ಬೆಂಗಳೂರು: ಸೋಮವಾರದಿಂದ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭಗೊಳ್ಳಲಿದ್ದು, ಮೊದಲ ದಿನ ರಾಜ್ಯಪಾಲ ವಜುಭಾಯಿ ವಾಲ ಅವರು ಭಾಷಣ ಮಾಡಲಿದ್ದಾರೆ.
ಫೆಬ್ರವರಿ 29ರಿಂದ ಮಾರ್ಚ್ 5ರವರೆಗೆ ವಿಧಾನಮಂಡಲ ಜಂಟಿ ಅಧಿವೇಶನ ನಡೆಯಲಿದ್ದು, ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಅಧಿವೇಶನವನ್ನು ವರ್ಷಕ್ಕೆ 60 ದಿನಗಳ ಕಾಲ ನಡೆಸಲು ಕಳೆದ ಮೂರು ವರ್ಷಗಳಿಂದ ಸಾಧ್ಯವಾಗಲಿಲ್ಲ. ಈ ವರ್ಷವಾದರೂ 60 ದಿನ ಕಲಾಪ ನಡೆಯಲಿ ಎನ್ನುವುದು ನನ್ನ ಆಶಯ ಎಂದು ಅವರು ಹೇಳಿದ್ದಾರೆ.
ಶಾಸಕರು ಹೆಚ್ಚು ಕಾಲ ಅಧಿವೇಶನದಲ್ಲಿ ಭಾಗವಹಿಸಿ, ಸಾರ್ವಜನಿಕರಿಗೆ ಅನುಕೂಲವಾಗುವಂತಹ ವಿಷಯಗಳ ಬಗ್ಗೆ ಚರ್ಚೆಯ ಮಾಡಬೇಕು. ನಾನು ಶಾಸಕನಾಗಿದ್ದಾಗ ಒಂದು ದಿನವೂ ಕೂಡಾ ಸದನವನ್ನು ತಪ್ಪಿಸಿಕೊಂಡಿಲ್ಲ. ಹಾಗಾಗಿ, ಶಾಸಕರು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಇನ್ನು ಕುಡಿಯುವ ನೀರು, ವಿದ್ಯುತ್, ಬರ ಪರಿಹಾರ ಕಾಮಗಾರಿ, ಕಾೂನು ಮತ್ತು ಸುವ್ಯವಸ್ಥೆ, ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ವರ್ಗಾವಣೆ, 108 ಆ್ಯಂಬುಲೆನ್ಸ್ ನೌಕರರ ಮುಷ್ಕರ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿರೋಧ ಪಕ್ಷಗಳು ಸಜ್ಜಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics