ಕಾಂಗ್ರೆಸ್ ಘೋಷಣೆಗಳ ಆಡಳಿತ: ಯಡಿಯೂರಪ್ಪ
ರಾಜ್ಯದಲ್ಲಿ ಕಾಂಗ್ರೆಸ್ ಕೇವಲ ಘೋಷಣೆಗಳ ಸರ್ಕಾರವೇ ಹೊರತು, ಸಾಧನೆಗಳ ಸರ್ಕಾರ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟೀಕಿಸಿದ್ದಾರೆ...
ಉಡುಪಿ: ರಾಜ್ಯದಲ್ಲಿ ಕಾಂಗ್ರೆಸ್ ಕೇವಲ ಘೋಷಣೆಗಳ ಸರ್ಕಾರವೇ ಹೊರತು, ಸಾಧನೆಗಳ ಸರ್ಕಾರ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟೀಕಿಸಿದ್ದಾರೆ.
ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಬೈಂದೂರು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ 2 ವರ್ಷಗಳ ಹಿಂದೆ ಘೋಷಿಸಿದ ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 20 ಕಿಮೀ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಘೋಷಿಸಿದ್ದರೂ ಇನ್ನೂ ಟೆಂಡರ್ ಆಗಿಲ್ಲ. ಕೆರೆ ಅಭಿವೃದ್ಧಿ ಪ್ರಾಧಿಕಾರ ರಚಿಸುತ್ತೇವೆ ಎಂದು ಘೋಷಿಸಿದ್ದು ಕೂಡ ಕಾರ್ಯರೂಪಕ್ಕೆ ಬಂದಿಲ್ಲ. 2 ವರ್ಷಗಳ ಹಿಂದೆ ರಚನೆಯಾದಿ ಕೃಷಿ ಬೆಲೆ ಆಯೋಗದಿಂದ ಕೂಡ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದರು.
ರಾಜ್ಯ ಸರ್ಕಾರ ಬಡವರಿಗೆ ಉಚಿತ ಅಕ್ಕಿ ನೀಡುತ್ತಿದೇದವೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ರಾಜ್ಯದಲ್ಲಿ ನೀಡುವ ಅಕ್ಕಿಯಲ್ಲಿ ಶೇ.95 ರಷ್ಟು ಅಕ್ಕಿಯನ್ನು ಕೇಂದ್ರ ಸರ್ಕಾರ ಪೂರೈಕೆ ಮಾಡುತ್ತಿದೆ. ರಾಜ್ಯದಲ್ಲ 2,24,000 ಮೆಟ್ರಿಕ್ ಟನ್ ಅಕ್ಕಿ, ಗೋದಿ ಇತ್ಯಾದಿ ಪರಿತರ ವಸ್ತುಗಳ ಅವಶ್ಯಕತೆ ಇದೆ. ಅದರಲ್ಲಿ 2,19,403 ಮೆಟ್ರಿಕ್ ಟನ್ ಪಡಿತರವನ್ನು ಕೇಂದ್ರ ಸರ್ಕಾರ ಪೂರೈಕೆ ಮಾಡುತ್ತಿದೆ.
ಕೇವಲ 7000 ಮೆಟ್ರಿಕ್ ಟನ್ ಮಾತ್ರ ರಾಜ್ಯ ಸರ್ಕಾರ ಒದಗಿಸಿಕೊಳ್ಳುತ್ತಿದೆ. ಆದ್ದರಿಂದ ಇದು ಕೇಂದ್ರ ಸರ್ಕಾರದ ಯೋಜನೆ, ಆದರೂ ಮುಖ್ಯಮಂತ್ರಿ ಅವರು ತನ್ನದೇ ಯೋಜನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಎನ್ ಡಿಎ ಸರ್ಕಾರದ 1 ವರ್ಷದ ವಿಫಲತೆಯನ್ನು ಕಾಂಗ್ರೆಸ್ ಮುಖಂಡರು ಎಲ್ಲ ರಾಜ್ಯಗಳಿಗೆ ಹೋಗಿ ಸುದ್ದಿಗೋಷ್ಠಿಯಲ್ಲಿ ಹೇಳಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಯುಪಿಎ ಸರ್ಕಾರದ ರು.1.76 ಲಕ್ಷ ಕೋಟಿ 2 ಜಿ ಹಗರಣ, ರು.186 ಸಾವಿರ ಕೋಟಿ ಕಲ್ಲಿದ್ದಲು ಹಗರಣ, ರು.75 ಸಾವಿರ ಕೋಟಿ ಕಾಮನ್ ವೆಲ್ತ್ ಹಗರಣಗಳ ಬಗ್ಗೆಯೂ ಕಾಂಗ್ರೆಸ್ ಹೇಳಲಿ, ರಾಜ್ಯದ ಜನತೆಗೂ ಸ್ವಲ್ಪ ಮಾಹಿತಿ ನೀಡಲು ಎಂದರು.
ನರೇಂದ್ರ ಮೋದಿ ಸರ್ಕಾರ ಕೇವಲ ಪ್ಯಾಕೆಜಿಂಗ್ ಮತ್ತು ಮಾರ್ಕೆಟಿಂಗ್ ಸರ್ಕಾರ. ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಫೋಟೋ ಆಪರೇಶನ್ ಮಾತ್ರ ನಡೆಯುತ್ತಿದೆ ಚುನಾವಣೆಗಿಂತ ಮೊದಲು ಹಲವು ಘೋಷ ವಾಕ್ಯಗಳನ್ನು ಬಿಡುಗಡೆ ಮಾಡಿತ್ತು. ಈಗ ಅದಕ್ಕೆ ವಿರುದ್ಧವಾಗಿ ನಡೆಯುತ್ತಿದೆ.
ಜ್ಯೋತಿರಾದಿತ್ಯ ಸಿಂಧಿಯಾ, ಕಾಂಗ್ರೆಸ್ ನಾಯಕ