ಕೋಮು ಭಾವನೆ ಕೆರಳಿಸುವ ಬಿಜೆಪಿ ಡೆಮಾಕ್ರಸಿ ದುರ್ಬಲಗೊಳಿಸುವ ಪ್ರಧಾನಿ
ತಮ್ಮ ಕಚೇರಿ (ಪ್ರಧಾನಿ ಕಚೇರಿ ) ಹಾಗೂ ಅಧಿಕಾರಿಗಳ ಮೂಲಕ ದೇಶವನ್ನು ಮುನ್ನಡೆಸಲು ಮುಂದಾಗಿರುವ ಪ್ರಧಾನಿ ಮೋದಿ ಜನತಂತ್ರ...
ಬೆಂಗಳೂರು: ತಮ್ಮ ಕಚೇರಿ (ಪ್ರಧಾನಿ ಕಚೇರಿ ) ಹಾಗೂ ಅಧಿಕಾರಿಗಳ ಮೂಲಕ ದೇಶವನ್ನು ಮುನ್ನಡೆಸಲು ಮುಂದಾಗಿರುವ ಪ್ರಧಾನಿ ಮೋದಿ ಜನತಂತ್ರ ವ್ಯವಸ್ಥೆಯ ಎಲ್ಲ ಅಂಗಗಳನ್ನೂ ದುರ್ಬಲಗೊಳಿಸುತ್ತಿದ್ದಾರೆ. ಚುನಾವಣೆ ಎದುರಾದಾಗಲೆಲ್ಲ ಬಿಜೆಪಿ ದೇಶದಲ್ಲಿ ಕೋಮು ಭಾವನೆ ಕೆರಳಿಸುತ್ತದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಗ್ರಾಮ ಸ್ವರಾಜ್ ಸಮಾವೇ-ಶದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರಿಗೆ ಪಂಚಾಯತ್ ರಾಜ್ ವ್ಯವಸ್ಥೆ ಸೇರಿದಂತೆ ಜನತಂತ್ರದ ಯಾವ ಅಂಗಗಳ ಮೇಲೂ ಗೌರವವಿಲ್ಲ.
ತಮ್ಮ ಕಚೇರಿಯಿಂದಲೇ ದೇಶವನ್ನು ನಡೆಸಬೇಕು, ಅಧಿಕಾರಿಗಳಿಂದಲೇ ದೇಶದ ರಥವನ್ನು ಎಳೆಯಬೇಕು ಎಂಬ ಯೋಚನೆ ಅವರದ್ದಾಗಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.