ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ರೇಸ್ ನಲ್ಲಿ ಬಿಎಸ್‌ವೈ, ಆರ್. ಅಶೋಕ್, ಸಿ.ಟಿ ರವಿ

ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ಸ್ಥಾನ ಆಯ್ಕೆಗೆ ಸರಿಯಾಗಿ ಒಂದು ತಿಂಗಳು ಉಳಿದಿರುವಂತೆಯೆ ಚಟುವಟಿಕೆಗಳು ಗರಿಗೆದರಿದ್ದು, ರಾಜ್ಯಾಧ್ಯಕ್ಷರಾಗಲು ಮಾಜಿ ಉಪ...

ಬಿಎಸ್ ಯಡಿಯೂರಪ್ಪ
Vishwanath S
Updated On : 22 Feb 2016, 10:04 am

ಬೆಂಗಳೂರು: ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ಸ್ಥಾನ ಆಯ್ಕೆಗೆ ಸರಿಯಾಗಿ ಒಂದು ತಿಂಗಳು ಉಳಿದಿರುವಂತೆಯೆ ಚಟುವಟಿಕೆಗಳು ಗರಿಗೆದರಿದ್ದು, ರಾಜ್ಯಾಧ್ಯಕ್ಷರಾಗಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ಸಿಟಿ ರವಿ ಮೂವರು ನಾಯಕರು ಹರಸಾಹಸ ಪಡುತ್ತಿದ್ದಾರೆ.

ಈ ಸಮಯದಲ್ಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಾಳೆ ಕರೆದಿರುವ ರಾಜ್ಯ ನಾಯಕರ ಸಭೆ ಕುತೂಹಲ ಹೆಚ್ಚಿಸಿದೆ. ಮೂವರಿಗೂ ಸ್ಥಾನ ಕೊಡದೆ ನಾಲ್ಕನೆಯವರಿಗೆ ಪಟ್ಟ ಕಟ್ಟಿ, ಬಿಎಸ್​ವೈ ಅವರನ್ನು 2018ರ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗಿ ಬಿಂಬಿಸಿದರೆ ಹೇಗೆ ಎಂಬ ಲೆಕ್ಕಾಚಾರ ವರಿಷ್ಠರಲ್ಲಿ ಮೂಡಿದೆ.

ಮಾ.20ಕ್ಕೆ ಹಾಲಿ ರಾಜ್ಯಾಧ್ಯಕ್ಷ ಪ್ರಲ್ಹಾದ್ ಜೋಶಿ ಅವಧಿ ಮುಕ್ತಾಯವಾಗಲಿದೆ. ಮಾ.21ರೊಳಗೆ ಅಧ್ಯಕ್ಷರನ್ನು ನೇಮಕ ಮಾಡಬೇಕು. ಎರಡನೇ ಅವಧಿಗೆ ಅಧ್ಯಕ್ಷರಾಗಿ ಜೋಶಿ ಮುಂದುವರಿಯಲು ಪಕ್ಷದ ಬೈಲಾದಲ್ಲಿ ಅವಕಾಶವಿದೆ. ವೈಯಕ್ತಿಕ ಪ್ರಚಾರ ಹಾಗೂ ಸ್ಟಾರ್​ಗಿರಿಗೆ ಹಾತೊರೆಯದೆ ಎಲ್ಲರ ನಿರ್ಧಾರಕ್ಕೆ ತಮ್ಮ ಮುದ್ರೆ ಒತ್ತುವ ಗುಣ ಹೊಂದಿರುವ ಅವರನ್ನೇ ಮುಂದುವರಿಸಲು ಒಂದು ಹಂತದಲ್ಲಿ ಬಿಜೆಪಿ ರಾಷ್ಟ್ರೀಯ ಮುಖಂಡರಲ್ಲಿ ಚರ್ಚೆ ನಡೆದಿತ್ತು.

ಆದರೆ ಮತ್ತೊಮ್ಮೆ ಮುಂದುವರಿಯಲು ಸ್ವತಃ ಜೋಷಿಯೇ ಆಸಕ್ತಿ ಹೊಂದಿಲ್ಲ. ಹೀಗಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಆರ್. ಅಶೋಕ್ ಹಾಗೂ ಸಿ.ಟಿ. ರವಿ ಕಣದಲ್ಲಿದ್ದು,  ಈ ಮೂವರನ್ನು ಬಿಟ್ಟು ನಾಲ್ಕನೇಯವರಿಗೆ ಪಟ್ಟಕಟ್ಟುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments