ಬೆಂಗಳೂರು: ಕಾಂಗ್ರೆಸ್ ಬಿಬಿಎಂಪಿ ಕಾರ್ಪೊರೇಟರ್‌ಗಳ ಖರೀದಿಗೆ ಬಿಜೆಪಿ ಯತ್ನಿಸುತ್ತಿದ್ದು, ನಮ್ಮ ಕಾರ್ಪೊರೇಟರ್‌ಗಳಿಗೆ ಹಣದ ಆಫರ್ ನೀಡಿದೆ ಎಂದು ಸಾರಿಗೆ ಹಾಗೂ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುದುರೆ ವ್ಯಾಪಾರ ಮಾಡುವವರು ಬುಕ್ಕಿಗಳು, ನಾವಲ್ಲ. ಬಳ್ಳಾರಿಯಿಂದ ಬಂದು ರಾಜಕೀಯ ಹೊಲಸು ಮಾಡಿದರು ಎಂದು ಪರೋಕ್ಷವಾಗಿ ರೆಡ್ಡಿ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದರು.
ಅಧಿಕಾರವಿದ್ದಾಗ ಬೇರೆ ರೀತಿ ಇರುವ ಬಿಜೆಪಿಯವರು, ಅಧಿಕಾರ ಇಲ್ಲದಿದ್ದಾಗ ಮತ್ತೊಂದು ರೀತಿ ಇರುತ್ತಾರೆ ಎಂದು ಬಿಜೆಪಿ ನಿಲುವಿನ ವಿರುದ್ಧ ರಾಮಲಿಂಗಾರೆಡ್ಡಿ ಕಿಡಿಕಾರಿದರು.
ಈ ಮಧ್ಯೆ, ಬಿಜೆಪಿ ನಾಯಕ ಆರ್. ಅಶೋಕ್ ಅವರು, ಕಾಂಗ್ರೆಸ್ ಕಾರ್ಪೊರೇಟರ್‌ಗಳ ಹೈಜಾಕ್ ಮಾಡಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಅವರು ಆರೋಪಿಸಿದ್ದಾರೆ.