ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ) 
ರಾಜಕೀಯ

ಪ್ರಧಾನಿ ಬಳಿ ಮಾತನಾಡಲಾಗದ ಬಿಜೆಪಿ ನಾಯಕರಿಗೆ ಧಮ್ ಇಲ್ಲ: ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರ ಮೋದಿ ಬಳಿ ಮಾತನಾಡಲಾಗದ ಬಿಜೆಪಿ ನಾಯಕರಿಗೆ ಧಮ್ ಇಲ್ಲ. ಹೀಗಾಗಿಯೇ ದೆಹಲಿಯಲ್ಲಿ ಮೌನವಹಿಸಿ ಇದೀಗ ಇಲ್ಲಿ ಬಂದು ಸುಖಾಸುಮ್ಮನೆ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ...

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಬಳಿ ಮಾತನಾಡಲಾಗದ ಬಿಜೆಪಿ ನಾಯಕರಿಗೆ ಧಮ್ ಇಲ್ಲ. ಹೀಗಾಗಿಯೇ ದೆಹಲಿಯಲ್ಲಿ ಮೌನವಹಿಸಿ ಇದೀಗ ಇಲ್ಲಿ ಬಂದು ಸುಖಾಸುಮ್ಮನೆ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.

ಈ ಕುರಿತಂತೆ ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿರುವ ಅವರು, ಕಳಸಾ-ಬಂಡೂರಿ, ಮಹದಾಯಿ ಮತ್ತು ಮಲಪ್ರಭಾ ನದಿ ಜೋಡಣಾ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರದ ಬಳಿ ರಾಜ್ಯ ಸರ್ಕಾರ ಸರ್ವಪಕ್ಷಗಳ ನಿಯೋಗವನ್ನು ಕೊಂಡೊಯ್ದಿತ್ತು. ಅಂದು ನಡೆದ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ನಾಯಕರು ಮಾತನಾಡಲಿಲ್ಲ. ಇಂದು ರಾಜ್ಯಕ್ಕೆ ಬಂದು ಜನರನ್ನು ಹಾದಿ ತಪ್ಪಿಸಲು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಳಸಾ-ಬಂಡೂರಿ ವಿಷಯದಲ್ಲಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಮಧ್ಯಸ್ಥಿಕೆ ವಹಿಸಬೇಕಾದ ಪ್ರಧಾನಿಯವರೇ ಮೊದಲು ವಿರೋಧ ಪಕ್ಷದ ನಾಯಕರ ಜತೆ ಚರ್ಚೆ ನಡೆಸಿ ಎಂದು ಹೇಳುತ್ತಿರುವುದು ನಿಜಕ್ಕೂ ವಿಪರ್ಯಾಸ ಸಂಗತಿ. ನನ್ನ 40 ವರ್ಷದ ಇತಿಹಾಸದಲ್ಲಿ ಈ ರೀತಿ ಹೇಳುವ ಪ್ರಧಾನಿಯನ್ನೇ ನೋಡಿಯೇ ಇಲ್ಲ ಇದೇ ಮೊದಲು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶದಲ್ಲಿ ಇಂಧನ ಕೊರತೆ ಇಲ್ಲ, ಆದ್ರೆ...: ಪ್ರಧಾನಿ ಮೋದಿ ಹೇಳಿಕೆಗೆ ಕಾರಣ ನೀಡಿದ IGoM

Explainer: ಮಿತವ್ಯಯಕ್ಕೆ ಮೋದಿ ಕರೆ: ಕಷ್ಟದ ದಿನಗಳೋ? ಫಾರೆನ್ಸ್ ಉಳಿಕೆಯ ಮರ್ಮವೋ..? 72ಬಿಲಿಯನ್ $ ಹಿಂದಿನ ರಹಸ್ಯ

Video: ಆರಂಭದಲ್ಲೇ TVK ಸರ್ಕಾರಕ್ಕೆ ವಿಘ್ನ: ತಮಿಳುನಾಡಿನ ಏಕೈಕ ಮಹಿಳಾ ಸಚಿವೆ ಎಸ್. ಕೀರ್ತನಾ ಪ್ರಮಾಣವಚನಕ್ಕೆ ಬ್ರೇಕ್, Video!

ಪಟೇಲ್ ಹುಡುಗಿಯರು ಬೇರೆ ಜಾತಿ ಹುಡುಗರನ್ನು ಮದುವೆಯಾಗುತ್ತಿದ್ದಾರೆ, ಏಕೆಂದರೆ...: UP ರಾಜ್ಯಪಾಲರ ಪುತ್ರಿ ಶಾಕಿಂಗ್ ಹೇಳಿಕೆ

ಪಂಜಾಬ್ AAP ದೊಡ್ಡ ಹೊಡೆತ: ಸಿಎಂ ಭಗವಂತ್ ಮಾನ್ ಸೋದರ ಸಂಬಂಧಿ ಬಿಜೆಪಿಗೆ ಸೇರ್ಪಡೆ!

SCROLL FOR NEXT