ರಾಹುಲ್ ಭೇಟಿಯಿಂದ ಖರ್ಚು
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿಯಿಂದ ಜನರ ತೆರಿಗೆ ಹಣ ರು.5 ರಿಂದ ರು.6 ಕೋಟಿ ಖರ್ಚಾಗಿದೆ ಎಂದು...
ಪಾಂಡವಪುರ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿಯಿಂದ ಜನರ ತೆರಿಗೆ ಹಣ ರು.5 ರಿಂದ ರು.6 ಕೋಟಿ ಖರ್ಚಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಲೇವಡಿ ಮಾಡಿದರು.
ತಾಲೂಕಿನ ಸಣಬದಕೊಪ್ಪಲು ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಲೋಕೇಶ್ ನಿವಾಸಕ್ಕೆ ಭೇಟಿ ನೀಡಿ ರು.2 ಲಕ್ಷ ಪರಿಹಾರವನ್ನು ಲೋಕೇಶ್ ಪತ್ನಿಗೆ ವಿತರಿಸಿ ಮಾತನಾಡಿದ ಅವರು, ರಾಹುಲ್ ಭೇಟಿಯಿಂದ ರೈತರಿಗೆ ಯಾವುದೇ ಉಪಯೋಗವಾಗಿಲ್ಲ.
ಆದರೆ, ತೆರಿಗೆ ಹಣ ಮಾತ್ರ ಖರ್ಚಾಗಿದೆ. ಸಚಿವ ಅಂಬರೀಶ್ ಜೆಡಿಎಸ್‍ಗೆ ಬರುವುದಿಲ್ಲ. ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.
ಸಂಸದ ಸಿ.ಎಸ್. ಪುಟ್ಟರಾಜು ಮಾತನಾಡಿ, ``ಚೆಕ್ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಅವರಿಗೆ ದಿಗ್ವಿಜಯ್ ಸಿಂಗ್ ಛೀಮಾರಿ ಹಾಕಲು ಮಾಜಿ ಸಂಸದೆ ರಮ್ಯಾ ಕಾರಣ. ನನ್ನ ಹೆಸರು ಪ್ರಸ್ತಾಪ ಮಾಡಿದ ಸಂದರ್ಭದಲ್ಲಿ ಪತ್ರಿಕೆಯ ವರದಿ ಆಧಾರದ ಮೇರೆಗೆ ನಾನು ಅವರ ಬಗ್ಗೆ ಮಾತನಾಡಿದ್ದೇನೆ. ರಮ್ಯಾ ಅವರಿಂದ ನಾನು ಪಾಠ ಕಲಿಯಬೇಕಾಗಿಲ್ಲ'' ಎಂದು ಹೇಳಿದರು.