ವೈ.ಎಸ್ ವಿ ದತ್ತಾ 
ರಾಜಕೀಯ

ಬಿಬಿಎಂಪಿಯಲ್ಲಿ ರೂ. 9,600 ಕೋಟಿ ಸಾಲ, ತನಿಖೆಗೆ ಜೆಡಿಎಸ್‍ನ ದತ್ತಾ ಆಗ್ರಹ

ಬಿಬಿಎಂಪಿಯಲ್ಲಿ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಬಿಜೆಪಿ ರೂ. 9,600 ಕೋಟಿಗಳಷ್ಟು ಸ್ವೇಚ್ಛಾಚಾರದ ಸಾಲ ಮಾಡಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು...

ಬೆಂಗಳೂರು: ಬಿಬಿಎಂಪಿಯಲ್ಲಿ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಬಿಜೆಪಿ ರೂ. 9,600 ಕೋಟಿಗಳಷ್ಟು ಸ್ವೇಚ್ಛಾಚಾರದ ಸಾಲ ಮಾಡಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಜೆಡಿಎಸ್ ಉಪನಾಯಕ ವೈಎಸ್‍ವಿ ದತ್ತ, ಬಿಬಿಎಂಪಿಯನ್ನು ಮೂರು ಹೋಳುಗಳನ್ನಾಗಿ ಮಾಡುವ ಪ್ರಸ್ತಾಪವನ್ನು ಜಾರಿಗೆ ತರಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಜೆಡಿಎಸ್‍ಗೆ ಮುಜುಗರ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

`ಬಿಬಿಎಂಪಿಯಲ್ಲಿನ ಕಾಂಗ್ರೆಸ್‍ನೊಂದಿಗಿನ ಮೈತ್ರಿ ಸಂದರ್ಭದಲ್ಲಿ ಈ ಎರಡು ಅಂಶಗಳನ್ನು ಹೊರತುಪಡಿಸಿ ಬೇರೆ ಯಾವ ಷರತ್ತುಗಳನ್ನೂ ಕಾಂಗ್ರೆಸ್ ಮುಂದಿಟ್ಟಿಲ್ಲ. ಇಂದು ಬೆಳಗ್ಗೆ ನಾನೇ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಚೆಲ್ಲಕುಮಾರ್ ಇದ್ದರು. ಮೂವರೂ ಬಿಬಿಎಂಪಿಯಲ್ಲಿನ ಹೊಂದಾಣಿಕೆಯ ಕುರಿತು ಮಾತನಾಡಿದ್ದೇವೆ. ಇವತ್ತು ಬೆಂಗಳೂರಿನ ಹಿತ ಮುಖ್ಯ. ಅಷ್ಟಕ್ಕಾಗಿ ನಾವು ಕಾಂಗ್ರೆಸ್ ಜತೆ ಕೈ ಜೋಡಿಸಿ ಅಧಿಕಾರ ಹಿಡಿಯಲು ಮುಂದಾಗಿದ್ದೇವೆಯೇ ಹೊರತು ಯಾವುದೇ ಅನ್ಯ ಉದ್ದೇಶಕ್ಕಲ್ಲ' ಎಂದು ಗುರುವಾರ ಅವರು ಸುದ್ದಿಗಾರರಿಗೆ ತಿಳಿಸಿದರು.

ಷರತ್ತಲ್ಲ, ತನಿಖೆಗೆ ಮನವಿ: ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ರೂ. 9,600 ಕೋಟಿ ಸಾಲ ಮಾಡಲಾಗಿದೆ. ಬಿಬಿಎಂಪಿಯ ಬೊಕ್ಕಸ ಬರಿದಾಗಿದೆ. ಇದಕ್ಕೆ ಕಾರಣರಾದವರು ಯಾರು? ರಾಜಕಾರಣಿಗಳೋ ಅಧಿಕಾರಿಗಳೋ ಎಂಬುದನ್ನೆಲ್ಲ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸಮಗ್ರ ತನಿಖೆಯೊಂದನ್ನು ನಡೆಸುವಂತೆ ಮಾಜಿ ಪ್ರಧಾನಿ ದೇವೇಗೌಡರ ಸೂಚನೆಯ ಮೇರೆಗೆ ಮುಖ್ಯಮಂತ್ರಿಗಳಿಗೆ ಮನ ಮಾಡಿದ್ದೇನೆ. ಇದನ್ನು ಷರತ್ತು ಎಂಬುದಕ್ಕಿಂತ ಮನವಿ ಎಂಬುದು ಸೂಕ್ತ ಎಂದರು.

ಬಿಬಿಎಂಪಿ ವಿಭಜನೆ ಬೇಡ: ಬಿಬಿಎಂಪಿಯನ್ನು ಮೂರು ಹೋಳುಗಳನ್ನಾಗಿ ಮಾಡಬಾರದು ಎಂಬುದು ಜೆಡಿಎಸ್ ವಾದ. ಈ ವಿಷಯದಲ್ಲಿ ನಾವು ಮುಜುಗರಕ್ಕೆ ಒಳಗಾಗದಂತೆ ಎಚ್ಚರ ವಹಿಸಿ ಎಂದು ಮುಖ್ಯಮಂತ್ರಿಯವರಿಗೆ ಹೇಳಿದ್ದೇನೆ. ರಾಜ್ಯ ಸರ್ಕಾರ ಬಿಬಿಎಂಪಿಯನ್ನು ಮೂರು ಹೋಳುಗಳನ್ನಾಗಿ ಮಾಡುವ ವಿಧೇಯಕ ಅಂಗೀಕರಿಸಿದರೂ ಅದಿನ್ನೂ ರಾಷ್ಟ್ರಪತಿಯವರ ಅಂಗಳದಲ್ಲಿದೆ. ಒಂದು ವೇಳೆ ಅವರು ಈ ಮಸೂದೆಗೆ ಅಂಕಿತ ಹಾಕಲು ಒಪ್ಪಿಗೆ ನೀಡದೆ ಹೋದರೆ ಸಹಜವಾಗಿಯೇ ಅದು ಗೃಹ ಕಾರ್ಯದರ್ಶಿಗಳ ಕೈಗೆ ಹೋಗುತ್ತದೆ. ಅವರು ಅದನ್ನು ಪರಿಶೀಲನೆ ನಡೆಸಲು ಅಧ್ಯಯನಾ ಸಮಿತಿಗೆ ಒಪ್ಪಿಸುತ್ತಾರೆ. ಹೀಗಾಗಿ ಇದರಿಂದ ತಕ್ಷಣಕ್ಕೆ ನಾವು ಮುಜುಗರ ಪಡುವ ಸನ್ನಿವೇಶವೇನೂ ಉದ್ಭಸುವುದಿಲ್ಲ. ಇದನ್ನೇ ಒಂದು ಷರತ್ತು ಎಂದು ಭಾವಿಸಿ ಮೈತ್ರಿಯಿಂದ ಹಿಂದೆ ಸರಿಯುವ ಪ್ರಶ್ನೆಯೂ ಇಲ್ಲ ಎಂದು ದತ್ತಾ ವಿವರಿಸಿದರು. ಯಾವ ಕಾರಣಕ್ಕೂ ವಿಭಜನೆ ಉದ್ದೇಶವನ್ನು ಜೆಡಿಎಸ್ ಒಪ್ಪಲು ಸಾಧ್ಯವಿಲ್ಲ ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದ ದತ್ತಾ, ಈ ವಿಷಯದಲ್ಲಿ ಪಕ್ಷ ಹಿಂದೆ ಸರಿಯದು ಎಂಬುದನ್ನೂ ಬಿಂಬಿಸಿದರು. ಕಳೆದ ಅವಧಿಯಲ್ಲಿ ಬಿಜೆಪಿ ನಡೆಸಿದ ಆರ್ಥಿಕ ಅವ್ಯವಹಾರಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುವ ಮೂಲಕ, ಮೈತ್ರಿ ಕೂಟದ ಮೊದಲ ನಡೆ ಏನಿರಬಹುದುಎಂಬುದನ್ನೂ ಸೂಚ್ಯವಾಗಿವ್ಯಕ್ತಪಡಿಸಿದರು. ಗುರುವಾರ ಯಾವ ಮಾತುಕತೆಯೂ ನಡೆಯದಿರುವ ಹಿನ್ನೆಲೆಯಲ್ಲಿ ವೈಎಸ್‍ವಿ ದತ್ತಾ ಅವರ ಹೇಳಿಕೆ ಮಹತ್ವ ಪಡೆದುಕೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!