ರಾಜಕೀಯ

ಸಚಿವ ಸಂಪುಟದಿಂದ ಪರಮೇಶ್ವರ್‌ ನಾಯ್ಕ್ ರನ್ನು ವಜಾಗೊಳಿಸಿ: ಪೂಜಾರಿ

Lingaraj Badiger
ಮಂಗಳೂರು: ಕೂಡ್ಲಗಿ ಡಿವೈಎಸ್‌ಪಿ ಅನುಪಮಾ ಶಣೈ ಅವರ ವರ್ಗಾವಣೆ ಮಾಡಿಸಿದ್ದು ನಾನೇ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾರ್ಮಿಕ ಸಚಿವ ಪರಮೇಶ್ವರ್‌ ನಾಯ್ಕ್  ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ  ಕಾಂಗ್ರೆಸ್‌ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ಶನಿವಾರ ಆಗ್ರಹಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೂಜಾರಿ, ಡಿವೈಎಸ್‌ಪಿಯ ವರ್ಗಾವಣೆಗೆ ಸಂಬಂಧಿಸಿದಂತೆ ಸಚಿವ ಪರಮೇಶ್ವರ್ ನಾಯಕ್ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. 
ಪರಮೇಶ್ವರ್ ನಾಯಕ್ ಅವರು ಕಾಂಗ್ರೆಸ್‌ ಪಕ್ಷಕ್ಕೆ ಕಳಂಕ ತರುವಂತಹ ಕೆಲಸ ಮಾಡಿದ್ದಾರೆ. ಅವರ ಹೇಳಿಕೆ ಖಂಡನೀಯ. ಇದು ಕಾಂಗ್ರೆಸ್‌ ಪಕ್ಷವನ್ನು ಬಲಿ ಕೊಡುವ ಕೆಲಸ. ಇಂಥವರಿಂದ ಸಂಪುಟಕ್ಕೆ ಕಳಂಕ. ಹೀಗಾಗಿ ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಪೂಜಾರಿ ಒತ್ತಾಯಿಸಿದರು.
ಹಿಂದೆ ನೀವು ಜನಾರ್ದನ ರೆಡ್ಡಿಯ ಬಳ್ಳಾರಿ ರಿಪಬ್ಲಿಕ್‌ ವಿರುದ್ದ ಪಾದಾಯಾತ್ರೆ ಮಾಡಿದ್ರಿ ,ಇದು ಅದಕ್ಕಿಂತ ಕಡಿಮೆಯೇ  ಎಂದು ಪಕ್ಷವನ್ನು ಪೂಜಾರಿ ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರು ಕೂಡಲೇ ಪರಮೇಶ್ವರ್‌ ನಾಯ್ಕ್ ಅವರನ್ನು ಸಂಪುಟದಿಂದ ಕೈ ಬಿಡುವ ಆತ್ಮಸ್ಥೈರ್ಯ ಪ್ರದರ್ಶಿಸಬೇಕು ಎಂದು ಪೂಜಾರಿ ಹೇಳಿದ್ದಾರೆ.
SCROLL FOR NEXT