ಅಂಬರೀಷ್ 
ರಾಜಕೀಯ

ಸಂಪುಟದಿಂದ ತಮ್ಮನ್ನು ಕೈಬಿಡುವ ಸೂಚನೆ ನೀಡಿದ ಅಂಬರೀಷ್!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನರಚನೆಗಾಗಿ ದೆಹಲಿಗೆ ತೆರಳಿದ್ದು, ಇತ್ತ ಮಂಡ್ಯದಲ್ಲಿ ವಸತಿ ಸಚಿವ ಅಂಬರೀಷ್ ಅವರು, ತಮ್ಮನ್ನು ಸಂಪುಟದಿಂದ...

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನರಚನೆಗಾಗಿ ದೆಹಲಿಗೆ ತೆರಳಿದ್ದು, ಇತ್ತ ಮಂಡ್ಯದಲ್ಲಿ ವಸತಿ ಸಚಿವ ಅಂಬರೀಷ್ ಅವರು, ತಮ್ಮನ್ನು ಸಂಪುಟದಿಂದ ಬಿಟ್ಟರೆ ತಮಗೆ ಯಾವುದೇ ಬೇಸರವಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ತಮ್ಮನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಅಂಬರೀಷ್, ನನ್ನನ್ನು ಸಚಿವನಾಗಿ ಮಾಡಿದ್ದು ಅವರೇ, ಈಗ ತೆಗೆಯುವುದು ಅವರೇ ಎಂದು ಪರೋಕ್ಷವಾಗಿ ತಮ್ಮನ್ನು ಕೈಬಿಡುತ್ತಿರುವ ಸೂಚನೆ ನೀಡಿದರು. 
ಸಚಿವನಾಗಿ ಮೂರು ವರ್ಷದ ನನ್ನ ಸಾಧನೆ ಏನು ಎಂಬುದು ಜನರೇ ಹೇಳಬೇಕು ಎಂದಿರುವ ಅಂಬರೀಶ್, ಯಾರನ್ನಾದರು ಶಿಕ್ಷಿಸಬೇಕು ಎಂದರೆ ತಪ್ಪು ಮಾಡಿರಬೇಕು. ನನ್ನಲ್ಲಿ ಪಿನ್ ಪಾಯಿಂಟ್ ತಪ್ಪು ಕಂಡು ಹಿಡಿಯಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ ಸಂಪುಟದಿಂದ ನನ್ನನ್ನು ಕೈಬಿಟ್ಟರೆ ಪರವಾಗಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಸಚಿವ ಸ್ಥಾನ ತ್ಯಜಿಸಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ.
ಸಂಪುಟ ವಿಸ್ತರಣೆ ಸಂಬಂಧ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಸಂಪುಟ ಪುನಾರಚನೆ ಬಗ್ಗೆ ಚರ್ಚಿಸುತ್ತಿದ್ದಾರೆ.   
ವಸತಿ ಸಚಿವ ಅಂಬರೀಷ್ ಸೇರಿದಂತೆ ಸಂಪುಟದಿಂದ ಸುಮಾರು 10ರಿಂದ 12 ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರು ಜೊತೆ ತಾಯಿ ಸ್ಥದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ