ರಾಜಕೀಯ

ಖಾತ್ರಿ ನಿಯಮ ಇನ್ನು ಸರಳ

Rashmi Kasaragodu
ವಿಧಾನಸಭೆ: ಉದ್ಯೋಗ ಖಾತರಿ ಯೋಜನೆ ಅನುದಾನವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಲು ನಿಯಮ ಸರಳೀಕರಣಗೊಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಬರ ಪರಿಸ್ಥಿತಿ ಕುರಿತ ಸದನದಲ್ಲಿ ಚರ್ಚೆ ನಡೆಯುತ್ತಿದ್ದಾಗ ಉದ್ಯೋಗ ಖಾತರಿ ಅನುದಾನ ಬಳಕೆ ಬಗ್ಗೆ ಶಾಸಕರು ನೀಡಿದ ಸಲಹೆಗಳಿಗೆ ಸಚಿವರು ಪ್ರತಿಕ್ರಿಯಿಸಿದರು. ಇನ್ನು ಮುಂದೆ ಉದ್ಯೋಗ ಖಾತರಿ ಅನುದಾನವನ್ನು ಶಾಸಕರ ಅನುದಾನದೊಂದಿಗೆ ಬಳಸಿಕೊಂಡು ಗ್ರಾಮಮಟ್ಟದಲ್ಲಿ ಹೆಚ್ಚಿನ ಕಾಮಗಾರಿ ಕೈಗೊಳ್ಳುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ಇದೇ ನಿಟ್ಟಿನಲ್ಲಿ ಈಗಾಗಲೇ ಕೆಲವು ನಿಯಮಗಳನ್ನು ಸರಳೀಕರಿಸಲಾಗಿದೆ. ಅದಕ್ಕೆ ಸಂಬಂಧಿಸಿದ ಸುತ್ತೋಲೆಯನ್ನು ಅಧಿವೇಶನ ಮುಕ್ತಾಯಕ್ಕೂ ಮುನ್ನ ನೀಡಲಾಗುವುದು ಎಂದರು. ಜೆಡಿಎಸ್‍ನ ಶಿವಲಿಂಗೇಗೌಡ, ಪಂಚಾಯಿತಿ ಗಳಲ್ಲಿ ಇಒಗಳು ಸರಿಯಾಗಿಕಾರ್ಯನಿರ್ವಹಿಸದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. 
ರಾಜ್ಯದಲ್ಲಿ ಸುಮಾರು 60ಲಕ್ಷ ಜಾಬ್ ಕಾರ್ಡ್‍ದಾರರಿದ್ದಾರೆ. ಅವರೆಲ್ಲರನ್ನು ಬಳಸಿಕೊಂಡು ಇಷ್ಟೊತ್ತಿಗೆಗಾಗಲೇ ರು.12,000 ಕೋಟಿಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿತ್ತು. ಆದರೆ, ಈತನಕ ರು.3000ಕೋಟಿಗಳನ್ನು ಮಾತ್ರ ವೆಚ್ಚ ಮಾಡಲಾಗಿದೆ. ನಿಜಕ್ಕೂ ರಾಜ್ಯದಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕರನ್ನು ಬಳಿಸಿಕೊಂಡರೆ, ಶ್ರಮಕ್ಕೆ ಬೆಲೆ ನೀಡಿದ್ದೇ ಆದರೆ ರಾಜ್ಯವನ್ನು ಬಂಗಾರ ಮಾಡಬಹುದು ಎಂದು ಕಾಗೋಡು ತಿಮ್ಮಪ್ಪ ವಿವರಿಸಿದರು. ನಂತರ ಶಾಸಕರಾದ ಶಿವಮೂರ್ತಿ, ಬಸವರಾಜ ಬೊಮಾ್ಮಯಿ, ಚಲುರಾಯಸ್ವಾಮಿ ಚರ್ಚೆಯಲ್ಲಿ ಪಾಲ್ಗೊಂಡು ಹಲವುಸಲಹೆ ನೀಡಿದರು.
SCROLL FOR NEXT