ಅಂಬರೀಶ್ 
ರಾಜಕೀಯ

ವಸತಿರಹಿತರಿಗಾಗೇ ಪ್ರತ್ಯೇಕ ಗಣತಿ

ಸರ್ಕಾರ ನಡೆಸುತ್ತಿರುವ ಜಾತಿ ಜನಗಣತಿ ಕಾರ್ಯದಲ್ಲಿ ವಸತಿ ರಹಿತರ ಬಗ್ಗೆ ಮಾಹಿತಿ ಸಿಗದಿದ್ದರೆ ಅವರ ಸಲುವಾಗಿಯೇ ಪ್ರತ್ಯೇಕ...

ಬೆಂಗಳೂರು: ಸರ್ಕಾರ  ನಡೆಸುತ್ತಿರುವ ಜಾತಿ ಜನಗಣತಿ  ಕಾರ್ಯದಲ್ಲಿ ವಸತಿ ರಹಿತರ ಬಗ್ಗೆ ಮಾಹಿತಿ ಸಿಗದಿದ್ದರೆ ಅವರ ಸಲುವಾಗಿಯೇ ಪ್ರತ್ಯೇಕ ಗಣತಿ ನಡೆಸುವುದಾಗಿ ವಸತಿ ಸಚಿವ ಅಂಬರೀಷ್  ಹೇಳಿದ್ದಾರೆ.

ಜಾತಿಗಣತಿ ಹೆಸರಿನಲ್ಲಿ ಮಾಹಿತಿ ಕಲೆ ಹಾಕಲು ಹೋದ ಅಧಿಕಾರಿ ಗಳನ್ನು ಹಲವೆಡೆ ಕುಟುಂಬದ ಮುಖ್ಯಸ್ಥರು ಗೆಟ್‍ಔಟ್ ಎಂದು ಹೊರಗೆ ಕಳಿಸಿದ್ದಾರೆ.ಇದರಿಂದ ಜಾತಿವಾರು ಗಣತಿಯ ಮೂಲಕ ಎಲ್ಲ ವಿವರ ಲಭ್ಯವಾಗುವುದು ಕಷ್ಟ ಎಂದು ಹೇಳಿದ್ದಾರೆ.
ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು ಜಾತಿ ಗಣತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ವಸತಿ ಇಲಾಖೆಯಿಂದ ನಿವೇಶನ ರಹಿತರ ಸಮೀಕ್ಷೆ ನಡೆಸುವ ಪ್ರಯತ್ನ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅದಕ್ಕೆ ಅವಕಾಶ ನೀಡಲಿಲ್ಲ.ಜಾತಿವಾರು ಸಮೀಕ್ಷೆಯ
ಜತೆಯಲ್ಲೇ ನಿವೇಶನ ಮತ್ತು ವಸತಿ ರಹಿತರ ಸಮೀಕ್ಷೆ   ನಡೆಯಬೇಕಿತ್ತು.   ಆದರೆ, ಜಾತಿ ಸಮೀಕ್ಷೆಯಲ್ಲಿ ನಿವೇಶನ ಮತ್ತು ವಸತಿ ರಹಿತರ ನ್ನು ಗುರುತಿಸುವುದು ಕಷ್ಟವಾಗುತ್ತಿದೆ.
ಈ ವಿಚಾರದಲ್ಲಿ ಹಲವಾರು ಪ್ರಶ್ನೆಗಳಿವೆ. ಜಾತಿಯ ಕುರಿತು ಕೇಳುತ್ತಿದ್ದಂತೆ ಕುಟುಂಬ ದವರು ಸಮೀಕ್ಷೆದಾರರನ್ನು ಗದರಿಸಿ ಕಳುಸಿದ್ದಾರೆ. ಹೀಗಾಗಿ ನಿವೇಶನ ನಿವೇಶನ ಮತ್ತು ವಸತಿ ರಹಿತರ ಸಮಗ್ರ ಮಾಹಿತಿ ದೊರೆಯುವುದು ಕಷ್ಟ ಎಂದರು.
ಒಕ್ಕಲಿಗ ಸಮುದಾಯದಲ್ಲಿ 25 ಜಾತಿಗಳಿವೆ. ಎಲ್ಲವನ್ನು ಬಿಡಿಸಿ ಮಾಹಿತಿ  ಕಲೆ ಹಾಕುವುದು ಕಷ್ಟ.  ಈ ಗಣತಿ ಕಾರ್ಯದಲ್ಲಿ ನಿವೇಶನ, ವಸತಿ ರಹಿತರ  ಸಮಗ್ರ ಮಾಹಿತಿ ಸಿಗದೇ ಇದ್ದರೆ ಮತ್ತೊಂದು ಸುತ್ತು ಪ್ರತ್ಯೇಕವಾಗಿ ವಸತಿ ಇಲಾಖೆಯಿಂದ ಸಮೀಕ್ಷೆ ನಡೆಸುವ ಕುರಿತು ಪರಿಶೀಲಿಸಿ ರಹಿತರ ಸಮಗ್ರ ಮಾಹಿತಿ ಸಿಗದೇ ಇದ್ದರೆ ಮತ್ತೊಂದು  ಸುತ್ತು ಪ್ರತ್ಯೇಕವಾಗಿ  ವಸತಿ ಇಲಾಖೆಯಿಂದ ಸಮೀಕ್ಷೆ ನಡೆಸುವ ಕುರಿತು ಪರಿಶೀಲಿಸಲಾಗುವುದಾಗಿ ಹೇಳಿದರು.
ಸಿಎಂ ಆಗುವುದಕ್ಕೆ ವಯಸ್ಸಾಯ್ತು: ಸಚಿವ ಸ್ಥಾನ ಬಿಟ್ಟು, ಕೆಪಿಸಿಸಿ ಅಧ್ಯಕ್ಷರಾಗಿ ಮುಂದೆ ಮುಖ್ಯಮಂತ್ರಿಯಾಗುವ ಗುರಿ ಇಟ್ಟುಕೊಂಡಿದ್ದೀರಾ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಸಾಮಥ್ರ್ಯ ಏನು ಎಂದು ನನಗೆ ಗೊತ್ತಿದೆ. ಈಗಾಗಲೇ 64 ವರ್ಷ ವಯಸ್ಸಾಗಿದೆ. ಪಕ್ಷ ನೀಡುವ ಯಾ ವುದೇ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಆದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸುವ ವಯಸ್ಸು ನನ್ನಲ್ಲಿ ಉಳಿದಿಲ್ಲ ಎಂದು ಹೇಳಿದರು. ಸಚಿವರ ಮೌಲ್ಯಮಾಪನ ಮಾಡಬೇಕು ಎಂಬುದೇ ಅರ್ಥಹೀನ. ಪ್ರತಿ ದಿನ ಸಚಿವರ ಕಾರ್ಯ ವೈಖರಿಯ ಬಗ್ಗೆ ಗುಪ್ತಚರ ಇಲಾಖೆ ಸಿಎಂಗೆ ಮಾಹಿತಿ ನೀಡುತ್ತಲೇ ಇರುತ್ತದೆ. ಮಾಧ್ಯಮಗಳಲ್ಲೂ ಎಲ್ಲವೂ ತೋರಿಸುತ್ತಾರೆ. ಅದರ ಹೊರತಾಗಿ ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡುವುದೇ ಆದರೆ ಅದಕ್ಕೆ ನನ್ನ ಅಭ್ಯಂತರ ಇಲ್ಲ ಎಂದರು.



ರಮ್ಯಾಳನ್ನು ನೀವೇ ಹುಡುಕಿ
ಮಾಜಿ ಸಂಸದೆ ಹಾಗೂ ನಟಿ ರಮ್ಯ ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಅವರು ಎಲ್ಲಿದ್ದಾರೆ ಎಂಬುದು ನನಗೂ ಗೊತ್ತಿಲ್ಲ. ನಿಮಗೇನಾದರೂ ಸಿಕ್ಕರೆ ಹುಡುಕಿಕೊಡಿ ಎಂದು ಮಾಧ್ಯಮದವರಿಗೆ ಅಂಬರೀಶ್ ಮರು ಪ್ರಶ್ನೆ ಎಸೆದರು. ಆರು ತಿಂಗಳಲ್ಲೇ ಮಂಡ್ಯದ ಜನ ಚುನಾವಣೆಯಲ್ಲಿ ಸೋಲಿಸಿದರಲ್ಲ ಎಂಬ ಬೇಸರಕ್ಕಾಗಿ ನಾಪತ್ತೆಯಾಗಿರಬಹುದು. ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ, ನಾನೂ ಸೋಲು ಕಂಡಿದ್ದೇನೆ. ಹಾಗೆಂದು ನಾನು ಎಲ್ಲಿಯೂ ಹೋಗಿರಲಿಲ್ಲ ಎಂದು ವ್ಯಂಗ್ಯವಾಡಿದರು. ವಸತಿ ಇಲಾಖೆಯಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಅದನ್ನು ನಾನು ಕೆಣಕಲು ಹೋಗುವುದಿಲ್ಲ. ಆರೋಪಗಳನ್ನು ಮಾಡುತ್ತಾ ಕುಳಿತರೆ ಯಾವುದೇ ಸಾಧನೆ ಮಾಡಲು ಆಗುವುದಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Israel-Gaza ಯುದ್ಧ ಕೊನೆಗೂ ಅಂತ್ಯ: ಶಾಂತಿ ಒಪ್ಪಂದದ ಮೊದಲ ಹಂತಕ್ಕೆ ಇಸ್ರೇಲ್–ಹಮಾಸ್ ಒಪ್ಪಿಗೆ, ಶೀಘ್ರದಲ್ಲೇ ಒತ್ತೆಯಾಳುಗಳ ಬಿಡುಗಡೆ

ಕುರುಬರಿಗೆ ಎಸ್‌ಟಿ ಮೀಸಲಾತಿ: ಸಚಿವ ಸಂಪುಟ ಸಭೆಯಲ್ಲಿ ಚರ್ಚೆ?

'Bigg boss' ಮನೆ ರೀ ಓಪನ್: ರೆಸಾರ್ಟ್​​ನಿಂದ 'ಜಾಲಿವುಡ್'ಗೆ ಮರಳಿದ ಸ್ಪರ್ಧಿಗಳು, ಆಟ ಮತ್ತೆ ಶುರು

20 ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಸಿರಪ್‌: ಫಾರ್ಮಾ ಕಂಪನಿಯ ಮಾಲೀಕ ಅರೆಸ್ಟ್

OCs, CCs ಇಲ್ಲದ ಕಟ್ಟಡಗಳಿಗೆ ವಿದ್ಯುತ್-ನೀರು ಸಂಪರ್ಕ: ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ; ಡಿಕೆ.ಶಿವಕುಮಾರ್

SCROLL FOR NEXT