ಬೆಂಗಳೂರು: ಗೃಹ ಸಚಿವ ಕೆ.ಜೆ ಜಾರ್ಜ್ ಭ್ರಷ್ಟ ಹಾಗೂ ಅದಕ್ಷ ಸಚಿವ ಎಂದು ಎಎಪಿ ಮುಖಂಡ ರವಿಕೃಷ್ಣಾ ರೆಡ್ಡಿ ಹೇಳಿದ್ದಾರೆ.
ರಾಜ್ಯ ಗೃಹ ಇಲಾಖೆಯ ಸಚಿವನೇ ದೊಡ್ಡ ಭ್ರಷ್ಟನಾಗಿದ್ದಾನೆ. ಈ ಇಲಾಖೆಗೆ ಮತ್ತೊಬ್ಬ ಭ್ರಷ್ಟ ಅಧಿಕಾರಿ ಕೆಂಪಯ್ಯ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಈ ಇಬ್ಬರು ಭ್ರಷ್ಟರ ನಾಯಕತ್ವದಲ್ಲಿ ಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ರವಿಕೃಷ್ಮಾರೆಡ್ಡಿ ಆರೋಪಿಸಿದ್ದಾರೆ.
ಅನೇಕ ಹಗರಣ ಮತ್ತು ಭೂಮಾಪಿಯಾದಲ್ಲಿ ಕೆಜೆ ಚಾರ್ಜ್ ಕೈವಾಡವಿರುವುದು ಬೆಳಕಿಗೆ ಬಂದಿದೆ. ಇನ್ನು ಕೆಂಪಯ್ಯನವರು ಭ್ರಷ್ಟ ಅಧಿಕಾರಿಯಾಗಿದ್ದರು ಎಂಬದು ಇಡೀ ಜನತೆಗೆ ಗೊತ್ತಿದೆ. ಆದರೂ ಕೂಡ ಇವರಿಬ್ಬರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉನ್ನತ ಮಟ್ಟದ ಸ್ಥಾನ ನೀಡಿದ್ದಾರೆ ಎಂದು ಅವರು ವಿಷಾಧಿಸಿದ್ದಾರೆ.
ಗೃಹ ಇಲಾಖೆಗೆ ಸಂಬಂಧಪಟ್ಟಂತೆ ಹಗರಣ ನಡೆದಿದ್ದರೆ ಅದಕ್ಕೆ ನೇರ ಹೊಣೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಏಕೆಂದರೆ ಭ್ರಷ್ಟರನ್ನು ಇಟ್ಟುಕೊಂಡು ಅಧಿಕಾರ ನಡೆಸುತ್ತಿದ್ದಾರೆ. ಹಾಗಾಗಿ, ಅವರೇ ನೇರ ಹೊಣೆ ಹೊರಬೇಕಾಗುತ್ತದೆ. ಇಲ್ಲವಾದರೆ, ಕೂಡಲೇ ಭ್ರಷ್ಟ ಸಚಿವ ಕೆಜೆ ಜಾರ್ಜ್ ಮತ್ತು ಕೆಂಪಯ್ಯ ಅವರನ್ನು ಉನ್ನತ ಸ್ಥಾನದಿಂದ ವಜಾಗೊಳಿಸಿ ಎಂದು ಆಗ್ರಹಿಸಿದ್ದಾರೆ.