ನವದೆಹಲಿ: ಚರ್ಚೆಯಿಂದ ದೂರವಾಗಿದ್ದ ಲಲಿತ್ ಮೋದಿ ಪ್ರಕರಣದ ಬಗ್ಗೆ ಕಾಂಗ್ರೆಸ್ ನಾಯಕ ರಣ್ ದೀಪ್ ಸಿಂಗ್ ಸುರ್ಜೆವಾಲ ಮಾತನಾಡಿದ್ದು ಲಲಿತ್ ಮೋದಿ ಅವರನ್ನು ಯಾವಾಗ ಭಾರತಕ್ಕೆ ವಾಪಸ್ ಕರೆ ತರುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಲಲಿತ್ ಮೋದಿ ಅವರನ್ನು ಭಾರತಕ್ಕೆ ವಾಪಸ್ ಕರೆತರುವ ಬಗ್ಗೆ ಕೇಂದ್ರ ಸರ್ಕಾರ ಕಾಲಮಿತಿಯನ್ನು ತಿಳಿಸಬೇಕಿದೆ. ಈ ವಿಷಯದ ಬಗ್ಗೆ ಸಂಸತ್ ನ ಒಳಗೆ ಹಾಗೂ ಹೊರಗೆ ಚರ್ಚೆ ನಡೆಸಲು ಕಾಂಗ್ರೆಸ್ ಸಿದ್ಧವಿದೆ ಎಂದು ಸುರ್ಜೆವಾಲ ಮಾಧ್ಯಮ ವರದಿಗಾರರಿಗೆ ತಿಳಿಸಿದ್ದಾರೆ.
ಯುಪಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ, ಲಲಿತ್ ಮೋದಿ ಅವರ ಗಡಿಪಾಡಿಗೆ ಆಗ್ರಹಿಸಿ ಬ್ರಿಟೀಷ್ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಲಲಿತ್ ಮೋದಿ ಅವರನ್ನು ವಾಪಸ್ ಕರೆತರಲು ಯುಪಿಎ ಸರ್ಕಾರ ಸಿದ್ಧವಿತ್ತು ಎಂದು ಸುರ್ಜೆವಾಲ ಹೇಳಿದ್ದಾರೆ.