ರಾಜಕೀಯ

ಸರ್ಕಾರಕ್ಕೆ ಗಡುವು ವಿಧಿಸಿದ ದೊರೆಸ್ವಾಮಿ

Rashmi Kasaragodu
ಬೆಂಗಳೂರು:  ಕರ್ನಾಟಕ ಲೋಕಾಯುಕ್ತ ವಿಧೇಯಕ -2015 ರಂತೆ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಪದಚ್ಯುತಿ ಮಾಡಬೇಕು ಮತ್ತು ಕರ್ನಾಟಕ ಭೂ ಕಬಳಿಕೆ ವಿಧೇಯಕ  2007 ಅನ್ನು ಅನುಷ್ಠಾನಕ್ಕೆ ತಂದು ತಂದು ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಇನ್ನು15 ದಿನಗಳಲ್ಲಿ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನವೆಂಬರ್‍ನಿಂದಉಗ್ರ ಹೋರಾಟ ಎದುರಿಸಿ ಎಂದು ಸ್ವಾತಂತ್ರ್ಯ ಹೋರಾಟಗಾರ  ಎಚ್.ಎಸ್. ದೊರೆಸ್ವಾಮಿ ಸರ್ಕಾರಕ್ಕೆ ಗುಡುವು ವಿಧಿಸಿದ್ದಾರೆ. ಭೂ ಕಬಳಿಕೆ ಹೋರಾಟ ಸಮಿತಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ `ಕರ್ನಾಟಕ ರಾಜ್ಯದ ಭೂ ನೀತಿ ಮತ್ತು ಭೂಕಬಳಿಕೆ' ಕುರಿತ ವಿಚಾರ ಸಂಕಿರಣ ಹಾಗೂ ಡಿ.ಚೆಲುವರಾಜು ಅವರ `ಎ.ಟಿ.ರಾಮಸ್ವಾಮಿ ಭೂ ಕಬಳಿಕೆಗೆ ಅಂಕುಶ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ ದ ಅವರು, ``ಭೂಕಬಳಿಕೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ವಿಶೇಷ ನ್ಯಾಯಲಯ ಸ್ಥಾಪಿಸಬೇಕು. ಅಲ್ಲದೆ, ಲೋಕಾಯುಕ್ತರ ಪದಚ್ಯುತಿ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳದಿದ್ದಲ್ಲಿ ನವೆಂಬರ್ ತಿಂಗಳಿನಿಂದ ಹೋರಾಟ ಖಚಿತ. ಈ ಬಾರಿ ಗುರಿ ತಲುಪುವವರೆಗೆ ಹೋರಾಟ ಕೈಬಿಡುವುದಿಲ್ಲ'' ಎಂದು ಎಚ್ಚರಿಕೆ ನೀಡಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ,ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್. ಪೇಟೆ ಕೃಷ್ಣನ್ಯಾ. ಸಂತೋಷ್ ಹೆಗ್ಡೆ, ಸಾಹಿತಿ ದೇವನೂರ ಮಹಾದೇವ, ಭೂಕಬಳಿಕೆ ವಿರೋಧಿ ಹೋರಾಟ ಸಮಿತಿ ಮುಖ್ಯಸ್ಥ ಎ.ಟಿ. ರಾಮಸ್ವಾಮಿ ಸೇರಿದಂತೆ ಹಲವು ಗಣ್ಯರು ಇದ್ದರು.
SCROLL FOR NEXT