ರಾಜಕೀಯ

ತಮ್ಮ ಕನ್ನಡಕ 50 ಸಾವಿರಕ್ಕೆ, ವಾಚ್ 10 ಲಕ್ಷಕ್ಕೆ ಖರೀದಿಸಿ ಎಂದ ಸಿಎಂ ಸಿದ್ದರಾಮಯ್ಯ!

Lingaraj Badiger
ಮೈಸೂರು: ತಮ್ಮ ಕನ್ನಡಕವನ್ನು 50 ಸಾವಿರ ರುಪಾಯಿಗೆ ಹಾಗೂ ವಾಚ್ ಅನ್ನು 10 ಲಕ್ಷ ರುಪಾಯಿಗೆ ಖರೀದಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮದವರಿಗೆ ಕೇಳಿಕೊಂಡ ಘಟನೆ ಶುಕ್ರವಾರ ಮೈಸೂರಿನಲ್ಲಿ ನಡೆಯಿತು,
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ, ವರದಿಗಾರರು ನಿಮ್ಮ ಕನ್ನಡಕ 1.5ಲಕ್ಷದ್ದು ಮತ್ತು ವಾಚ್ ನ ಬೆಲೆ 50 ಲಕ್ಷ ರುಪಾಯಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಈ ವೇಳೆ ಸಿಎಂ ತಮ್ಮ ಕನ್ನಡಕ ತೆಗೆದಿಟ್ಟು ಇದನ್ನು ಯಾರಾದರು 50 ಸಾವಿರ ಕೊಟ್ಟು ಖರೀದಿಸಿ ಎಂದರು. ಅಲ್ಲದೆ ತಮ್ಮ ವಾಚ್ ತೋರಿಸಿ, ಈ ವಾಚ್ ಅನ್ನು 10 ಲಕ್ಷಕ್ಕೆ ಖರೀದಿಸಿ ಎಂದು ಎಚ್ ಡಿಕೆಗೆ ತಿರುಗೇಟು ನೀಡಿದರು.
SCROLL FOR NEXT