ಬೆಂಗಳೂರು: ಬಿಬಿಎಂಪಿಯಲ್ಲಿ ಆಗಿರುವ ಕಾಂಗ್ರೆಸ್-ಜೆಡಿಎಸ್ ದೋಸ್ತಿಯ ಪರಿಣಾಮವೋ ಏನೋ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಗುರುವಾರ ಮುಖ್ಯಮಂತ್ರಿ
ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ. ಬಿಬಿಎಂಪಿ ಚುನಾವಣೆ ನಂತರ ಪ್ರಥಮ ಬಾರಿಗೆ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಹಿಗ್ಗಾಮುಗ್ಗಾ ಟೀಕಿಸಿ, ಅನೇಕ ವಿಚಾರಗಳಲ್ಲಿ ಪ್ರಧಾನಿ ಮೋದಿ ಕ್ರಮವನ್ನೂ ಖಂಡಿಸಿದ್ದಾರೆ. ಇಡೀ ಪತ್ರಿಕಾಗೋಷ್ಠಿ ಯಲ್ಲಿ ಕಾಂಗ್ರೆಸ್ ಕ್ರಮ ಸಮರ್ಥಿಸಿದರು ಎನ್ನುವುದಕ್ಕಿಂತ ಸಿದ್ದರಾಮಯ್ಯ ಪರ ಮನಸ್ಥಿತಿಯಲ್ಲಿ ಮಾತನಾಡಿದರು. ಉಕ ಭಾಗಕ್ಕೆ ದೇವೇಗೌಡರ ಕೊಡುಗೆ ಏನು ಎನ್ನುವ ಧಾಟಿ ಯಲ್ಲಿ ಬಿಜೆಪಿ ನಾಯಕರು ಬಹಳ ತುಚ್ಛವಾಗಿ ಮಾತನಾಡಿದ್ದಾರೆ. ಆದರೆ ಅದಕ್ಕೆ ನಾನು ಪ್ರತಿಕ್ರಿಯಿಸಲು ಹೋಗುವುದಿಲ್ಲ ಎನ್ನುತ್ತಲೇ ದೇವೇಗೌಡರು ಬಿಜೆಪಿ ವಿರುದ್ಧ ದಾಳಿ ಆರಂಭಿಸಿದರು. ಪ್ರಾದೇಶಿಕ ಅಸಮತೋಲನ ಕುರಿತ ಡಾ. ಡಿ. ಎಂ.ನಂಜುಂಡಪ್ಪ ವರ ದಿ ಬಂದಿದ್ದಾಯ್ತು. ಆದರೆ ಆನಂತರ ದಲ್ಲಿ ಯಾವ ಯಾವ ಸರ್ಕಾರಗಳು ಆ ಭಾಗಕ್ಕೆ ಎಷ್ಟೆಷ್ಟು ಅನುದಾನ ನೀಡಿವೆ. ಯಾರು ಹಣಕಾಸು ಸಚಿವರಾಗಿದ್ದಾಗ ಅನುದಾನ ಹೆಚ್ಚು ಬಿಡುಗಡೆ ಆಗಿದೆ ಎಂದು ಬಿಜೆಪಿಯವರು ತಿಳಿಯಲಿ. ಇದಕ್ಕಾಗಿ ಸರ್ಕಾರ ಕೂಡಲೇ ಆಯೋಗ ನೇಮಿ
ಸ ಬೇಕು, ಯಾವ ಅವಧಿಯಲ್ಲಿ ಎಷ್ಟೆಷ್ಟು ಅನುದಾನ ಬಿಡುಗಡೆ ಯಾಗಿದೆ. ಅದು ಹೇಗೆ ಬಳಕೆಯಾಗಿದೆ ಎಂದು ಅಧ್ಯ ಯನ ಮಾಡಿಸಬೇಕು ಎಂದು ಗೌಡರು ತಾಕೀತು ಮಾಡಿದರು.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆ ಯುವೆ, ಇದರಲ್ಲಿ ನಾನು, ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಮುಖ್ಯಮಂತ್ರಿಗಳು ಮತ್ತು ಹಿಂದೆ ಹಣಕಾಸು ಸಚಿವರಾಗಿ ದ್ದವರು ಏನೆಲ್ಲಾ ಮಾಡಿದ್ದೇವೆಂದು ತಿಳಿಯುತ್ತದೆ. ಆದ್ದರಿಂದ ಆಯೋಗ ರಚಿಸಲೇಬೇಕು ಎಂದು ಆಗ್ರಹಿಸಿದರು.
ದೊಡ್ಡ ಅಪಮಾನ: ಪ್ರಧಾನಿ ಮೋದಿ ಮತ್ತು ಜರ್ಮನ್ ಚಾನ್ಸಲರ್ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯಗೆ ಆಮಂತ್ರಣ ನೀಡದಿರುವುದು ದೊಡ್ಡ ಅಪಮಾನ. ಇದು ಸಿದ್ದರಾಮಯ್ಯ ಅವರಿಗೆ ಮಾಡಿದ ಅಪಮಾನವಲ್ಲ. ರಾಜ್ಯದ ಕನ್ನಡಗರಿಗೆಲ್ಲಾ ಮಾಡಿದ ಅವಮಾನ. ಇದನ್ನು ನಾವು ತೀವ್ರವಾಗಿ ಖಂಡಿಸುತೇನೆ ಎಂದರು. ಹೆಚ್ಚುತ್ತಿರುವ ಅತ್ಯಾಚಾರ ವಿಚಾರವಾಗಿ ಪ್ರತಿಕ್ರಿಯಿಸಿದ ಗೌಡರು, ಸಿದ್ದರಾಮಯ್ಯ ಅವರು ಅತ್ಯಾಚಾರ ಪ್ರಕರಣಗಳು ಹೆಚ್ಚಿದರೆ ಅ„ಕಾರಿಗಳ ವಿರುದ್ಧ ಕ್ರಮ ಎಂದು ಎಚ್ಚರಿಸಿದ್ದಾರೆ. ಈ ಕೆಲಸ ಹಿಂದೆಯೇ ಮಾಡಬಹುದಿತ್ತು. ಆದರೆ ಅವರ ಮೇಲೆ ಏನೆಲ್ಲಾ ಒತ್ತಡ ಇತ್ತೋ ಗೊತ್ತಿಲ್ಲ ಎಂದು ಸಮರ್ಥಿಸಿದರು.
ಡಿಸೆಂಬರ್ ವೇಳೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ನಡೆಯುವ ಹಿನ್ನೆಲೆಯಲ್ಲಿ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸಬೇಕಿದೆ. ಆದ್ದರಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಕ್ಟೋಬರ್ 15ರಂದು ಬೃಹತ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದರಲ್ಲಿ ಶಾಸಕರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು, ಜಿಲ್ಲಾ ಮತ್ತು ತಾಲೂಕುಗಳ ಸದಸ್ಯರು, ಮಾಜಿ ಸದಸ್ಯರು ಮತ್ತು ಪರಾಜಿತ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ ಎಂದರು. ಈ ಕಾರ್ಯಕ್ರಮದ ನಂತರ ಪಕ್ಷದ ನಾಯಕರನ್ನು 8 ರಿಂದ 10 ತಂಡಗಳನ್ನಾಗಿ ರಚಿಸಿ 30 ಜಿಲ್ಲೆಗಳಲ್ಲೂ ಪ್ರವಾಸ ನಡೆಸಲಾಗುವುದು. ಈ ಮೂಲಕ
ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೂ ಪಕ್ಷದ ಅಭ್ಯರ್ಥಿಕಣಕ್ಕಿಳಿಸಲು ತಯಾರಿ ನಡೆಸಲಾಗುವುದು ಎಂದು ಅವರು ಹೇಳಿದರು. ಇದೇವೇಳೆ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ಪಕ್ಷದ ಕಚೇರಿ ನಿರ್ಮಾಣಕ್ಕೆ ರು.10ಲಕ್ಷ ದೇಣಿಗೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics