ವಿಧಾನ ಪರಿಷತ್: ನನಗೆ ದೇವರ ಮೇಲೆ ನಂಬಿಕೆ ಇದೆ, ಹಾಗೆಂದು ಮೌಢ್ಯಾಚರಣೆ, ಕಂದಾಚಾರಗಳನ್ನು ನಂಬುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ದೇವಸ್ಥಾನಗಳಿಗೆ ಹಣ ಬಿಡುಗಡೆ ವಿಚಾರದಲ್ಲಿ ಸ್ವಾರಸ್ಯಕರ ಪ್ರಸಂಗವೊಂದು ನಡೆಯಿತು. ಈ ವೇಳೆ ಸಿಎಂ ತಮ್ಮ ನಂಬಿಕೆಯನ್ನು ಹೊರಗೆಡವಿದರು. ಇದೇ ವೇಳೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ನಂಬಿಕೆ ಇದ್ದ ಮೇಲೆ ಕೋಳಿ ಕುರಿ ಏಕೆ ಎಂದು ನಗೆಯಾಡಿದರು. ಈಶ್ವರಪ್ಪನವರ ಹೇಳಿಕೆಗೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿಎಂ, ಅದೆಲ್ಲಾ ತಿನ್ನುವುದಕ್ಕಷ್ಟೆ. ಯಾವ ದೇವರು ಕೋಳಿ, ಕುರಿ ಕೊಡಿ ಎಂದು ಕೇಳುತ್ತಾನೆ ಎಂದು ತಾವೂ ನಕ್ಕರು.