ರಾಜಕೀಯ

ವಿಧಾನಸೌಧಲ್ಲಿ ಇಲಿ ಹಿಡಿಯಲು 20 ಲಕ್ಷ ಖರ್ಚು ಮಾಡಿದ ಸರ್ಕಾರ

Shilpa D

ವಿಧಾನಪರಿಷತ್ತು: ಶಕ್ತಿ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಸಂಕೀರ್ಣ ಹಾಗೂ ವಿಶ್ವೇಶ್ವರಯ್ಯ ಗೋಪುರದ ಕಚೇರಿಗಳಲ್ಲಿ ಇಲಿ ಮತ್ತು ಹೆಗ್ಗಣಗಳನ್ನು ಹಿಡಿಯಲು ಕಳೆದ ಐದು ವರ್ಷಗಳಲ್ಲಿ ಸರ್ಕಾರ ಬರೋಬ್ಬರಿ 19.34 ಲಕ್ಷ ರೂ.ಗಳನ್ನು ಖರ್ಚು ಮಾಡಿದೆ. ವಿಧಾನಸೌಧ ಹಾಗೂ ಇತರ ಕಡೆಗಳಲ್ಲಿ ಇಲಿ- ಹೆಗ್ಗಣಗಳಿದ್ದರೂ, ಅವುಗಳನ್ನು ನಿಯಂತ್ರಣದಲ್ಲಿಡಲಾಗಿದೆ. ಎಲ್ಲ ಕಡೆ ತಿಂಗಳಿಗೆ ಸರಾಸರಿ 50 ಇಲಿ, ಹೆಗ್ಗಣಗಳನ್ನು ಹಿಡಿಯಲಾಗುತ್ತಿದೆ ಎಂದು  ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಜೆಡಿಎಸ್‌ನ ಪಟೇಲ್‌ ಶಿವರಾಂ ಅವರ ಪ್ರಶ್ನೆಗೆ ಗುರುವಾರ ಸದನದಲ್ಲಿ ಮಂಡಿಸಿದ ಲಿಖೀತ ಉತ್ತರದಲ್ಲಿ ಮುಖ್ಯಮಂತ್ರಿ ಈ ಮಾಹಿತಿ ಕೊಟ್ಟಿದ್ದಾರೆ. ಕರ್ನಾಟಕ ಸರ್ಕಾರದ ಸಚಿವಾಲಯದ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ವಿ.ವಿ.ಗೋಪುರದ ಕಚೇರಿಗಳಲ್ಲಿ ಇಲಿ ಮತ್ತು ಹೆಗ್ಗಣಗಳನ್ನು ನಿಯಂತ್ರಿಸಲು ಕೆಟಿಟಿಪಿ ಕಾಯ್ದೆ ಅನ್ವಯ ಟೆಂಡರ್‌ ಕರೆದು 2010-11ರಲ್ಲಿ ಮೆ. ಅಡೆಪ್ಟ್ ಪೆಸ್ಟ್‌ ಕಂಟ್ರೋಲ್‌ ಇಂಡಿಯಾ ಸಂಸ್ಥೆ ಮತ್ತು 2012ರಿಂದ ಇಲ್ಲಿವರೆಗೆ ಶ್ರೀ ಗಂಗಾ ಫೆಸಿಲಿಟಿ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಸರ್ವೀಸ್‌ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಇಲಿ ಮತ್ತು ಹೆಗ್ಗಣಗಳ ಹಾವಳಿಯಿಂದ ಮಹತ್ವದ ಕಡತಗಳು, ಬೆಲೆ ಬಾಳುವ ವಸ್ತುಗಳು ಹಾನಿಯಾದ ಪ್ರಕರಣಗಳು ವರದಿಯಾಗಿಲ್ಲ ಎಂದಿದ್ದಾರೆ.

SCROLL FOR NEXT