ಡಿಕೆ ಶಿವಕುಮಾರೊಂದಿಗೆ ಬಿಜೆಪಿ ಕಾರ್ಪೊರೇಟರ್ಸ್ 
ರಾಜಕೀಯ

ಬಿಬಿಎಂಪಿ ಮೇಯರ್ ಚುನಾವಣೆ: ಬಿಜೆಪಿ ಕಾರ್ಪೊರೇಟರ್‌ಗಳಿಂದ ಡಿಕೆಶಿ ಭೇಟಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಪೊರೇಟರ್‌ಗಳಿಬ್ಬರು...

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಪೊರೇಟರ್‌ಗಳಿಬ್ಬರು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಹಂಪಿನಗರ ಕಾರ್ಪೊರೇಟರ್ ಆನಂದ್ ಹೊಸೂರು ಹಾಗೂ ಮಾರೇನಹಳ್ಳಿ ಬಿಜೆಪಿ ಕಾರ್ಪೊರೇಟರ್ ಮಧುಕಮಾರಿ ಪತಿ ವಾಗೀಶ್ ಅವರು ಇಂದು ಬೆಳಗ್ಗೆ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ, ಚುನಾವಣೆ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ವಾಗೀಶ್ ಅವರು, ರಾಜಕೀಯ ಉದ್ದೇಶದಿಂದ ನಾವು ಸಚಿವರನ್ನು ಭೇಟಿಯಾಗಿಲ್ಲ ಮತ್ತು ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಚರ್ಚಿಸಿಲ್ಲ. ವಿದ್ಯುತ್ ಸಮಸ್ಯೆ ಬಗ್ಗೆ ಚರ್ಚಿಸಲು ತೆರಳಿದ್ದೇವು ಎಂದಿದ್ದಾರೆ.

ಸೆಪ್ಟೆಂಬರ್ 11ರಂದು ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ಬೆಳಗಾವಿಯಲ್ಲಿ ಲೋಕಾಯುಕ್ತ ದಾಳಿ: ಕೋಟಿ ಕೋಟಿ ಆಸ್ತಿ ಪತ್ತೆ; ದಿನಗೂಲಿ ನೌಕರನೊಬ್ಬ ಕುಬೇರನಾದ ಕಥೆ ಇದು!

ಒಂದು ಸಲ ಅಧಿಕಾರ ಕೊಟ್ಟು ನೋಡಿ, ರಾಜ್ಯಕ್ಕೆ ಹಿಡಿದಿರೋ ಗ್ರಹಣ ಬಿಡಿಸ್ತೀನಿ: ಕುಮಾರಸ್ವಾಮಿ

ಮಧ್ಯಸ್ಥಿಕೆ ಯಾರೇ ವಹಿಸಲಿ ಅದರಿಂದ ಭಾರತಕ್ಕೇ ಲಾಭ! US ಜೊತೆ ಅಂಥಹ ಸಂಬಂಧ ಪಾಕ್ ಗೆ ಮಾತ್ರ ಸಾಧ್ಯ ಬೇರಾರಿಗೂ ಅಲ್ಲ- ತರೂರ್ ವ್ಯಂಗ್ಯ

ಹುಬ್ಬಳ್ಳಿ ಆಯ್ತು ಈಗ ಕೊಪ್ಪಳದಲ್ಲೂ Love Jihad: ಮುಸ್ತಫಾ ಮೊಬೈಲ್‌ನಲ್ಲಿ Hindu ಯುವತಿಯರ ಅಶ್ಲೀಲ ವಿಡಿಯೋಗಳು ಪತ್ತೆ!

SCROLL FOR NEXT