿರಬೇಕೆಂಬ ಬಗ್ಗೆ ವರದಿ ನೀಡಲು ಸರ್ಕಾರ ರಚಿಸಿದ್ದ ಸಮಿತಿ ವರದಿ ನೀಡಿದೆ. ಕಾನೂನು ಮತ್ತು ಸಂಸ ದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಪತ್ರಿಕಾಗೋಷ್ಠಿ ಯಲ್ಲಿ ಬುಧವಾರ ಮಾತನಾಡಿ, ಈ ಎರಡರಕಾನೂನು ಸ್ವರೂಪ ನಿರ್ಧರಿಸಲು ಕಾನೂನು ಆಯೋಗದ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ ವರದಿ ನೀಡಿದೆ. ಆದರೆ ಅದರಲ್ಲಿ ಏನಿದೆ, ಶಿಫಾರಸುಗಳೇನು, ಎಂಬುದನ್ನು ನಾನು ಓದಿಲ್ಲ ಎಂದು ಹೇಳಿದರು.