ಎಚ್. ಆಂಜನೇಯ 
ರಾಜಕೀಯ

ವೀರಶೈವ ಜಾತಿಯೋ ಸ್ವತಂತ್ರ ಧರ್ಮವೋ?

ವೀರಶೈವ ಎನ್ನುವುದು ಜಾತಿಯಲ್ಲ, ಅದೊಂದು ಸ್ವತಂತ್ರ ಧರ್ಮ ಎಂಬ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು...

ಬೆಂಗಳೂರು: ವೀರಶೈವ ಎನ್ನುವುದು ಜಾತಿಯಲ್ಲ, ಅದೊಂದು ಸ್ವತಂತ್ರ ಧರ್ಮ ಎಂಬ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು
ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದ್ದಾರೆ. ಲಿಂಗಾಯತ ಮತ್ತು ವೀರಶೈವ ಎನ್ನುವ ಗೊಂದಲದ ಜತೆಗೆ ವೀರಶೈವ ಎನ್ನುವುದು ಜಾತಿಯಲ್ಲ, ಅದೊಂದು ಧರ್ಮ
ಎಂಬ ಪ್ರತಿಪಾದನೆ ಇದೆ. ಇದು ಅಲ್ಲಲ್ಲಿ ಚರ್ಚೆಯಾಗುತ್ತಿದೆ. ಇದನ್ನು
ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ಭಾನು ವಾರ ನಗರದಲ್ಲಿ ನಡೆದ ಡಾ.ಮಾತೆ ಮಹಾದೇವಿ ಅವರ 70ನೇ ವರ್ಷದ ವರ್ಧಂತಿ ಉತ್ಸವದಲ್ಲಿ ಹೇಳಿದರು. ಈ ಬಗ್ಗೆ ರಾಜ್ಯ ಸರ್ಕಾರ ವೀರಶೈವ ಮಠಾಧೀಶರು ಮತ್ತು ಶರಣ ಮುಖಂಡರ ಅಭಿಪ್ರಾಯ ಸಂಗ್ರಹಿಸಿ, ಆನಂತರ ಇದೊಂದು ಜಾತಿಯೇ  ಅಥವಾ ಧರ್ಮವೇ ಎನ್ನುವ ನಿಲುವಿಗೆ ಬರುತ್ತದೆ. ಬಳಿಕ ಆ ಪ್ರಸ್ತಾಪ ವನ್ನು ಕೇಂದ್ರಕ್ಕೆ ಕಳುಹಿಸುವ
ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸುತ್ತಾರೆ. ಸಿಎಂ ಈ ವಿಚಾರವಾಗಿ ಆಸಕ್ತಿ ವಹಿಸಿ, ಈ ಹಿಂದೆಯೇ  ಮಾತೆ ಮಹಾದೇವಿ ಅವರೊಂದಿಗೆ ಚರ್ಚೆ ಯನ್ನೂ ನಡೆಸಿದ್ದರು ಎಂದು ಆಂಜನೇಯ ನುಡಿದರು.
ಸಿಎಂ ಬಸವ ತತ್ವದ ಅನುಸರಿಸುವ ಅಪರೂಪದ ರಾಜ ಕಾರಣಿ.ಬಸವ ಜಯಂತಿಯಂದೇ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು ಅದೇ ಕಾರಣಕ್ಕೆ. ಧರ್ಮದ ವಿಷಯದಲ್ಲಿ
ಅಗತ್ಯ ಕ್ರಮಕೈಗೊಳ್ಳುವುದು ಖಚಿತ ಎಂದರು.
ಮಾತೆ ಮಹಾದೇವಿ ವೀರಶೈವ `ಧರ್ಮ' ಎಂದು ಪ್ರತಿಪಾದಿಸಿ, ಬಸವ ತತ್ವ ಮತ್ತು ಬಸವ ಧರ್ಮ ಪ್ರಚಾರವನ್ನು ನಡೆಸುತ್ತಿದ್ದಾರೆ. ಸಮಾನತೆ ಮತ್ತುಅಹಿಂಸಾ ತತ್ವಗಳನ್ನೂ ಪ್ರತಿ ಪಾದಿಸಿ, ಜನರ ಮನಸ್ಸಿನಲ್ಲಿರುವ ಜಾತಿ ಎಂಬ ಕೊಳಕನ್ನು ತೆಗೆಯುತ್ತಿದ್ದಾರೆ. ಇವರ ಕಾಯಕಕ್ಕೆ ನನ್ನ ಮತ್ತು ಸರ್ಕಾರದ ಸಹಕಾರವೂ ದೊರೆಯಲಿದೆ ಎಂದು ಆಂಜನೇಯ ನುಡಿದರು. ಬಸವ ತತ್ವ ದೀನ, ದಲಿತರ ಉದ್ಧಾರದ  ತತ್ವ. ರಾಜನಂತಿದ್ದರೂ ದಲಿತರಿಗಾಗಿ ಎಲ್ಲವನ್ನೂ ತೊರೆದು ಸೇವೆಗೆ ಇಳಿದ ಬಸವಣ್ಣ  ಕೆಲವರು ಹೇಳುವಂತೆ ಎಲ್ಲರಿಗೂ ಲಿಂಗಗಳನ್ನು ಕಟ್ಟಿ ಜಾತಿ ಮಾಡಿದವರಲ್ಲ. ಬದಲಾಗಿ ಕೆಳ ಜಾತಿ ಮತ್ತು ಮೇಲ್ಜಾತಿಯನ್ನು
ಒಂದುಗೂಡಿಸಿ ಒಂದೇ ಧರ್ಮ ಎಂದು ಸಾರಿದವರು ಬಸವಣ್ಣ ಎಂದು ಮಾತೆ
ಮಹಾದೇವಿ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ