ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ತಮ್ಮದೇನೂ ನಡೆಯದು ಎನ್ನುವ ಹಂತಕ್ಕೆ ಬಂದಿರುವ ಬಿಜೆಪಿ ಈಗ ಹೋರಾಟದ ಹಾದಿ ತುಳಿದಿದೆ.
ಮೇಯರ್ ಚುನಾವಣೆ ನಡೆಯುವವರೆಗೂ ದಿನಕ್ಕೊಂದು ರೀತಿಯ ಪ್ರತಿಭಟನೆಯಂತೆ ನಿರಂತರ ಹೋರಾಟ ನಡೆಸಲು ಬಿಜೆಪಿ ತೀರ್ಮಾನಿಸಿದೆ.
ಕೈಗೆ ಬಂದ ತುತ್ತು ಬಾಯಿಗೆ ಬಂದಂತಾಗಿರುವುದಕ್ಕೆ ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿರುವ ಬಿಜೆಪಿ ನಾಯಕರು ಕಾಂಗ್ರೆಸ್ ಜತೆ ಅಧಿಕಾರ ಹಂಚಿಕೊಳ್ಳುತ್ತಿರುವ ಜೆಡಿಎಸ್ ವಿರುದ್ಧ ಮಾತ್ರ ಚಕಾರವೆತ್ತಿಲ್ಲ.