ಮೈದೂರಿಂದ ಗುಡಗೂರುವರೆಗೆ
ರಾಣಿಬೆನ್ನೂರು ತಾಲೂಕಿನ ಮೈದೂರು ಗ್ರಾಮ ದಿಂದ ಗುಡಗೂರು ತಾಂಡಾದವರೆಗೆ ಸುಮಾರು 7 ಕಿಮೀ ದೂರದ ವರೆಗೆ ಕಾಂಗ್ರೆಸ್ ಉಪಾಧ್ಯಕ್ಷ...
ಹಾವೇರಿ: ರಾಣಿಬೆನ್ನೂರು ತಾಲೂಕಿನ ಮೈದೂರು ಗ್ರಾಮ ದಿಂದ ಗುಡಗೂರು ತಾಂಡಾದವರೆಗೆ ಸುಮಾರು 7 ಕಿಮೀ ದೂರದ ವರೆಗೆ ಕಾಂಗ್ರೆಸ್ ಉಪಾಧ್ಯಕ್ಷ
ರಾಹುಲ್ ಗಾಂಧಿ ಅವರು ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಶನಿವಾರ ಪಾದಯಾತ್ರೆ ನಡೆಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ವಿನಯಕುಮಾರ್ ಸೊರಕೆ, ಎಸ್.ಆರ್. ಪಾಟೀಲ, ಎಚ್.ಕೆ. ಪಾಟೀಲ ಮುಂತಾದವರು ಇದ್ದರು. ಇವರಿಗೆ ಯೂಥ್ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದರು. ಪಾದಯಾತ್ರೆಯುದ್ದಕ್ಕೂ ರಾಹುಲ್ ಗಾಂಧಿ ಜನರತ್ತ ಕೈಬೀಸುತ್ತ, ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರ ಕೈಕುಲುಕುತ್ತ ಉತ್ಸಾಹದಿಂದಲೇ ಹೆಜ್ಜೆ ಹಾಕಿದರು. ದಣಿವೇ ಆಗದಂತೆ ನಡೆದರು. ಬಹಿರಂಗ ಸಭೆ ಮುಗಿಸಿ ಭೋಜನಕ್ಕಾಗಿ ಕೇವಲ 15 ನಿಮಿಷ ಬಿಡುವು ಪಡೆದು ಮತ್ತೆ ಪಾದಯಾತ್ರೆ ಆರಂಭಿಸಿದರು. ತಾವೇನೂ ಕಡಿಮೆ ಇಲ್ಲ ಎಂಬಂತೆ ಸಿದ್ದರಾಮಯ್ಯ, ಪರಮೇಶ್ವರ್ ಅವರೂ ಲಗುಬಗೆಯಲ್ಲೇ ಹೆಜ್ಜೆ ಹಾಕಿದರು.
ಕರಗಿದ ಜನತೆ: ಪಾದಯಾತ್ರೆ ಆರಂಭವಾದಾಗ ಕಿಲೋಮೀಟರ್‍ಗಟ್ಟಲೆ ಉದ್ದಕ್ಕೂ ಕಾರ್ಯಕರ್ತರುರಾಹುಲ್ ಅವರನ್ನು ಹಿಂಬಾಲಿಸಿದರು. ಪಕ್ಷದ ಬಾವುಟ ಪ್ರದರ್ಶಿಸುತ್ತ ರಾಹುಲ್ ನೋಡಲು ಜನತೆ ಮುಗಿಬಿದ್ದರು. ಮಧ್ಯಾಹ್ನ ಬಿಸಿಲ ಪ್ರಖರತೆ ಹೆಚ್ಚಾದಾಗ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕೆಲ ನಾಯಕರು ಬಸವಳಿದರು. ಬೆವರು ಹರಿಸುತ್ತಲೇ ಹೆಜ್ಜೆ ಹಾಕಿದರು. ಗುಡಗೂರು ಗ್ರಾಮದಲಿ ಬಹಿರಂಗ ಸಭೆ ಬಳಿಕ ತಾಂಡಾವರೆಗೆ ಮತ್ತೆ 3 ಕಿಮೀ ಪಾದಯಾತ್ರೆ ಮುಂದುವರಿಸಿದಾಗ ಮಧ್ಯಾಹ್ನ 2 ಗಂಟೆಯಾಗಿತ್ತು. ನಿಧಾನವಾಗಿ ಜನ ಕರಗತೊಡ ಗಿದರು. ಬೆಳಗ್ಗೆ 10 ಗಂಟೆಯಿಂದ ಆರಂಭವಾದ ಪಾದಯಾತ್ರೆ ಮಧ್ಯೆ ಶಾಲಾ ವಿದ್ಯಾರ್ಥಿಗಳು, ರೈತರೊಂದಿಗೆ ರಾಹುಲ್ ಸಂವಾದ ನಡೆಸಿದರು.
ಸಾಂತ್ವನದಲ್ಲೂ ಸಂಭ್ರಮ: ರೈತರಿಗೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ಪಾದಯಾತ್ರೆ ಹಮ್ಮಿಕೊಂಡಿರುವು ದರಿಂದ ಪಕ್ಷ, ಪಕ್ಷದ ನಾಯಕರ ಬ್ಯಾನರ್, ಪಕ್ಷದ ಬಾವುಟ ಪ್ರದರ್ಶನ ಬೇಡ ಎಂದು ಸಂಘಟಕರು ಹೇಳುತ್ತಲೇ ಬಂದಿದ್ದರು. ಕಾರ್ಯಕರ್ತರು ನಾಯಕರ ಭಾವಚಿತ್ರ ಪ್ರದರ್ಶಿಸಿ, ಘೋಷಣೆ ಕೂಗಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.