ಬೆಂಗಳೂರು: ಆತ್ಮಹತ್ಯೆಗೆ ಶರಣಾಗಿದ್ದ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಜೆಡಿಎಸ್ ಉಚ್ಚಾಟಿತ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಬುಧವಾರ ಕಲ್ಲಪ್ಪ ಕುಟುಂಬದ ಕ್ಷಮೆ ಕೋರಿದ್ದಾರೆ.
ಈ ಸಂಬಂಧ ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬಾಲಕೃಷ್ಣ, ನಾನು ಯಾರಿಗೂ ನೋವು ನೀಡುವ ಉದ್ದೇಶದಿಂದ ಆ ಪದ ಬಳಿಸಿಲ್ಲ. ನಮ್ಮ ಕಡೆ ಸಾಮಾನ್ಯವಾಗಿ ಆ ಪದ ಬಳಸುತ್ತಾರೆ. ಆದರೆ ಕಲ್ಲಪ್ಪ ಅವರ ತಂದೆಯ ಪ್ರತಿಕ್ರಿಯೆ ನೋಡಿ ನನಗೆ ತುಂಬಾ ನೋವಾಯಿತು. ಹೀಗಾಗಿ ನನ್ನ ಅವರ ಕ್ಷಮೆ ಕೇಳುತ್ತೇನೆ ಎಂದರು.
ನಮ್ಮ ಬಳಿ ದುಡ್ಡಿದೆ ಎಂದು ನಾವು ಅವರಿಗೆ ದುಡ್ಡು ನೀಡಿಲ್ಲ. ಅವರ ಕಷ್ಟ ನೋಡಿ ಅನುಕಂಪದಿಂದ ಹಣ ನೀಡಿದ್ದೇವೆ. ಕಲ್ಲಪ್ಪ ಅವರು ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು ಎಂದು ಬಾಲಕೃಷ್ಣ ಹೇಳಿದ್ದಾರೆ.
ಮಾಗಡಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುವ ವೇಳೆ ಹಂಡಿಭಾಗ್ ಅವರ ವಿಚಾರ ಪ್ರಸ್ತಾವಿಸಿದ ಬಾಲಕೃಷ್ಣ ನೋಡಿ ಆಶ್ರಯ ಮನೆಯಲ್ಲಿ ಅವನ ತಂದೆ ತಾಯಿ ವಾಸ ಮಾಡ್ತಿದಾರೆ. ಅಲ್ಲ ಅಷ್ಟು ಓದಿರೋ ಆ ಬಡ್ಡಿ ಮಗನಿಗೆ ಅದನ್ನ ಜೀರ್ಣಿಸಿಕೊಳ್ಳುವ ಶಕ್ತಿ ಇಲ್ಲ ಅಂತಂದ್ರೇ ..ಅವ್ನು ಗಾಂಡು ಎಂದು ಟೀಕಿಸಿದ್ದರು. ಶಾಸಕರ ಈ ಹೇಳಿಕೆ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಇನ್ನು ತಮ್ಮ ಹೇಳಿಕೆ ಬಗ್ಗೆ ಸಮರ್ಥನೆ ನೀಡಿರುವ ಬಾಲಕೃಷ್ಣ, ನಾನು ತಪ್ಪು ಮಾತನಾಡಿಲ್ಲ, ಹಳ್ಳಿಗಳಲ್ಲಿ ಆಡು ಭಾಷೆಯಾಗಿ ಈ ರೀತಿ ಪದಗಳನ್ನು ಬಳಸುತ್ತಾರೆ. ಕೈಯ್ಯಲ್ಲಿ ಆಗದವರನ್ನು ಹೀಗೆ ಕರೆಯತ್ತಾರೆ. ನಾನು ಹಾಗೆಯೇ ಬಳಸಿದೆ ಅಷ್ಟೇ , ನನ್ನ ಪದ ಬಳಕೆಯಲ್ಲಿ ತಪ್ಪಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics